ಎಸ್.ಎಸ್.ಎಲ್.ಸಿ: ರಾಜ್ಯಕ್ಕೆ 8 ನೇ ಸ್ಥಾನ ಗಿಟ್ಟಿಸಿಕೊಂಡ ಕು. ಗಾಯತ್ರಿ ಪಾಂಡವ!

Share the Post Now

ಬೆಳಗಾವಿ. ರಾಯಬಾಗ

ರಾಯಬಾಗ: ತಾಲ್ಲೂಕಿನ ಮೊರಬ ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ.ಯಲ್ಲಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಹಾಗೂ ಉದಯೋನ್ಮುಖ ಕವಿಯತ್ರಿ ಕು.ಗಾಯತ್ರಿ ದೊಂಡಿರಾಮ ಪಾಂಡವ 618 ಅಂಕಗಳನ್ನು ಪಡೆದು (98.88%) ರಾಜ್ಯಕ್ಕೆ 8 ನೇ ಸ್ಥಾನ ಹಾಗೂ ರಾಯಬಾಗ ತಾಲ್ಲೂಕಿಗೆ ತೃತೀಯ ಸ್ಥಾನ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾಳೆ.ಕು.ಸಂತೋಷ ಚಂದುಗೋಳ 96.80% ಹಾಗೂ ಕು.ಗಂಗೋತ್ರಿ ಹಾರೂಗೇರಿ 96% ಮಾಡಿ ಶಾಲೆಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ರಾಜ್ಯಕ್ಕೆ 8 ನೇ ಸ್ಥಾನ ಪಡೆದ ಗ್ರಾಮೀಣ ಭಾಗದ ಅರಳುವ ಪ್ರತಿಭೆ ಕು.ಗಾಯತ್ರಿ ಪಾಂಡವ ಕನ್ನಡ, ಗಣಿತ, ಹಾಗೂ ಸಮಾಜ ವಿಷಯಗಳಲ್ಲಿ ಶತಕ ದಾಖಲಿಸಿ ಗಮನ ಸೆಳೆದಿದ್ದು ವಿಶೇಷ. ಈ ಅಭೂತಪೂರ್ವ ಸಾಧನೆ ಮಾಡಿ ಸುವರ್ಣ ದಾಖಲೆ ನಿರ್ಮಿಸಿದ ಎಲ್ಲ ಸಾಧಿತ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಇಡೀ ಗ್ರಾಮಸ್ಥರು, ಪಾಲಕರು, ಹಾಗೂ ಶಾಲೆಯ ಸಮಸ್ತ ಗುರು ಬಳಗ ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.

ಶಿಕ್ಷಕರ ಬೋಧನಾ ಪ್ರೀತಿ, ಸಮರ್ಪಣಾ ಸೇವಾ ಭಾವ, ಎಸ್.ಡಿ.ಎಂ.ಸಿ.ಯ ಸಹಕಾರ, ಜನಪ್ರತಿನಿಧಿಗಳ ಪ್ರೋತ್ಸಾಹ ಊರಿನ ಪ್ರಮುಖರ ಶೈಕ್ಷಣಿಕ ಕಳಕಳಿ,ಹಾಗೂ ಪಾಲಕರ ಅಕ್ಷರ ಪ್ರೇಮದಿಂದ ಈ ಅಮೋಘ ಸಾಧನೆ ಸಾಧ್ಯವಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಐ.ಕೆ. ಅಕಿವಾಟ ಅವರು ಅಭಿಮಾನದಿಂದ ನುಡಿಯುತ್ತಾರೆ.

*ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!