ಸೋಮೈಯಾ ಶಾಲೆಯ 13 ಬಾಲಕಿಯರು ಜಂಪ್ ರೋಪನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ವರದಿ: ಸಂತೋಷ ಮುಗಳಿ
ಸಮೀರವಾಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಫೆ 08 ಮತ್ತು 9 ರಂದು ನಡೆದ ಸನ್ 2024-25 ನೇ ಸಾಲಿನ ರಾಜ್ಯ ಮಟ್ಟದ ಜಂಪ್ ರೋಪ ಸ್ಪರ್ಧೆಯಲ್ಲಿ ಬಾಗಲಕೋಟೆ ಜಿಲ್ಲೆಯಿಂದ ಸೋಮೈಯಾ ಶಿಶು ನಿಕೇತನ ಪ್ರಾಥಮಿಕ ಹಾಗೂ ವಿನಯ ಮಂದಿರ ಪ್ರೌಢಶಾಲೆಯ 24 ಜನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಜಂಪ್ ರೋಪ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು,ಅದರಲ್ಲಿ 13 ಬಾಲಕಿಯರು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಫೆ.08 ಶನಿವಾರದಂದು ಪ್ರಾಥಮಿಕ ವಿಭಾಗದ ಜಂಪ್ ರೋಪನಲ್ಲಿ ಅಶ್ವಿನಿ ಬನಹಟ್ಟಿ 02 ಚಿನ್ನ, ಸ್ಪಂದನಾ ಅಮರಾಪೂರ, ಸಂಜನಾ ಕಿಲ್ಲೇದಾರ, ಅನಿತಾ ಅಂಕೋಶಿ, ಲಕ್ಷೀ ಸೌದತ್ತಿ ತಲಾ ಒಂದೊಂದು ಚಿನ್ನದ ಪದಕ ಹಾಗೂ ಪರಹಾನಾಜ ನದಾಫ ಒಂದು ಕಂಚಿನ ಪದಕ ಹೀಗೆ ಆರು ಬಾಲಕಿಯರು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಗಳು ಹಾಗೂ ಒಂದು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಫೆ.09 ರವಿವಾರದಂದು ಪ್ರೌಢಶಾಲೆಯ ವಿಭಾಗದಲ್ಲಿ ಸಿಮ್ರಾನ ಅತ್ತಾರ 1 ಚಿನ್ನ, 2 ಬೆಳ್ಳಿ , ಸಹನಾ ಸನಸಿದ್ದ 1 ಚಿನ್ನ 1 ಬೆಳ್ಳಿ, ಸಪ್ನಾ ಹುಕ್ಕೇರಿ 2 ಚಿನ್ನ 1 ಬೆಳ್ಳಿ, ಲಿಪಿಕಾ ಮೂಡಲಗಿ 1 ಚಿನ್ನ 1 ಬೆಳ್ಳಿ, ಅಕ್ಷತಾ ಶಿಂದೆ, ಪ್ರೀಯಾ ಶಿಂದೆ, ಲಕ್ಷೀ ಕಂಬೋಗಿ ತಲಾ ಒಂದೊಂದು ಚಿನ್ನ ಹಾಗೂ ಪ್ರೀತಿ ಕೌಜಲಗಿ, ಅಣ್ಣಪೂರ್ಣಾ ಲಮಾಣಿ ತಲಾ ಒಂದೊಂದು ಕಂಚಿನ ಪದಕಗಳು ಹೀಗೆ ಏಳು ಬಾಲಕಿಯರು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ, ಆರು ಬೆಳ್ಳಿ ಪದಕ ಹಾಗೂ 02 ಕಂಚಿನ ಪದಕ ಪಡದೆಕೊಂಡು ಅವಳಿ ಶಾಲೆಯ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ,
” ನಮ್ಮ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಪ್ರಥಮ ಬಾರಿಗೆ ಆಯ್ಕೆಯಾಗಿದ್ದು ಖುಷಿ ತಂದಿದೆ.
ಗ್ರಾಮೀಣ ಪ್ರದೇಶದ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿದರೆ, ಇಂತಹ ಸಾಧನೆ ಮಾಡಲು ಸಾಧ್ಯ ಎಂದು ಡಾ. ವಿಜಯಕುಮಾರ ಕಣವಿ ಹೇಳಿದರು. ಬಳಿಕ ಮಕ್ಕಳಿಗೆ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.”
ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕರಾದ ಬಿ ಕೆ ಕುರಾಡೆ ಹಾಗೂ ಮಹಾಂತೇಶ ಪುರವಂತ ತರಬೇತಿ ನೀಡಿದ್ದಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಗೋದಾವರಿ ಸಕ್ಕರೆ ಕಾರ್ಖಾನೆಯ ನಿರ್ವಾಹಕ ನಿರ್ದೇಶಕ ಬಿ ಆರ ಬಕ್ಷಿ ಹಾಗೂ ಸರ್ವ ಸದಸ್ಯರು, ಪ್ರಾಥಮಿಕ ಶಾಲೆಯ ಮುಖ್ಯಗುರು ಬಿ ಎಸ್ ಶಿಳ್ಳೀನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿವೇಕಾನಂದ ಭಜಂತ್ರಿ ಹಾಗೂ ಅವಳಿ ಶಾಲೆಯ ಸಿಬ್ಬಂದಿಯವರು ಅಭಿನಂದಿಸಿದ್ದಾರೆ .
