ಸಿದ್ದೇಶ್ವರ ಶ್ರೀಗಳಿಗೆ ಮನಃಪೂರ್ವಕವಾಗಿ ನಮಿಸುತ್ತ

Share the Post Now

ವಿಜಯಪುರ

ಸಾವಿರ ಲಕ್ಷ ಸಂತರಲ್ಲಿ ದಿವ್ಯ ಬೆಳಕು ಮಿಂಚುತಿತ್ತು ವಿಜಯಪುರದ ಆಶ್ರಮದಲಿ ಜ್ಞಾನ ಮೊಳಕೆ ಒಡೆಯುತಿತ್ತು…..

ಜಾತಿ ಮಥ ಪಂಥ ಮರೆತ ದಿವ್ಯ ಜ್ಯೋತಿ ಬೆಳಕದು..
ಕತ್ತಲಿಂದ ಬೆಳಕಿನೆಡೆಗೆ ಕರೆದೊಯ್ಯುವ ಹೊಳಪದು….

ತತ್ವಶಾಸ್ತ್ರ ಕಲಿತ
ಲೋಕಜ್ಞಾನಿ ಲೋಕ ತಿದ್ದಿ ಹೊರಟರು.
ಬರಿ ತತ್ವಗಳನ್ನೆ ಸಾರಲಿಲ್ಲ ನುಡಿದಂತೆ ನಡೆದರು…

ಬಿಳಿಯ ಅಂಗಿ ಬಿಳಿಯ ಲುಂಗಿ ಸಾಧಾರಣ ಚಪ್ಪಲಿ ಕಣ್ಣಿಗೊಂದು ಚಾಳಿಸು ಇಷ್ಟೇ ಅವರು ಮಾಡಿದ ಆಸ್ತಿಯು… ನೋಡಿದೊಡನೆ ಮೂಡುತಿತ್ತು ಎಲ್ಲರಲ್ಲಿ ಭಕ್ತಿಯು….

ಅವರು ಬರುವ ಸುದ್ದಿ ಕೇಳಿ ಅಲ್ಲಿ ನೆರೆಯುತಿತ್ತು ಜನರ ದಂಡು ಕುಣಿಯುತಿತ್ತು
ಕಲ್ಲು ಮುಳ್ಳು ಬೆಟ್ಟ ಗುಡ್ಡ ಮಣ್ಣುಗಳಿಗೂ
ಜೀವ ಬಂದು ಪುಟಿವ ಚೆಂಡು…

ಸುದ್ದಿಯಾಗ ಬಯಸಲಿಲ್ಲ ಸದ್ದು ಮಾಡಿ ಹೊರಡಲಿಲ್ಲ ಪದ್ಮಶ್ರೀಯನು ಗೌರವದಿ ಮರಳಿ ಕೊಟ್ಟ ಸಂತರವರು..

ನಸು‌ ನಕ್ಕು ನುಡಿದರು
ಬೇಡ ನನಗೆ ಸನ್ಮಾನ
ಹೂವು ಹಾರ ಶಾಲುಗಳು.
ಬಯಸಲಿಲ್ಲ ಯಾರಿಂದಲೂ ಏನನ್ನು ಇರುವಾಗ
ಹಾಸಿಗೆಯ ಹಿಡಿದರುನೂ ನಿರಾಕರಿಸಿ ಚಿಕಿತ್ಸೆಯನ್ನು ಉಳಿಯಲಿಲ್ಲ ಮತ್ಯಾರ ಹಂಗಿನಲ್ಲೂ ದೇವರು….

ಸರ್ವ ಜಾತಿ ಧರ್ಮಗಳಿಗೆ ಜ್ಞಾನ ಬಯಸಿ ಬಂದವರಿಗೆ ಮುಕ್ತ ಅವರ ಆಶ್ರಮ
ಇದ್ದಷ್ಟು ದಿನವೇ ಬದುಕಿದರೂ ಸಾರ್ಥಕವಾಯಿತವರ ಬದುಕು.ಹುಡುಕಲಿಲ್ಲ ಇರುವಾಗ ಅದಕು ಇದಕು ಎದಕು

ಅವರು ಇನ್ನು ಇಲ್ಲ ಎಂದ ಕ್ಷಣ
ನೆರೆಯಿತಿಂದು ಭಕ್ತಗಣ
ಹರಿದು ಬಂದ ಗಣ್ಯರು.
ತೋಯುತಿಹವು ಕಣ್ಣೆಲ್ಲ ಬಿಕ್ಕುತ್ತಿರುವ ಧ್ವನಿಗಳು..

ಬರಿ ಸಂತರಷ್ಟೇ ಅಲ್ಲ ಅವರು ಜ್ಞಾನ ಕೊಟ್ಟ ಶ್ರೀಗಳು.
ಜೇಬಿರದ ಸಂತರಲ್ಲ
ನಡೆದಾಡುವ ದೇವರು
ನಡೆದಾಡುವ ದೇವರು….



*ದೀಪಕ ಶಿಂಧೇ,ಅಥಣಿ
*9482766018*

Leave a Comment

Your email address will not be published. Required fields are marked *

error: Content is protected !!