ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕೊಟ್ಟ ಶ್ರೀಮತಿ ರೋಹಿಣಿ ಬಾಬಾ ಸಾಹೇಬ್ ಪಾಟೀಲ್

Share the Post Now

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ ಹಾಗೆ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಕೂಡ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು

ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ್ ಪಾಟೀಲ ಅವರ ಪತ್ನಿಯಾದ ಶ್ರೀಮತಿ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ತಿಗಡಿ ಗ್ರಾಮದಲ್ಲಿ ಕರ್ನಾಟಕ ಸರಕಾರದ ಗ್ಯಾರಂಟಿಗಳಲ್ಲಿ ಒಂದಾದ ನಾಲ್ಕನೆ ಗ್ಯಾರಂಟಿಯಾದ ಮಹಿಳಾ ಸಬಲೀಕರಣಕ್ಕಾಗಿ ಕರ್ನಾಟಕ ಸರಕಾರ ತಂದಂತಹ ಗೃಹಲಕ್ಷ್ಮಿ ಯೋಜನೆಯನ್ನು ಉದ್ದೇಶಿಸಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಬಂದಿರುವಂತ ಮಹಿಳೆಯರನ್ನು ಉದ್ದೇಶಿ ಮಾತನಾಡಿದ್ದರು ವಿಶೇಷವೆಂದರೆ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿದೆ ಆ ಖುಷಿಯನ್ನು ತಾಳಲಾರದೆ ಇಂದು ಬಾನಿಗೆಲ್ಲ ಹಬ್ಬ ಎಂಬ ಹಾಡನ್ನು ಹಾಡಿ ಮಹಿಳೆಯರ ಗಮನ ಸೆಳೆದರು ಇವತ್ತಿನ ದಿನ ನಮಗೆ ಹಬ್ಬದ ವಾತಾವರಣ ತಂದುಕೊಟ್ಟಿದೆ

ಈ ಯೋಜನೆಯನ್ನು ಎಲ್ಲರೂ ಕೂಡ ಸದುಪಯೋಗ ಪಡಿಸಿಕೊಳ್ಳಬೇಕೆಂದು ಬಂದಂತ ಮಹಿಳೆಯರಿಗೆ ತಿಳಿಸಿ ಹೇಳಿದರು ಹಾಗೆ ಈ ಯೋಜನೆ ಇಷ್ಟೊಂದು ಯಶಸ್ವಿಯಾಗಬೇಕೆಂದರೆ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರ ಪಾತ್ರ ತುಂಬಾನೇ ಮುಖ್ಯವಾಗಿದೆ ಎಂದು ಹೇಳಿದರು ಇದುವರೆಗೂ ಹೆಸರನ್ನು ನೋಂದಾಯಿಸದೆ ಇರುವಂತ ಮಹಿಳೆಯರು ಕೂಡ ಕರ್ನಾಟಕ ಒನ್ ಗ್ರಾಮ ಒನ್ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ನಾಲ್ಕು ಯೋಜನೆಗಳು ಕೂಡ ರಾಜ್ಯದ್ಯಂತ ಯಶಸ್ವಿಯಾಗಿದೆ ರಾಜ್ಯ ಸರ್ಕಾರ ಕೊನೆಯ ಯೋಜನೆ ಕೂಡ ಆದಷ್ಟು ಬೇಗನೆ ಜಾರಿಗೆ ಬರಲಿದೆ ಎಂದು ಹೇಳಿದರು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಎಲ್ಲಾ ಸರ್ವ ಸದಸ್ಯರು ಕೂಡ ಭಾಗವಹಿಸಿದ್ದರು ಹಾಗೂ ಗ್ರಾಮದ ಮುಖಂಡರು ಕೂಡ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Comment

Your email address will not be published. Required fields are marked *

error: Content is protected !!