– ದಕ್ಷಿಣ ಭಾರತ ಹಿರಿಯರ ಕುಸ್ತಿ ಫ್ರೀಸ್ಟೈಲ್ ಪುರುಷರ ವಿಭಾಗ, ಮಹಿಳೆಯರು ಮತ್ತು ಗ್ರೀಕೋರೋಮನ್ ಪುರುಷರ ವಿಭಾಗದ ನ್ಯಾಷನಲ್ ಚಾಂಪಿಯನ್ ಷಿಪ್ ನಲ್ಲಿ ಕರ್ನಾಟಕಕ್ಕೆ 23 ಚಿನ್ನ 4 ಬೆಳ್ಳಿ ಮತ್ತು 3 ಕಂಚಿನ ಪದಕ
ಬೆಂಗಳೂರು,
ತಮಿಳುನಾಡು ಅಮಚೂರ್ ವ್ರೆಸ್ಲಿಂಗ್ ಅಸೋಸಿಯೇಷನ್ ನಿಂದ ತಮಿಳುನಾಡಿನ ಈರೋಡ್ ನಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ಕುಸ್ತಿಪಟುಗಳು ಪಾರಮ್ಯ ಮೆರೆದಿದ್ದಾರೆ.
ಕರ್ನಾಟಕದ ನಿಂಗಪ್ಪ 55 ಕೆಜಿ ಗ್ರೀಕರಮನ್ ವಿಭಾಗದಲ್ಲಿ, 60 ಕೆಜಿ ಭಾಗದಲ್ಲಿ ಸುಲೇಮಾನ್ ತೇವಕರಿ, 63 ಕೆಜಿ ವಿಭಾಗದಲ್ಲಿ ಈಶ್ವರ್ ಡೆಂಗಿ, 67 ಕೆಜಿ ಬಾಗದಲ್ಲಿ ದಾನೇಶ್ ಗಲಿಗಲಿ, 77 ಕೆಜಿ ವಿಭಾಗದಲ್ಲಿ ಭೀಮ ಲಿಂಗೇಶ್ವರ, 82 ಕೆಜಿ ವಿಭಾಗದಲ್ಲಿ ಪರಮಾನಂದ ಭುಜಂಗೋಡ್, 87 ಕೆಜಿ ವಿಭಾಗದಲ್ಲಿ ವಿನಾಯಕ ಆದಿತ್ಯ, 97 ಕೆಜಿ ವಿಭಾಗದಲ್ಲಿ ಪ್ರವೀಣ್ ಹಿಪ್ಪರಗಿ ಹಾಗೂ 130 ಕೆಜಿ ವಿಭಾಗದಲ್ಲಿ ಬಸವರಾಜ್ ಅವರು ಚಿನ್ನದ ಪದಕ ಗೆದ್ದಿದ್ದಾರೆ.
ಪ್ರೈಸ್ಟೈಲ್ ನ 65 ಕೆಜಿ ವಿಭಾಗದಲ್ಲಿ ಕೊರವರ ಸಂಜೀವ, 70 ಕೆಜಿ ವಿಭಾಗದಲ್ಲಿ ಮಹೇಶ್ ಲಂಗೋಟಿ, 74 ಕೆಜಿ ವಿಭಾಗದಲ್ಲಿ ರೋಹನ್ ನಾರಾಯಣಗವಾಡೆ, 79 ಕೆಜಿ ವಿಭಾಗದಲ್ಲಿ ಮಂಜುನಾಥ್ ಗೌಡಪ್ಪನವರ್, 86 ಕೆಜಿ ವಿಭಾಗದಲ್ಲಿ ಸದಾಶಿವ ನಲವಡೆ, 92 ಕೆಜಿ ವಿಭಾಗದಲ್ಲಿ ಬಸವರಾಜ್ ಪಾಟೀಲ್, 97 ಕೆಜಿ ವಿಭಾಗದಲ್ಲಿ ಸುನಿಲ್ ಚಿನ್ನದ ಪದ ಗೆದ್ದಿದ್ದು, 57 ಕೆಜಿ ವಿಭಾಗದಲ್ಲಿ ಸೂರಜ್ ಅಣ್ಣಿಗೇರಿ, 60 ಕೆಜಿ ವಿಭಾಗದಲ್ಲಿ ಬಸವರಾಜ್ ಸಂತಿ, 125 ಕೆಜಿ ವಿಭಾಗದಲ್ಲಿ ಕಾಮೇಶ್ ಪಾಟೀಲ್ ಬೆಳ್ಳಿ ಪದಕ ಗಳಿಸಿದ್ದಾರೆ.
ಮಹಿಳೆಯರ ವಿಭಾಗದಲ್ಲಿ 50 ಕೆ.ಜಿ. ವಿಭಾಗದಲ್ಲಿ ಗೋಪವ್ವ ಖೋಡ್ಕಿ, ಸೋನಿಯಾ ಜಾಧವ್, 55 ಕೆಜಿ ವಿಭಾಗದಲ್ಲಿ ಐಶ್ವರ್ಯ ಕರಿಗಾರ್, 57 ಕೆ.ಜಿ. ವಿಭಾಗದಲ್ಲಿ ಶ್ರೀ ರಕ್ಷಾ ಕೆ ಆರ್, 59 ಕೆ.ಜಿ. ವಿಭಾದಲ್ಲಿ ಗಾಯತ್ರಿ ಸುತಾರ್, 62 ಕೆ.ಜಿ. ವಿಭಾದಲ್ಲಿ ರಕ್ಷಿತಾ ಸೂರ್ಯವಂಶಿ, 65 ಕೆ.ಜಿ. ವಿಭಾದಲ್ಲಿ ಸುಜಾತಾ ಪಾಟೀಲ್, 68 ಕೆ.ಜಿ. ವಿಭಾಗದಲ್ಲಿ ಲೀನಾ ಸಿದ್ದಿ ಚಿನ್ನದ ಪದ ಗೆದ್ದಿದ್ದು, 72 ಕೆಜಿ ವಿಭಾಗದಲ್ಲಿ ಅಸ್ನಾ ಸರೀನ್, 76 ಕೆ.ಜಿ. ವಿಭಾಗದಲ್ಲಿ ಮೇಘನಾ ಕಂಚಿನ ಪದಕ ಗಳಿಸಿದ್ದಾರೆ.
ಈ ವಿಜೇತ ಕುಸ್ಥಿಪಟುಗಳಿಗೆ ಕರ್ನಾಟಕ ಕುಸ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಬಿ.ಗಣರಂಜನ್ ಶೆಟ್ಟಿ ರವರು ಪದಕ ತೊಡಿಸಿ ಸಮಗ್ರ ಪ್ರಶಸ್ತಿಯನ್ನು ನೀಡುವ ಮೂಲಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಭಾರತ ಕುಸ್ಥಿಸಂಘದ ಕಾರ್ಯಧರ್ಶಿಗಳಾದ ವಿ.ಎನ್ ಪ್ರಸೂದ್, ಜಂಟಿ ಕಾರ್ಯದರ್ಶಿಗಳಾದ ಲೋಗನಾದನ್, ಕರ್ನಾಟಕ ಕುಸ್ಥಿ ಸಂಘದ ಕಾರ್ಯಧರ್ಶಿ ಜೆ.ಶ್ರೀನಿವಾಸ, ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಜಂಟಿ ಕಾರ್ಯಧರ್ಶಿ ಕೆ.ಕುಮಾರ್ ಹಾಗೂ ತಾಂತ್ರಿಕ ಸಮಿತಿಯ ಮುಖ್ಯಸ್ಥರಾದ ವಿನೋದ್ ಕುಮಾರ್ ಕೆ ರವರು ಉಪಸ್ಥಿತರಿದ್ದರು.