ಹಳ್ಳೂರ .
ಅಯ್ಯಪ್ಪ ಸ್ವಾಮಿಯ ಹೆಸರಿನಲ್ಲಿ ಮಾಲೆ ಧರಿಸಿದವರು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಶ್ರದ್ಧಾ ಭಕ್ತಿಯಿಂದ ಪೂಜಿಸಿ ನಾಮಸ್ಮರಣೆ ಮಾಡಿದರೆ ಬಂದ ಕಷ್ಟ ದೂರಾಗಿ ಸಕಲ ಸೌಭಾಗ್ಯಗಳು ದೊರೆತು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಬಬಲಾದಿ ಹೊಳಿಮಠದ ಶ್ರೀ ಸಿದ್ದರಾಮಯ್ಯ ಮಹಾಸ್ವಾಮಿಗಳು ಹೇಳಿದರು.
ಆವರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ನಡೆದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಇನ್ನೊಬ್ಬರ ಮನಸ್ಸು ನೋಯಿಸಿ ಪಾಪ ಕರ್ಮದಂತ ಕಾರ್ಯ ಮಾಡಿ ಮನದಲ್ಲಿ ಹೇಸಿ ಗುಣವಿಟ್ಟ ಕ್ಕೊಂಡು ದೇವರಿಗೆ ಹೋಗಿ ಹುಂಡಿಯಲ್ಲಿ ಹಣ ಹಾಕಿದರೆ ಪುಣ್ಯ ಪ್ರಾಪ್ತಿಯಾಗುವುದಿಲ್ಲ. ಬೇರೆಯವರಿಗೆ ಒಳ್ಳೆಯದ ಆಗೊದನ್ನ ಸಹಿಸಿಕೊಳ್ಳಲಾಗದೆ ಮಾಟ ಮಂತ್ರ ಮಾಡಿಸಿ ಬೇರೆಯವರಿಗೆ ಕೆಟ್ಟದ್ದು ಬಯಸಿದವರಿಗೆ ಕಷ್ಟ ಕಟ್ಟಿಟ್ಟ ಬುತ್ತಿ ಹಗರ ಕಾಲ ಜಗಕ್ಕೆ ಬಂದಿದೆ ಎಲ್ಲರೂ ತಿಳಿದು ದಾನ ಧರ್ಮ ಒಳ್ಳೆಯ ಕೆಲಸ ಕಾರ್ಯ ಮಾಡಿ ಪುಣ್ಯ ಪಡೆದುಕೊಳ್ಳಿರೆಂದರು.
ಆಸ್ತಿ ಅದಿಕಾರ ಅಂತಸ್ತ ಯೌವ್ವನ,ಜನ ಬೆಂಬಲವಿದೆ ಎಂದು ಹಮ್ಮಿಲೆ ಮೆರೆದವರಿಗೆ ಉಳಿಗಾಲವಿಲ್ಲನ್ನ ತಿಳಿದೂ ಬದುಕಿದರೆ ಜೀವನ ಸಾರ್ಥಕವಾಗುತ್ತದೆ. ಜೊಳ್ಳು ಜೊಟ್ಟು ಹಾರಿ ಗಟ್ಟಿ ಬೀಜ ಉಳಿಯುತ್ತದೆ ಮಕ್ಕಳ ಬದುಕಿನ ಭವಿಷ್ಯ ತಂದೆ ತಾಯಿಗಳ ಕೈಯಲ್ಲಿದೆ ಮಕ್ಕಳ ಮೇಲೆ ನಿಗಾವಿಟ್ಟು ಒಳ್ಳೆಯ ಶಿಕ್ಷಣದ ಜೊತೆಗೆ ಸಂಸ್ಕೃತಿ ಧರ್ಮ ನ್ಯಾಯ ನೀತಿ ಮಾರ್ಗದ ದಾರಿ ತೋರಿಸಿದರೆ ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನ ಮಾನ ದೊರೆತು ಮೆಧಾವಿಗಳಾಗುತ್ತಾರೆ. ಖಾನಟ್ಟಿ ಶ್ರೀ ಬಸವಾನಂದ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.ಪ್ರಾರಂಬದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ಅಗ್ನಿಹಾಯ್ದರು. ಅಯ್ಯಪ್ಪ ಸ್ವಾಮಿ ವಿಶೇಷ ಮಹಾಪೂಜೆ ಅಭಿಷೇಕ ನೆರವೇರಿತು. ಸರ್ವರಿಗೂ ಅನ್ನ ಪ್ರಸಾದ ವ್ಯವಸ್ಥೆ ನಡೆಯಿತು.
ಈ ಸಮಯದಲ್ಲಿ ಕೆ ವಿ ಜಿ ಬ್ಯಾಂಕ ಶಾಖಾಧಿಕಾರಿ ಹಾಗೂ ಮಾಲಾದಾರಿ ಚಿಟ್ಟಿ ಬಾಬು ಸರ. ನಿಂಗಪ್ಪ ನಾವಿ. ಶ್ರೀಶೈಲ ಕೋಟಿನತೋಟ. ಸೌರಭ ಸುತಾರ. ರಮೇಶ ದುರದುಂಡಿ. ಸಂಗಪ್ಪ ಪಟ್ಟಣಶೆಟ್ಟಿ.ಮಾಂತು ಬಡಿಗೆರ. ಅಭಿಷೇಕ ಕಾಂಬಳೆ ಸೇರಿದಂತೆ ಗುರುಸ್ವಾಮಿಗಳು, ಮಾಲಾದಾರಿಗಳು ಸಾರ್ವಜನಿಕರಿದ್ದರು.





