ಬೆಳಗಾವಿ.
ಕುಡಚಿ
ಕಳೆದ ಎರಡು ದಿನಗಳ ಹಿಂದೆ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಕಚೇರಿಗೆ ನ್ಯಾಯ ಕೇಳಲು ಬಂದಂತಹ 72 ವರ್ಷದ ಅಜ್ಜಿಗೆ “ಏ ನಡಿ ಇಲ್ಲೇನ್ ಫರಾಳಗಿರಿ ಮಾಡಾಕ್ ಕುಂತಿ ಏನ್” ಎಂದು ಅಸಭ್ಯವಾಗಿ ಅಗೌರವದಿಂದ ಮಾತನಾಡಿ ಕಚೇರಿಯಿಂದ ಹೋರ ಹೋಗಲು ಹೇಳಿದ ಚಿಕ್ಕೋಡಿಯ ಸಹಾಯಕ ಆಯುಕ್ತ (ಎ.ಸಿ) ಸುಭಾಷ ಸಂಪಗಾವಿ ಇವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ಶ್ರೀರಾಮಸೇನೆ ಹಿಂದೂಸ್ತಾನ ರಾಯಬಾಗ ತಾಲೂಕಾಧ್ಯಕ್ಷ ಅಭಿಷೇಕ ನರಸಗೌಡರ ಮನವಿ ಮಾಡಿದ್ದಾರೆ.
ಕರ್ನಾಟಕ ಸರ್ಕಾರವು ಹಿರಿಯ ನಾಗರಿಕರಿಗೆ ಸರ್ಕಾರಿ ಕಚೇರಿಗಳಲ್ಲಿ ಸರಿಯಾದ ಗೌರವ ನೀಡಿ ಅವರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವಂತೆ ಕಟ್ಟು ನಿಟ್ಟಿನ ಸೂಚನೆಗಳನ್ನು ಹೊರಡಿಸಿದೆ. 2021-22 ರಲ್ಲಿ ಹೋರಡಿಸಲಾದ ಸುತ್ತೋಲೆಗಳ ಪ್ರಕಾರ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರು ಸರ್ಕಾರಿ ಕಚೇರಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರೊಂದಿಗೆ ಗೌರವದಿಂದ ವರ್ತಿಸಬೇಕು ಎಂದು ಕಡ್ಡಾಯ ನಿರ್ದೇಶನವಾಗಿದೆ.
1) ಗೌರವಯುತ ವರ್ತನೆ ಹಿರಿಯ ನಾಗರಿಕರಿಗೆ ಸ್ವಾಗತ ಸಹಾಯ ಮತ್ತು ಸನ್ಮಾನ ತೋರಿಸಬೇಕು.
2) ಆಸನದ ವ್ಯವಸ್ಥೆ ಅವರು ನಿಲ್ಲದೇ ಕುಳಿತುಕೊಳ್ಳುವಂತೆ ಕುರ್ಚಿ ಅಥವಾ ಬೆಂಚ್ ಒದಗಿಸಬೇಕು.
3) ಆದ್ಯತೆ ಮೌಲ್ಯ ಅವರ ಅರ್ಜಿಗಳು ಮತ್ತು ಕೆಲಸಗಳನ್ನು ಮೊದಲು ಪರಿಶೀಲಿಸಿ ತ್ವರಿತ ನಿವಾರಣೆ ಮಾಡಬೇಕು.
4) ಮಾಹಿತಿ ಪಾರದಾರ್ಶಕತೆ ಅವರಿಗೆ ಸಂಬಂಧಿಸಿದ ಕ್ರಮಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು.
ಇಷ್ಟೆಲ್ಲಾ ನಿರ್ದೇಶನ ಇದ್ದರು ಸಹ ಯಾವುದೇ ರೀತಿ ಪಾಲನೆ ಮಾಡದೇ ಚಿಕ್ಕೋಡಿ ಎ.ಸಿ. ಸುಭಾಷ ಸಂಪಗಾಂವಿ ಕಚೇರಿಗೆ ನ್ಯಾಯ ಕೇಳಲು ಬಂದ 72 ವರ್ಷದ ಅಜ್ಜಿಗೆ “ಏ ನಡಿ ಇಲ್ಲೇನ್ ಫರಾಳಗಿರಿ ಮಾಡಾಕ್ ಕುಂತಿ ಏನ್” ಎಂದು ಅಗೌರವದಿಂದ ಮಾತನಾಡಿ ಕಚೇರಿಯಿಂದ ಹೊರ ಹೋಗಲು ಹೇಳಿರುತ್ತಾರೆ. ಹಿರಿಯ ನಾಗರಿಗೆ ಅಗೌರವದಿಂದ ಮಾತನಾಡಿದ ಈ ಅಧಿಕಾರಿಯ ವಿರುದ್ಧ (ಸುತ್ತೋಲೆ ಸಂಖ್ಯೆ :ಸಿಆಸುಇ(ಅಸು)78 ಕತವ 2021 ಸರ್ಕಾರದ ಸುತ್ತೋಲೆಯನ್ನು ಪಾಲಿಸದೇ ಇರುವ ಹಾಗೂ ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಎ.ಸಿ.ಯ ವಿರುದ್ಧ ಈ ಕೂಡಲೇ ಶೀಸ್ತು ಕ್ರಮ ಜರುಗಿಸಿ ತಕ್ಷಣದಿಂದ ಅಮಾನತ್ತು ಮಾಡುವಂತೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.





