ಪಟ್ಟಣದ ಗುಡ್ಡದ ಮೇಲಿರುವ ಕ್ರೈಸ್ತರ ಶಿಲುಬೆಯ ಶಿಲುಬೆ ಕಟ್ಟೆ ಧ್ವಂಸಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದೂರಿನ ಮೂಲಕ ಕ್ರೈಸ್ತ ಗುರುಗಳಾದ ಭಗವಂತರಾಜ ಹಾಗೂ ಯೇಸುರಾಜ್ ಆಗ್ರಹಿಸಿದ್ದಾರೆ.
ಸುಮಾರು ೬೦ ರಿಂದ ೭೦ ವರ್ಷಗಳಿಂದ ಪಟ್ಟಣದ ಗುಡ್ಡದಲ್ಲಿ ಎಲ್ಲಾ ಜಾತಿ ಜನಾಂಗದವರು ಭಕ್ತಿಯಿಂದ ಕೈಮುಗಿದು ತಮ್ಮ ಹರಕೆಗಳನ್ನು ತಿರಿಸಿಕೊಂಡು ತಮ್ನ ಜೀವನದಲ್ಲಿ ಬದಲಾವಣೆ ಕಂಡ ಉದಾಹರಣೆಗಳು ಇವೆ, ಇಂತಹ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಬಾವೈಕ್ಯತೆಗೆ ದಕ್ಕೆ ಉಂಟು ಮಾಡುತ್ತಿದ್ದಾರೆ, ಪಟ್ಟಣದ ಪವಿತ್ರ ಹೋಲಿ ಕ್ರಾಸ್ ಹಾಗೂ ಮೆಥೊಡಿಸ್ಟ್ ದೇವಾಲಯಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನಿನ ಕ್ರಮಕೈಗೊಳ್ಳಬೇಕು ವಿಳಂಬ ಮಾಡಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕ್ರೈಸ್ತ ಸಮುದಾಯದ ಗುರುಗಳು ಹಾಗೂ ಭಕ್ತಾಧಿಗಳು ದೂರಿನ ಮೂಲಕ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪವಿತ್ರ ಹೋಲಿ ಕ್ರಾಸ್ ಚರ್ಚಿನ ಫಾಧರ್ ಭಗವಂತರಾಜು, ಯೇಸುರಾಜ, ಮತ್ತು ಎರಡು ಸಭೆಯ ಸಭಾ ಪಾಲನ ಸಮಿತಿಯ ಸದಸ್ಯರು ಮತ್ತು ದಲಿತ ಸಂಘಟನೆ ಮುಖಂಡರು ಇದ್ದರು.