ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ರೋವರ್ ಮತ್ತು ರೆಂಜರ್ ಲೀಡರ್ಸ್ ಗಳಿಗೆ ರಾಜ್ಯ ಮಟ್ಟದ ಮೂಲ ತರಬೇತಿ ಶಿಬಿರವನ್ನು ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರುಗಳಿಗೆ ಜುಲೈ 24/ ರಿಂದ 30 ರವರೆಗೆ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಶಿಬಿರ ಕೊಂಡಜ್ಜಿ, ಹರಿಹರ ತಾಲೂಕ, ದಾವಣಗೆರೆ ಜಿಲ್ಲೆಯಲ್ಲಿ, ಈ ತರಬೇತಿ ಶಿಬಿರಕ್ಕೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಎಸ್ ಪಿ ಎಮ್ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ಡಾ. ಕೆಂಪಣ್ಣ ಎಸ್ ಕಾಂಬಳೆಯವರ ನಾಯಕತ್ವದಲ್ಲಿ,ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ, ಸಾಹಿತಿ ಡಾ.ವಿಲಾಸ ಕಾಂಬಳೆ ವಿಶ್ವ ಜ್ಞಾನಿ ಅಂಬೇಡ್ಕರ್ ತಂಡದ ನಾಯಕರಾಗಿ,ಇಂಗ್ಲಿಷ್ ಉಪನ್ಯಾಸಕರಾದ ಡಾ. ರಣದಿರ್ ಕಾಂಬಳೆ ಸುಭಾಷ್ ಚಂದ್ರಬೋಸ ತಂಡದ ನಾಯಕರಾಗಿ,ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರೊ ಕುಮಾರ ದೇವರುಷಿ, ಮದಬಾವಿ ಕಾಲೇಜಿನ ಉಪನ್ಯಾಸಕ ಪ್ರೊ ಸಚಿನ ಕಾಂಬಳೆ, ಈ ಐವರು ಶಿಬಿರದಲ್ಲಿ ಬಾಗವಹಿಸಿ, ತಂಡದ ನಾಯಕರಾಗಿ, ತಂಡವನ್ನು ಮುನ್ನಡೆಸಿ ಎಲ್ಲಾ ಚಟುವಟಿಕೆಗಲ್ಲಿ ಬಾಗಿಯಾಗಿ, ಎಲ್ಲರಿಂದಲೂ ಸೈ ಎಸಿಕೊಂಡು ಕಾಲೇಜಿನ ಕೀರ್ತಿಯನ್ನು ಪತಾಕೆಯನ್ನು ರಾಜ್ಯ ಮಟ್ಟದ ಶಿಬಿರದಲ್ಲಿ ಉತ್ತುಂಗಕ್ಕೆರಿಸಿದ್ದಾರೆ.





