ಬೆಳಗಾವಿ
ವರದಿ:ಸಚಿನ ಕಾಂಬ್ಳೆ
ಅಥಣಿ :ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಶ್ರೀ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಕಾಂಗ್ರೆಸ್ ಮುಖಂಡ ಪದ್ಮಜಿತ್ ನಾಡಗೌಡಪಾಟೀಲ್ ಮತ್ತು ಸಂಜಯ ನಾಡಗೌಡಾ ಅವರ ಪ್ರಾಯೋಜಕತ್ವದಲ್ಲಿ ನಡೆದ ಕುಸ್ತಿ, ಕಬಡ್ಡಿ ಮತ್ತು ಭಾರ ಎತ್ತುವ ಸ್ಪರ್ಧಾ ಕಾರ್ಯಕ್ರಮಕ್ಕೆ ಅಥಣಿ ಮುಖಂಡರಾದ ಡಾ.ಪದ್ಮಜೀತ ನಾಡಗೌಡಾಪಾಟೀಲ್ ಚಾಲನೆ ನೀಡಿದರು.
ಅಪಾರ ಸಂಖ್ಯೆಯ ಜನ ಸೇರಿ ಕುಸ್ತಿ ಪಂದ್ಯ ವೀಕ್ಷಿಸಿ ಸಂಭ್ರಮಪಟ್ಟರು. ಹೆಸರಾಂತ ಹಾಗೂ ಉದಯೋನ್ಮುಖ ಮಲ್ಲರು ಸೆಣಸಾಡಿ ಬಹುಮಾನಗಳನ್ನು ಪಡೆದರು. ಕಬಡ್ಡಿ ಹಾಗೂ ಭಾರ ಎತ್ತು ಸ್ಪರ್ಧೆಗಳು ಸಹ ಜರುಗಿದವು. ಚಿಣ್ಣರ ಕುಸ್ತಿ ಪಂದ್ಯಗಳು ಜನಮನ ಸೆಳೆದವು.
ಒಟ್ಟಾರೆಯಾಗಿ ಅದ್ದೂರಿಯಾಗಿ ಸಪ್ತಸಾಗರ ಶ್ರೀ ಕಾಶಿವಿಶ್ವೇಶ್ವರ ದೇವರ ಜಾತ್ರೆಯು ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಕೃಷ್ಣಾ ಕಿತ್ತೂರಿನ ಗುರುದೇವಾಶ್ರಮದ ಬಸವಪ್ರಭು ಸ್ವಾಮೀಜಿ,ಗಜಾನನ ಮಂಗಸೂಳಿ ,ಅಪ್ಪಾಸಾಬ ನಾಡಗೌಡ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದಾರ್ಥ ಸಿಂಗೆ, ಕಾಂಗ್ರೆಸ್ ಮುಖಂಡ ಧರೆಪ್ಪ ಠಕ್ಕಣ್ಣವರ, ಗ್ರಾಮದ ಹಿರಿಯರಾದ ಆರ್. ಎ. ಪಾಟೀಲ, ಮುಖಂಡರಾದ ನಾರಾಯಣ ಘೋರ್ಪಡೆ, ಪರಶುರಾಮ ಕೋಳೆಕರ, ಬಾಬಾಲಾಲ ನದಾಫ,ಮೌಲಾಸಾಬ ಮುಲ್ಲಾ, ಅಶೋಕ ಐಗಳಿ, ದಸ್ತಗೀರ ನದಾಫ, ಬಾಳೇಶ್ ಹೊಸೂರ, ಹಾರುನ ಮುಲ್ಲಾ,ದಿಲೀಪ ಕಾಂಬಳೆ,ಇಸ್ಮಾಯಿಲ್ ಕರಿಸಾಬ, ಯಲ್ಲಪ್ಪ ಕಾಂಬಳೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು,ಸದಸ್ಯರು ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು.