ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಅಥಣಿ : ನಾಳೆ ಹಾಗೂ ನಾಡಿದ್ದು ಅಥಣಿ ತಾಲೂಕಿನ ಕವಲಗುಡ್ಡದ ಸಿದ್ದಯೋಗಾಶ್ರಮದಲ್ಲಿ ರಾಜ್ಯಮಟ್ಟದ ಹಿಂದುಳಿದ ವರ್ಗಗಳ ಧಾರ್ಮಿಕ ಮಹಾಸಮಾವೇಶದ ಪೂರ್ವಭಾವಿ ತಯಾರಿ ಶಿಬಿರ ಜರುಗಲಿದ್ದು ಈಸಮಾವೇಶಕ್ಕೆ ರಾಜ್ಯದ ಎಲ್ಲ ಹಿಂದುಳಿದ ಸಮುದಾಯದ ಮುಖಂಡರು ಆಗಮಿಸಿ, ಚರ್ಚೆ ಮಾಡಲಿದ್ದಾರೆ ಎಂದು ಆಯೋಜಕರಾದ ಸೈದಪ್ಪ ಗುತ್ತೇದಾರ ಅವರು ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡುತ್ತಾ ಹಿಂದುಳಿದ ಸಮುದಾಯದ ದೇವಸ್ಥಾನಗಳು ಹಾಳುಕೊಂಪೆಯಾಗಿದ್ದು ಅವುಗಳ ಅಭಿವೃದ್ದಿ ಬಗೆಗೆ ಚರ್ಚೆ, ಈ ದೇವಸ್ಥಾನಗಳ ವಿಶೇಷ ಪೂಜಾ ಪದ್ದತಿಗಳ ಮಾಹಿತಿ ರವಾನೆ, ಅಲ್ಲಿನ ಅರ್ಚಕರಿಗಾಗಿ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಜಾತಿಯ ಪ್ರಮುಖರಿಗೆ ಅವಕಾಶ ಕೊಟ್ಟು ಅಲ್ಲಿ ನಿರ್ಣಯವಾದುದ್ದನ್ನು ಸರಕಾರದ ಮಟ್ಟದಲ್ಲಿ ಚರ್ಚೆ ಮಾಡುವುದು ತೀರಾ ಅತ್ಯವಶ್ಯಕವಾಗಿದೆ.
ಶ್ರೀ ಅಮರೇಶ್ವರ ಮಹಾರಾಜರು ಸಾನಿಧ್ಯ ವಹಿಸಲಿದ್ದು ಸಚಿವ ಕೆ ಎಸ್ ಈಶ್ವರಪ್ಪ, ಹಿಂದುಳಿದ ವರ್ಗದ ಮುಖಂಡ ಕೆ ಮುಕಡಪ್ಪ, ಸಾಮಾಜಿಕ ಚಿಂತಕರಾದ ವಾಧಿರಾಜರು, ಮಾಜಿ ಸಂಸದ ಕೆ ವಿರೂಪಾಕ್ಷಪ್ಪ, ನಿತೀನ ಗುತ್ತೇದಾರ ಸೇರಿದಂತೆ 197 ಹಿಂದುಳಿದ ಸಮುದಾಯದ ಪ್ರಮುಖ ಮುಖಂಡರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅನಂತರ ಮುಖಂಡ ಬಸವರಾಜ ಬಾಳಿಕಾಯಿ ಅವರು ಮಾತನಾಡಿ ಈಗಾಗಲೇ ಈ ಮಹತ್ವಪೂರ್ಣ ಕಾರ್ಯಕ್ರಮಕ್ಕೆ ಸುಮಾರು 197 ಹಿಂದುಳಿದ ಸಮುದಾಯದ ಪ್ರತಿನಿಧಿಗಳಿಗೆ ಆಗಮಿಸುವಂತೆ ಆಹ್ವಾನ ನೀಡಲಾಗಿದ್ದು, ಇಲ್ಲಿ ವಿಶೇಷವಾಗಿ ಹಿಂದುಳಿದ ಸಮುದಾಯದ ದೇವಸ್ಥಾನಗಳು, ಪೂಜಾ ಪದ್ದತಿ, ಶ್ರದ್ದಾ ಕೇಂದ್ರಗಳಿಗೆ ಸಂಬಂಧಪಟ್ಟ ಮಾಹಿತಿ ವಿನಿಮಯ ಹಾಗೂ ಸಂಘಟನೆಗಾಗಿ ಎಲ್ಲ ಪಕ್ಷದ ಪ್ರಮುಖರನ್ನು ಸೇರಿಸಿ, ಮಾಜಿ ಹಾಗೂ ಹಾಲಿ ಶಾಸಕರು, ಸಚಿವರನ್ನು, ಅಖಂಡ ಕರ್ನಾಟಕದ ಪ್ರಮುಖರನ್ನು ಸೇರಿಸಿ ಈ ಶಿಬಿರ ಮಾಡಲಾಗುತ್ತಿದೆ, ಉತ್ತರ ಕರ್ನಾಟಕದ ಕೊನೆಯ ಗಡಿ ಭಾಗದ ಪ್ರದೇಶದಲ್ಲಿ ಹಿಂದುಳಿದ ಸಮುದಾಯದ ಎಲ್ಲ ಪ್ರಮುಖರಿಗೆ ಅನಿಸಿಕೆ ಹಂಚಿಕೊಳ್ಳಲು ಮುಕ್ತ ಅವಕಾಶ ಕೊಡಲಾಗುವುದು ಎಂದರು.
ಈ ವೇಳೆ ಈ ವೇಳೆ ಡಾ ಲಕ್ಷ್ಮಣ ಈಳಗೇರ
ಶಶಿಕುಮಾರ ವಲ್ಲೆಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.