ವಿಜಯಪುರ : ನನ್ನ ಹೆಣ ಕೂಡಾ ಬಿಜೆಪಿ ಕಚೇರಿಗೆ ಹೋಗಲ್ಲ ಎಂದಿದ್ದ ಲಕ್ಷಣ ಸವದಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಹಾದಿಬೀದಿ ಹೆಣಗಳು ಸ್ಮಶಾನಕ್ಕೆ ಹೋಗಬೇಕು, ಅವು ಬಿಜೆಪಿ ಕಚೇರಿಗೆ ಯಾಕೆ ಬರಬೇಕು ಎಂದು ಲೇವಡಿ ಮಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಈ ಹಿಂದೆ ಅನಂತಕುಮಾರ್ ಬಿಜೆಪಿಗೆ ದುಡಿದಿದ್ದರು, ಅವರ ಪಾರ್ಥಿವ ಶರೀರ ಬಿಜೆಪಿ ಕಚೇರಿಗೆ ಬಂತು. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೌರವ ಸೂಚಿಸಲು ಬಿಜೆಪಿ ಕಚೇರಿಗೆ ಪಾರ್ಥಿವ ಶರೀರ ತರಲಾಗಿತ್ತು. ಹಾದಿ ಬೀದಿಯವರ ಹೆಣ ಸ್ಮಶಾನಕ್ಕೆ ಹೋಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಪ್ರಧಾನಿ ಆಗಿದ್ದ ಪಿ.ವಿ ನರಸಿಂಹರಾವ್ ಅವರ ಹೆಣ ಕೂಡಾ ಕಾಂಗ್ರೆಸ್ ಕಚೇರಿಗೆ ಬರಲಿಲ್ಲ. ಪಕ್ಷಕ್ಕಾಗಿ ತ್ಯಾಗ ಮಾಡಿದವರ ಹೆಣ ಮಾತ್ರ ಕಚೇರಿಗಳಿಗೆ ಬರುತ್ತವೆ. ಹಾದಿ ಬೀದಿಯವರ ಹೆಣ ಸ್ಮಶಾನಕ್ಕೆ ಹೋಗಬೇಕು ಎಂದು ಯತ್ನಾಳ್ ಹೇಳಿದರು.