ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಕಡೆಯ ಹಳ್ಳಿ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ನೂರಕ್ಕೆ ನೂರರಷ್ಟಾಗಿದ್ದು, ಚಿಕ್ಕೂಡ ಗ್ರಾಮದಲ್ಲಿ ಹರ್ಷದ ಹೊನಲಿಗೆ ಮಹಾಪೂರ ಬಂದಿದೆ.
ಪರೀಕ್ಷೆ ಬರೆದ 53 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸುವರ್ಣ ದಾಖಲೆ ನಿರ್ಮಿಸಿದ್ದಾರೆ. ಆದರ್ಶ ಪ್ರತಿಭಾವಂತ ವಿದ್ಯಾರ್ಥಿನಿ ಕು. ಕಾವೇರಿ ಮುತ್ತಪ್ಪ ಸನದಿ 596 ಅಂಕಗಳನ್ನು ಪಡೆದು ಪ್ರಥಮ ಸ್ಥಾನˌಆದರ್ಶ ಪ್ರತಿಭಾವಂತ ವಿದ್ಯಾರ್ಥಿ ಕು. ರೋಹಿತ ಶರಣಪ್ಪ ರಡ್ರಟ್ಟಿ 579 ಅಂಕಗಳನ್ನು ಗಳಿಸಿ ದ್ವಿತೀಯ ಕು. ˌರಾಹುಲ ರಮೇಶ ನಾಯಿಕ 578 ಗುಣಗಳನ್ನು ಗಿಟ್ಟಿಸಿ ತೃತೀಯ ಸ್ಥಾನ , ಕು. ವಿದ್ಯಾಶ್ರೀ ಶಂಕರಗೌಡ ಪಾಟೀಲ 567 ಗುಣಗಳನ್ನು ಪಡೆದು ನಾಲ್ಕನೆಯ ತಾಣˌ ಕು. ಸಾಜಿದ ಅ ರಾಜಾಪೂರ 563 ಅಂಕಗಳನ್ನು ಗಿಟ್ಟಿಸಿ ಐದನೆಯ ಸ್ಥಾನ ಹೊಂದಿದ್ದಾರೆ.
ಈ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆಂದು ಮುಖ್ಯೋಪಾಧ್ಯಾಯ ಆರ್.ಎಮ್.ಪಾಟೀಲ ತಿಳಿಸಿದ್ದಾರೆ. 14 ವಿದ್ಯಾರ್ಥಿಗಳು ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ˌ 38 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಓರ್ವ ವಿದ್ಯಾರ್ಥಿ ದ್ವಿತೀಯ ವರ್ಗದಲ್ಲಿ ಉತ್ತೀರ್ಣರಾಗಿದ್ದು ಶಾಲೆಯ ಸರಾಸರಿ ಗುಣಮಟ್ಟದ ತೂಕ 91.05 ರಷ್ಟಾಗಿದೆ.
ಸಾಧಕ ವಿದ್ಯಾರ್ಥಿಗಳನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ಲಕ್ಷ್ಮಣ ಪಾಟೀಲ ಮತ್ತು ಸದಸ್ಯರು ಅಭಿನಂದಿಸಿ ಶುಭ ಹಾರೈಸಿದ್ದಾರೆ.ಶಿಕ್ಷಕರ ಬೋಧನಾ ಪ್ರೀತಿˌಸಮರ್ಪಣಾ ಸೇವಾ ಭಾವ ˌಎಸ್.ಡಿ.ಎಮ್.ಸಿ ಅವರ ಸಹಕಾರ ˌಜನಪ್ರತಿನಿಧಿಗಳ ಸಹಾಯˌಊರಿನ ಪ್ರಮುಖರ ಶೈಕ್ಷಣಿಕ ಕಳಕಳಿˌಪಾಲಕರ ಅಕ್ಷರ ಪ್ರೇಮದಿಂದ ಈ ಸಾಧನೆ ಸಾಧ್ಯವಾಗಿದೆಯೆಂದು ಮುಖ್ಯೋಪಾಧ್ಯಾಯರು ಅಭಿಮತ ವ್ಯಕ್ತಪಡಿಸಿದ್ದಾರೆ.ಚಿಕ್ಕೂಡ ಪ್ರೌಢ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಹಿತಿ ಶ್ರೀ ವೆಂಕಟೇಶ ಮಾಚಕನೂರ ಅವರು ನಗದು ರೂಪದ ಬಹುಮಾನ ನೀಡುವುದಾಗಿ ಹೇಳಿ, ಮಕ್ಕಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇಡೀ ಊರಿಗೆ ಊರೇ ಶಾಲೆಯ ಬಗ್ಗೆ ಹೆಮ್ಮೆ ಅಭಿಮಾನದ ಹೂಮಳೆ ಸುರಿಸುತ್ತಿದ್ದಾರೆ.
ವರದಿ:~ಡಾ.ಜಯವೀರ ಎ.ಕೆ*.
ಖೇಮಲಾಪುರ*





