ಹಳ್ಳೂರ
ಗ್ರಾಮದ ಶಿವಶಂಕರ ನಗರದ ಶ್ರೀ ಪಾಂಡುರಂಗ ಸಪ್ತಾಹ ನಿಮಿತ್ಯ ಏರ್ಪಡಿಸಿದ ರಂಗೋಲಿ ಸ್ಪರ್ಧೆಯಲ್ಲಿ ಮುಗಳಖೋಡ ನೀರಲಖೋಡಿ ತೋಟದ ಶ್ರೀ ಸಿದ್ದರಾಮೇಶ್ವರ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ ಸ್ನೇಹಾ ಯಡವಣ್ಣವರ ಹಾಗೂ ಶಿಲ್ಪಾ ಅಂಗಡಿ ಪ್ರಥಮ. ಅಂಜಲಿ ಮೇಲಪ್ಪಗೋಳ ದ್ವೀತಿಯ. ಸಾನ್ವಿ ಬಾಬಣ್ಣವರ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಪಂಡರಪೂರ ಏಕನಾಥ ಮಹಾರಾಜರ ಮಾತನಾಡಿ ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಜೊತೆಗೆ ಸತ್ಸಂಗ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೆ ಜೀವನವು ಉದ್ಧಾರವಾಗುತ್ತದೆ.ಗುರು ಹಿರಿಯರಿಗೆ ತಂದೆ ತಾಯಿಯರಿಗೆ ಶಿರ ಬಾಗಿ ನಡೆಯಬೇಕು ಕೇವಲ ವಿದ್ಯೆ ಇದ್ದರೆ ಸಾಲದು ಸಂಸ್ಕಾರ ಬಹಳ ಮಹತ್ವದ್ದು ಎಂದು ಹೇಳಿದರು.
ಯಪಂಡರಪೂರ ಶ್ರೀ ಏಕನಾಥ ಮಹಾರಾಜರು ಹಾಗೂ ಶಿವಶಂಕರ ನಗರ ಶಾಲೆಯ ಪ್ರಧಾನ ಗುರುಗಳಾದ ಆರ್ ಕೆ ಮೇಲ್ಗಡೆ ಸರ ಇನ್ನಿತರರು ಬಹುಮಾನ ನೀಡಿ ಆಶೀರ್ವದಿಸಿದರು.ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಪಿ ಎಂ ಕುಲಿಗೋಡ ಪ್ರಧಾನ ಗುರುಗಳಾದ ಎನ್ ಬಿ ಅರಭಾವಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಹಾರೈಸಿದರು. ಸಿದ್ದು ಹುಲಗಬಾಳಿ ಸಂತರು.ಗಿರೀಶ ತಳವಾರ. ಶ್ರೀಶೈಲ ಕೂಲಿಗೊಡ. ಬಿ ಜೆ ಪಾರ್ಥನಹಳ್ಳಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು.