ವರದಿ: ಸಂಗಮೇಶ ಹಿರೇಮಠ.
ಬೆಳಗಾವಿ.ಮುಗಳಖೋಡ: ಪಟ್ಟಣದ ಶ್ರೀ ಶಿವಶಕ್ತಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸ್ನೇಹಾ ಅಶೋಕ್ ಯಡವನ್ನವರ 2023-24ನೇ ಸಾಲಿನ ರಾಯಬಾಗ ತಾಲೂಕಾ ಮಟ್ಟದ ಕ್ರೀಡಾಕೂಟದ ಬಾಲಕಿಯರ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ವಿದ್ಯಾರ್ಥಿನಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ರಮೇಶ್ ಖೇತಗೌಡರ ಶಾಲು ಹೊದಿಸಿ ಸತ್ಕರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಶ್ರೀ ಎಸ್.ಬಿ. ಕಡಕಬಾವಿ, ಮುಖ್ಯೋಪಾಧ್ಯಾಯ ಶ್ರೀ ಏ.ಕೆ.ಕಾಮಗೌಡರ, ಶ್ರೀ.ಎ..ಬಿ. ದಾವಣಿ, ಶ್ರೀ.ಪಿ.ಜಿ.ಕಡಕೋಳ, ದೈಹಿಕ ಶಿಕ್ಷಕ ಶ್ರೀ ಅಣ್ಣಾಸಾಬ ಕಡಕಬಾವಿ, ಶ್ರೀಮತಿ ಎಂ.ಎಸ್. ಶಾಸ್ತ್ರಿ, ಶ್ರೀಮತಿವಾಯ್.ಎಸ್. ಎಲಿಗೋಡ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.