ಬೆಳಗಾವಿ. ರಾಯಬಾಗ
ಕುಡಚಿ ಮತಕ್ಷೇತ್ರದಿಂದ KRPP ಪಕ್ಷದಿಂದ ಶ್ರೀಶೈಲ ಭಜಂತ್ರಿ ನಾಮಪತ್ರ ಸಲ್ಲಿಕೆ..
ಬೆಳಗಾವಿ :ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಸ್ಥಾಪಿಸಿರುವ ಕರ್ನಾಟಕ ರಾಜ್ಯ ಪ್ರಗತಿ ಪಕ್ಷದಿಂದ ಬೆಳಗಾವಿ ಜಿಲ್ಲೆಯ ಕುಡಚಿ ಮತಕ್ಷೇತ್ರದಿಂದ ಮಾಜಿ ಸೈನಿಕ ಶ್ರೀಶೈಲ ಭಜಂತ್ರಿ ಅವರು ಕುಡಚಿ ಮತಕ್ಷೇತ್ರದ ಚುನಾವಣಾ ಅಧಿಕಾರಿ ಮುಕುಂದಸ್ವಾಮಿ ಅವರಿಗೆ ನಾಮಪತ್ರ ಸಲ್ಲಿಸಿದರು
ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ನಾನು ಕರ್ನಾಟಕ ರಾಜ್ಯ ಪ್ರಗತಿ ಪಕ್ಷದ ಕುಡಚಿ ಮತಕ್ಷೇತ್ರದಿಂದ ಸ್ಪರ್ದಿಸುತ್ತಿದ್ದೂ ನಾನು ಮಾಜಿ ಸೈನಿಕನಿದ್ದು ಹಲವು ವರ್ಷಗಳ ಕಾಲ ಭಾರತಾಂಬೆಯ ಸೇವೆ ಮಾಡಿ ಬಂದಿದ್ದೇನೆ ನನ್ನ ಕ್ಷೇತ್ರದ ಜನಗಳ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ನನಗೆ ಈ ಬಾರಿ ಆಶೀರ್ವಾದ ಮಾಡಿ ಗೆಲ್ಲಿಸಿಕೊಡುತ್ತಾರೆ ನಂಬಿಕೆ ಇದೇ ಹಾಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನ ಜನರು ಈಗಾಗಲೇ ತಿರಸ್ಕಾರ ಮಾಡಿದ್ದಾರೆ ಈ ಬಾರಿ ಗೆಲುವು ನಮ್ಮದಾಗಲಿದೆ ಮಾನ್ಯಶ್ರೀ ಜನಾರ್ದನ ರೆಡ್ಡಿ ಅವರು ಬರುವಂತಹ ದಿನಗಳಲ್ಲಿ ಈ ರಾಜ್ಯದ ಮುಖ್ಯಮಂತ್ರಿಗಳಾಗುತ್ತಾರೆ ಎಂಬ ವಿಶ್ವಾಸ ವಿದೆ ಎಂದರು
ಈ ಸಂದರ್ಭದಲ್ಲಿ ಅಲಗೊಂಡ ಗೋಕಾಕ್ ಮಲ್ಲಪ್ಪ ಪಾಟೀಲ್ ಶಂಭು ಬಿರಾದಾರ ಗಂಗಾರಮ್ ಕಾಟವಿ ಸಿದ್ದರಾಮಗೌಡ ಪಾಟೀಲ್ ಕೇಶವ ಲಕೋಜಿ ಹಾಗೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದಗದರು