ಬೆಳಗಾವಿ. ರಾಯಬಾಗ
ವರದಿ:ರಾಜಶೇಖರ ಶೇಗುಣಸಿ
ರಾಯಬಾಗ: ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗ ಮಹಾರಾಜರ ಮೃಹನ್ ಮಠದಲ್ಲಿ ಬುಧವಾರ ದಿ. 29 ರಿಂದ 31 ರ ವರೆಗೆ ಅವಧೂತ ಶ್ರೀ ಸಿದ್ದಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಅತೀ ವಿಜೃಂಭಣೆಯಿಂದ ಜರುಗಲಿದೆ.
ಬುಧವಾರ ದಿ. 29ರಂದು ಮಧ್ಯಾಹ್ನ 12 ಗಂಟೆಗೆ ಅಗ್ನಿ ಪುಟ ಮಾಡುವುದು. ಗುರುವಾರ ದಿ. 30 ರಂದು ಬೆಳಗ್ಗೆ ಶ್ರೀಮಠದ ಪೀಠಾಧೀಪತಿಗಳಾದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿಯವರ ಅಗ್ನಿ ಪ್ರವೇಶ. ಸಾಂಯಕಾಲ 6 ಗಂಟೆಗೆ ಭವ್ಯ ರಥೋತ್ಸವ. ಶುಕ್ರವಾರ ದಿ. 31 ರಂದು ಪ್ರತಿ ವರ್ಷದ ಸಾಂಪ್ರದಾಯದಂತೆ ವಿವಿಧ ರಾಜ್ಯಗಳ ಪೈಲ್ವಾನರುಗಳಿಂದ ಜಂಗೀ ನಿಕಾಲಿ ಕುಸ್ತಿಗಳು ಜರುಗುವವು. ಈ ಎಲ್ಲ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿಯವರು ವಹಿಸಲಿದ್ದಾರೆ ಎಂದು ಶ್ರೀಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.