ರೈತರ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಕಾಳಜಿ ಇಲ್ಲ:ಕುರಬೂರ ಶಾಂತಕುಮಾರ್.

Share the Post Now

ರೈತರಿಗೂ ಪಿಂಚಣಿ ವ್ಯವಸ್ಥೆ ಮಾಡಬೇಕು..

ಬೆಳಗಾವಿ : ಬರಗಾಲಕ್ಕೆ ತುತ್ತಾಗಿರುವ ರೈತರ ಭವಣೆ ಸರಿಪಡಿಸಿ ಅಧಿವೇಶನ ನಡೆಸಿ, ಹಗಲು ನಾಟಕ ಬಿಡಿ, ರೈತರ ಸಾಲ ಮನ್ನಾ ಒತ್ತಾಯಿಸಲು ಬೆಂಗಳೂರಿನಲ್ಲಿ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ಬೃಹತ್ ಅಧಿವೇಶನ ನಡೆಸುವದಾಗಿ, ರೈತ ಹೋರಾಟಗಾರರಾದ ಕುರಬುರ್ ಶಾಂತಕುಮಾರ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ..

ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ಹಗಲು ವೇಷದ ನಾಟಕ ಮಾಡುತ್ತಾ ರಾಜಕೀಯ ಚೆಲ್ಲಾಟವಾಡುತ್ತಿದ್ದಾರೆ, ರೈತರ ಸ್ಥಿತಿ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಷ್ಟ ಎನ್ನುವಂತಾಗಿದೆ,

ರಾಜ್ಯದ 223 ತಾಲೂಕುಗಳು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿವೆ ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಬೆಳೆ ಹಾನಿ, ಮಳೆಹಾನಿ, ಪ್ರವಾಹಹಾನಿ, ಬರಹನಿ ಯಿಂದ ರೈತರು ತತ್ತರಿಸಿದ್ದಾರೆ ಕೃಷಿ ಸಾಲ ಪಡೆದ ರೈತ ಸಾಲದ ಹಣವನ್ನು ಬೆಳೆಗೆ ಹೂಡಿಕೆ ಮಾಡಿ ಬೆಳೆ ನಾಶವಾಗಿದೆ ವಾಪಸ್ ಬಂದಿಲ್ಲ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ, ಆದ್ದರಿಂದ ರೈತನ ಸಂಪೂರ್ಣ ಸಾಲಮನ್ನವಾಗಬೇಕು, ಕೈಗಾರಿಕೆ, ಉದ್ಯಮಿಗಳಿಗೆ, ಸಾಲ ಮನ್ನಾ ತೆರಿಗೆ ಮನ್ನಾ ಮಾಡಿರುವ ರೀತಿ, ರೈತರ ಎಲ್ಲಾ ಬ್ಯಾಂಕು ಹಾಗೂ ಸಹಕಾರ ಸಂಘಗಳ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಲೇಬೇಕು, ಎಂದು ಒತ್ತಾಯಿಸಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ವತಿಯಿಂದ ರೈತ ಅಧಿವೇಶನ ನಡೆಸಲಾಗುತ್ತಿದೆ ದೆಹಲಿಯಲ್ಲಿ ಒಂದು ವರ್ಷ ಹೋರಾಟ ಮಾಡಿದ ರಾಷ್ಟ್ರೀಯ ರೈತ ಮುಖಂಡರು ಭಾಗವಹಿಸುತ್ತಿದ್ದು ಇದೇ ರೀತಿ ದೇಶದ ಎಲ್ಲ ರಾಜ್ಯಗಳಲ್ಲಿ ಸಮಾವೇಶ ನಡೆಸುತ್ತಿದ್ದೇವೆ.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ, ಕಾನೂನು ಜಾರಿ ಮಾಡಬೇಕು ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವಂತಾಗಬೇಕು

ದೇಶದ ನೂರಾನಲವತ್ತು ಕೋಟಿ ಜನರ ಆಹಾರ ಉತ್ಪಾದಿಸಲು ತಮ್ಮ ಜೀವಮಾನವನ್ನೇ ತ್ಯಾಗ ಮಾಡುತ್ತಿರುವ 60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು..

ಬರಗಾಲದಿಂದ ಕಬ್ಬು ಇಳುವರಿ 50ರಷ್ಟು ಕಡಿಮೆಯಾಗಿದೆ, ಸಕ್ಕರೆ ಹಾಗೂ ಯತನಾಲ್ ಬೇಡಿಕೆ ಹೆಚ್ಚು ಇರುವ ಕಾರಣ ಸಕ್ಕರೆ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬು ಖರೀದಿಸಲು ಮುಂದಾಗುತ್ತಿದ್ದಾರೆ ರೈತರು ಜಾಗೃತರಾಗಿ ಹೆಚ್ಚು ದರ, ಮುಂಗಡ ಹಣ ಪಾವತಿಸುವ ಕಾರ್ಖಾನೆಗಳಿಗೆ ಕಬ್ಬುಸರಬರಾಜು ಮಾಡಿ,, ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಈ ಕಾರ್ಯ ನಡೆಯುತ್ತಿದೆ.

ಟನ್ ಕಟ್ಟಿಗೆಗೆ 5000ರೂ ಖರೀದಿ ಮಾಡುತ್ತಿದ್ದಾರೆ, ಆದರೆ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ 3000 ನೀಡಿ ರೈತರಿಗೆ ದ್ರೋಹ ಎಸೆಗುತ್ತಿವೆ,

ಬರ ಪರಿಹಾರ ನಷ್ಟ ಸಮಿಕ್ಷೆಯಲ್ಲಿ ಕಬ್ಬಿನ ಬೆಳೆ ನಷ್ಟ ಅಂದಾಜು ಮಾಡುತ್ತಿಲ್ಲ

ಎನ್ ಡಿ ಆರ್ ಎಫ್ ಮಾನ ದಂಡದಲ್ಲಿ ಕಬ್ಬಿನ ಬೆಳೆಯನ್ನು ಸೇರಿಸಬೇಕು ಬೆಳೆ ನಷ್ಟ ಪರಿಹಾರ ನೀಡಬೇಕು

ರಾಜ್ಯ ಸರ್ಕಾರ ಬರದ ಸಂಕಷ್ಟ ನಿವಾರಣೆಗೆ ಕಬ್ಬಿನ ಬೆಳೆಯನ್ನು ಎನ್ ಆರ್‌ ಇ ಜಿ ಯೋಜನೆ ವ್ಯಾಪ್ತಿಗೆ ಸೇರಿಸಿ ಕಬ್ಬು ಬೇಸಾಯದ ಕೂಲಿ ಕಾರ್ಮಿಕರಿಗೂ ನೀಡುವಂತಾಗಬೇಕು,

ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸಿ ತೂಕದಲ್ಲಿ ಮೋಸ , ಕಬ್ಬಿನ ದರದಲ್ಲಿಯೂ ವಂಚನೆ ಮಾಡುತ್ತಿದ್ದಾರೆ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿದರೆ ಈ ಮೋಸ ತಪ್ಪಿಸಬಹುದು ರೈತರಿಗೆ ಹೆಚ್ಚು ಬೆಲೆ ಸಿಗುತ್ತದೆ,

ಬೆಳಗಾವಿ ಜಿಲ್ಲೆಯಲ್ಲಿ ಎರಡು ಕೋಟಿ ಟನ್ ಕಬ್ಬು ಬೆಳೆದರು ಯಾವ ಶಾಸಕರು ಬಾಯಿ ಬಿಚ್ಚುತ್ತಿಲ್ಲ ಇವರಿಗೆ ರೈತರು ಓಟು ಕೊಟ್ಟಿಲ್ಲವೇ

ಪ್ರತಿ ಟನ್ ಕಬ್ಬು ಉತ್ಪಾದನಾ ವೆಚ್ಚ ಕನಿಷ್ಠ 3580 ರೂ ವೆಚ್ಚ ತಗಲುತ್ತದೆ ಎಂದು ಕೃಷಿ ಬೆಲೆ ಆಯೋಗವೇ ಅಂದಾಜು ಮಾಡಿದೆ, ಕೇಂದ್ರ ಸರ್ಕಾರ ರೂ.3150 ನಿಗದಿ ಮಾಡುತ್ತದೆ ಇದು ನ್ಯಾಯವೇ?

ನಾವು ಕಳೆದ ವರ್ಷ 39 ದಿನಗಳು ಹೋರಾಟ ಮಾಡಿ ಹೆಚ್ಚುವರಿ ದರ150ರೂ ಆದೇಶ ಮಾಡಿದರು ರೈತರಿಗೆ ಪಾವತಿ ಆಗಿಲ್ಲ, ಕಬ್ಬಿನ ಕಳೆದ ವರ್ಷದ ಬಾಕಿ ಹಣ ಕೂಡಲೇ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕು ,ಕೂಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು..

ವಿದ್ಯುತ್ ಖಾಸಗಿಕರಣ ಮಾಡಿ ಕೃಷಿ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವುದನ್ನ ತಪ್ಪಿಸಲು ಉನ್ನಾರ ನಡೆಸಲಾಗುತ್ತಿದೆ ಇದನ್ನು ಕೈ ಬಿಡಬೇಕು ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆ ನಿರಂತರ 10 ಗಂಟೆಗಳ ವಿದ್ಯುತ್ ನೀಡಬೇಕು,

ರೈತರ ಗಂಡು ಮಕ್ಕಳ ಮದುವೆಯಾಗುವ ವದುವಿಗೆ ಸರ್ಕಾರಿ ಕೆಲಸದಲ್ಲಿ ಶೇಕಡ 10ರಷ್ಟು ಮೀಸಲಾತಿ ನೀಡುತ್ತೇವೆ ಎನ್ನುವ ನೀತಿ ಜಾರಿಗೆ ಬಂದರೆ ಹಳ್ಳಿಗಳ ಯುವಕರ ಸಮಸ್ಯೆ ಬಗೆಹರಿಯುತ್ತದೆ ಈ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚಿಸಲಿ,

ಈ ಒತ್ತಾಯಗಳ ಬಗ್ಗೆ ರಾಷ್ಟ್ರೀಯ ರೈತ ಸಮಾವೇಶದಲ್ಲಿ ಚರ್ಚೆ ನಡೆಸಿ ಕೇಂದ್ರ ರಾಜ್ಯ ಸರ್ಕಾರಗಳನ್ನು ಎಚ್ಚರಿಸಲಾಗುವುದು ದೇಶದ ಎಲ್ಲಾ ರೈತರು ರಾಜಕೀಯೇತರವಾಗಿ ಪ್ರಬಲವಾಗಿ ಹೋರಾಟ ರೂಪಿಸಲು ಬೆಂಗಳೂರಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ( ರಾಜಕೀಯೆತರ) ವತಿಯಿಂದ ಡಿಸೆಂಬರ್ 23 ರಂದು ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ದೇಶದ ಎಲ್ಲಾ ರೈತ ಮುಖಂಡರು ರೈತ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡುತ್ತಾರೆ,

ರಾಜ್ಯದ್ಯಂತ ಇರುವ ಎಲ್ಲಾ ರೈತ ಸಂಘಟನೆಗಳ ಮುಖಂಡರು, ರೈತರು ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಬೆಂಬಲಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ರಾಜ್ಯಗಳ ಘಟಕದ ಅಧ್ಯಕ್ಷ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ,

ರಾಜ್ಯಾಧ್ಯಕ್ಷರಾದ ರೈತರತ್ನ ಕುರುಬೂರು ಶಾಂತಕುಮಾರ್ ಪತ್ರಿಕಾ

ಗೋಷ್ಠಿಯಲ್ಲಿ ತಿಳಿಸಿದ್ದಾರೆ..

ಪತ್ರಿಕಾಗೋಷ್ಠಿಯಲ್ಲಿ ಗುರುಸಿದ್ದಪ್ಪ ಕೋಟಗಿ ಜಿಲ್ಲಾಧ್ಯಕ್ಷರು,

ಬಾಪುಗೌಡ ಪಾಟೀಲ್ ,

ಎಸ್ ಬಿ ಸಿದ್ದನಾಳ್, ಹತ್ತಳ್ಳಿ ದೇವರಾಜ್, ಯಲ್ಲಪ್ಪ ಕುಲಗೋಡು, ಶಂಕರ್ ಗೌಡ ಹೊಸಗೌಡರು, ಶಿವಾನಂದ್ ಭೊಳೆತಿನ್ ಉಪಸ್ಥಿತರಿದ್ದರು..

Leave a Comment

Your email address will not be published. Required fields are marked *

error: Content is protected !!