ಹಳ್ಳೂರ ಗ್ರಾಮದ ಆರಾದ್ಯ ದೇವರಾದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಬಹಳ ಅದ್ದೂರಿಯಾಗಿ ಅತೀ ವಿಜೃಂಭಣೆಯಿಂದ ಜರುಗಿತು. ಮುಂಜಾನೆ ಶ್ರೀ ಬಸವೇಶ್ವರ ದೇವರ ಮಹಾರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಿದರು. ಗ್ರಾಮದ ಎಲ್ಲ ದೇವರುಗಳಿಗೆ ನೈವೇದ್ಯ ಅರ್ಪಿಸಿದರು. ಸಾಯಂಕಾಲ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಎರಡು ದೈವದ ಜೋಡು ಉಚಾಯಿ,ಕಂಡ್ಯಾಳ ಬಾಸಿಂಗ, ಹೂವಿನ ಮಾಲೆ, ಭವ್ಯ ರಥೋತ್ಸವವು ಸರಳವಾಗಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ತಲುಪಿದ ನಂತರ ಏರಡು ದೈವದವರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ರಥೋತ್ಸವದ ಮೇಲೆ ಬಕ್ತರು ಕಾರಿಕ, ಬೆಂಡು ಬೆತ್ತಾಸು ಹಾರಿಸಿ ಹರಕೆ ತೀರಿಸಿದರು. ಗ್ರಾಮದ ಸಕಲರು ಜಾತ್ರಾ ಮಹೋತ್ಸವದಲ್ಲಿ ಭಕ್ತಿ ಪರಾಕಾಷ್ಟೆ ಮೆರೆದಿದ್ದಾರೆ.