ಹಳ್ಳೂರ. ಹಳ್ಳದರಂಗ ಕೊ ಆಪ್ ಕ್ರೆಡಿಟ್ ಸೊಸಾಯಿಟಿಯು ಹಳ್ಳೂರ ಗ್ರಾಮದಲ್ಲಿ ಕಳೆದ 19 ವರ್ಷಗಳ ಕಾಲ ಜನರೊಡನೆ ಬೆರೆತು ಸಹಕಾರ ನೀಡುತ್ತಾ ಪ್ರಾಮಾಣಿಕವಾಗಿರುವದರಿಂದ ನಿಡಗುಂದಿ ಗ್ರಾಮದಲ್ಲಿ ಪ್ರಥಮ ಶಾಖೆ ಮಾಡಿದ್ದೂ ಹೆಮ್ಮೆಯ ಸಂಗತಿಯಾಗಿದೆ. ಬಡವ , ಅನ್ನ ಕೊಡುವ ರೈತ ಬಾಂಧವರಿಗೆ ಅನುಕೂಲವಾಗಿ ಉತ್ತರೊತ್ತರವಾಗಿ ಬೆಳೆಯಿಲೆಂದು ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
ನಿಡಗುಂದಿ ಗ್ರಾಮದಲ್ಲಿ ಶ್ರೀ ಹಳ್ಳದ ರಂಗನ ಕೊ ಆಫ್ ಕ್ರೆಡಿಟ್ ಸೊಸಾಯಿಟಿ ಹಳ್ಳೂರ ಪ್ರಥಮ ಶಾಖೆ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಂಘ ಸಂಸ್ಥೆ ಬೆಳೆಯಬೇಕಾದರೆ ಸಹಕಾರ ಅಗತ್ಯ. ಸಾಲಗಾರರು ಸಾಲದ ರೂಪದ ಹಣವನ್ನು ದುರುಪಯೋಗ ಮಾಡಿಕೊಳ್ಳದೆ ಕೊಟ್ಟ ಮಾತಿನಂತೆ ಸದ್ಬಳಕೆ ಮಾಡಿಕೊಂಡು ಜೀವನ ಆರ್ಥಿಕ ಮಟ್ಟವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ಹೇಳಿದರು.
ಉದ್ಘಾಟಕರಾದ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ ಬ್ಯಾಂಕಿನ ಸಿಬ್ಬಂದಿಗಳು ಉತ್ತಮ ಬಾಂಧವ್ಯ ಬೆಳೆಸಿ ತಮ್ಮ ನಿಯಮದ ಪ್ರಕಾರ ಸಾಲಗಾರರಿಗೆ ಹೆದರದೆ ಸಾಲದ ಸೌಲಭ್ಯ ಒದಗಿಸಬೇಕು. ಜನರೊಡನೆ ಬೆರೆತು ಸಹಕಾರ ನೀಡುವ ಸಂಘ ಸಂಸ್ಥೆಗಳು ಮಾತ್ರ ಹೆಮ್ಮರವಾಗಿ ಬೆಳೆಯುತ್ತವೆ ಇನ್ನು ಹೆಚ್ಚು ಶಾಖೆಗಳಾಗಲಿ ಎಂದು ಶುಭ ಹಾರೈಸಿದರು.ಪ್ರಾರಂಭದಲ್ಲಿ ಪೂಜಾ ಸಮಾರಂಭವವು ನೆರವೇರಿತು. ಈ ಸಮಯದಲ್ಲಿ ಹಳ್ಳದರಂಗ ಬ್ಯಾಂಕಿನಅಧ್ಯಕ್ಷ ಶಿವಪ್ಪ ಕೌಜಲಗಿ.ಉಪಾಧ್ಯಕ್ಷ ಮಲ್ಲಪ್ಪ ತೇರದಾಳ. ಶಂಕರಯ್ಯ ಹೀರೆಮಠ.ಸಿದರಾಯ ಪೂಜೇರಿ. ಕಲ್ಲಪ್ಪ ಹುಬ್ಬಳ್ಳಿ.ಬಸವರಾಜ್ ರಬಕವಿ.ಕೆಂಪಣ್ಣ ಹುಬ್ಬಳ್ಳಿ. ಬಸಪ್ಪ ಮೇಲಪ್ಪಗೊಳ.ಬಸಪ್ಪ
ತೆರದಾಳ.ಲಕ್ಷ್ಮಣ5ಸಪ್ತಸಾಗರ.ಆನಂದ ಸಂತಿ. ಸಿದ್ಧಪ್ಪ ಮಹಾರಾಜಪ್ಪಗೊಳ. ಮುರಿಗೆಪ್ಪ ಮಾಲಗಾರ. ಗಿರಮಲ್ಲ ಸಂತಿ.ಸಿದ್ದು ಹುಕ್ಕೇರಿ. ಹನಮಂತ ಅಥಣಿ. ರಾಜು ಗವಾಣಿ. ಶೇಖರ ಹೀರೆಮಠ. ಪ್ರಕಾಶ ಅಕ್ಕಿಮರಡಿ. ರಮೇಶ ಪೋತದಾರ.ಬಸವರಾಜ ಅರಳಿಮಟ್ಟಿ.ಸುನೀತಾ ಹಿರೇಮಠ ಸೇರಿದಂತೆ ಬ್ಯಾಂಕಿನ ಸಿಬ್ಬಂದಿಗಳು ಸಾರ್ವಜನಿಕರಿದ್ದರು.