ಸದನದ ಸಮಾಚಾರ ವಿವರಿಸಿದ ಸಭಾಪತಿಗಳು

Share the Post Now



ಬೆಳಗಾವಿ

ಬೆಳಗಾವಿಯಲ್ಲಿ 11 ಬಾರಿ ಅಧಿವೇಶನ ನಡೆದಿದ್ದು, ಬೆಳಗಾವಿಯ ಈ ಚಳಿಗಾಲದ ಒಂಬತ್ತು ದಿನದ ಅಧಿವೇಶನ ಉತ್ತಮವಾಗಿ ನಡೆದಿದೆ..

ಕಲಾಪಗಳು ಉತ್ತಮವಾಗಿ ನಡೆದಿವೆ, ಹಲವಾರು ಕಾರ್ಯಗಳ ಒತ್ತಡದಿಂದ ಒಂದು ದೀನ ಮೊದಲೇ ಅಧಿವೇಶನ ಮೊಟಕುಗೊಳಿಸಲಾಗಿದೆ..

ಅಧಿವೇಶನ ನಡೆಯಲು ಅಧಿಕಾರ ವರ್ಗ ಹಾಗೂ ಮಾಧ್ಯಮದವರು ಸಹಕಾರ ನೀಡಿದ್ದಾರೆ ಎಂದರು..

ಒಟ್ಟು 13 ಮಸೂದೆ ಮಂಡಿಸಲಾಗಿ 11 ಅಂಗೀಕರಿಸಲಾಗಿದೆ, 41 ಗಂಟೆ,20 ನಿಮಿಷ ಅಧಿವೇಶನ ನಡೆದಿದೆ ಎಂಬ ಮಾಹಿತಿ ನೀಡಿದರು…

ಅತ್ತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಕಾಂಗ್ರೆಸ್ಸಿನ ಮಾನ್ಯ ದೇಶಪಾಂಡೆ ಅವರಿಗೆ ನೀಡಿರುವುದು ಈ ಅಧಿವೇಶನದ ವಿಶೇಷವಾಗಿತ್ತು,

150 ಪ್ರಶ್ನೆಗಳಿಗೆ 140, ಪ್ರಶ್ನೆಗಳಿಗೆ ಉತ್ತರ ನೀಡಿದ್ದೇವೆ, ಶೂನ್ಯ ವೇಳೆಯಲ್ಲಿ ,40ಪ್ರಶ್ನೆಗೆ ಉತ್ತರಿಸಿದ್ದಾರೆ..

ಈ ವರ್ಷ ಸುವರ್ಣ ವಿಧಾನ ಸಭಾ ಸಭಾಂಗಣದಲ್ಲಿ ಹಲವಾರು ಪ್ರಮುಖರ ಫೋಟೋ ಅನಾವರಣ ಮಾಡಿದ್ದು ವಿಶೇಷ.

ಸುವರ್ಣಸೌಧದ ಎದುರಿಗೆ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ, ಮಹಾತ್ಮ ಗಾಂಧಿ ಪ್ರತಿಮೆಯ ಭೂಮಿ ಪೂಜನ ಕೂಡಾ ಮಾಡಿದ್ದು ವಿಶೇಷವಾಗಿತ್ತು..

ಅಧಿವಶನಲ್ಲಿ ಒಟ್ಟು ಶೇಕಡಾ 97 ರಷ್ಟು ಪ್ರಗತಿ ಸಾಧಿಸಿದ್ದೇವೆ, ಸದನದ ಒಟ್ಟು ಹಾಜರಾತಿ ಶೇಕಡಾ 74 ರಷ್ಟು ಇತ್ತು,,

ಅನುಮತಿ ಕೇಳದೆ, ಮಾಹಿತಿ ನೀಡದೆ, ಸದನಕ್ಕೆ ಬರದೇ ಇರುವವರ ಸಂಖ್ಯೆ 9 ಕ್ಕೆ ಏರಿದೆ..
ಮಾಹಿತಿ ಕೊಟು ಸದನಕ್ಕೆ ಬರದೇ ಇರುವವರು ಒಟ್ಟು 6 ಶಾಸಕರು..

ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಬಗ್ಗೆ ಹೇಳಬೇಕೆಂದರೆ,, ಕೊನೆ ಹಂತದಲ್ಲಿ ಸಮಯ ನಿಗದಿ ಮಾಡಿ ಅದು ಹೆಚ್ಚು ಚರ್ಚೆ ಸಾಧ್ಯವಾಗಲಿಲ್ಲ, ಆದರೆ ಈ ಭಾಗದ ಜನರ ಅಪೇಕ್ಷೆ ತುಂಬಾ ಇತ್ತು, ಅದು ಸಾಧ್ಯವಾಗಲಿಲ್ಲ

80 ಸಂಘಟನೆ ಸೇರಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ಮಾಡಿದ್ದರು, ಅವೆಲ್ಲವುಗಳನ್ನು ಸರಿಯಾಗಿ ನಿಯಂತ್ರಣ ಮಾಡಿದ ಪೊಲೀಸ್ ಸಿಬ್ಬಂದಿಗೆ ಕೃತಜ್ಞತೆ ..

ಕೋವಿಡ ನಿಯಂತ್ರಣಕ್ಕಾಗಿ ಬೂಸ್ಟರ್ ಡೋಸ್ ಅನ್ನು ವ್ಯವಸ್ಥೆ ಮಾಡಿದ್ದು, ಅಧಿವೇಶನದ ವೇಳೆ ಸುಮಾರು 700 ಜನ ಸಿಬ್ಬಂದಿಗೆ ನೀಡಲಾಗಿದೆ..

ಮುಂದಿನ ದಿನದಲ್ಲಿ ಈ ಭಾಗದ ಬಗ್ಗೆ ಹೆಚ್ಚಿನ ಚರ್ಚೆ ಆಗುತ್ತದೆ ಎಂಬ ವಿಶ್ವಾಸವಿದೆ..

ಬೆಳಗಾವಿಯ ಅಧಿವೇಶನ ನೋಡಲು 20 ಸಾವಿರ ಜನ ಬಂದಿದ್ದು ದಾಖಲೆಯೇ ಸರಿ… ವ್ಯವಸ್ಥೆ ಅಚ್ಚುಕಟ್ಟಾಗಿ ಇತ್ತು ಅದಕ್ಕೆ ಜಿಲ್ಲಾಡಳಿತಕ್ಕೇ ಧನ್ಯವಾದ..

ವರದಿ ರವಿ ಬಿ ಕಾಂಬಳೆ ಬೆಳಗಾವಿ

Leave a Comment

Your email address will not be published. Required fields are marked *

error: Content is protected !!