ಶೈಕ್ಷಣಿಕ ಜಿಲ್ಲಾ ಮಟ್ಟದ 400 ಮೀಟರ್ ಒಟದ ಸ್ಪರ್ಧೆಯಲ್ಲಿ ಪ್ರಥಮ
ವರದಿ: ಸಂತೋಷ ಮುಗಳಿ
ರಾಯಬಾಗ.ಮುಗಳಖೋಡ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸನ್ 2023 – 24ನೆಯ ಸಾಲಿನ 14 ವರ್ಷದೊಳಗಿನ ಬಾಲಕಿಯರ ವಿಭಾಗದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪಟ್ಟಣದ ಶ್ರೀ ಹನುಮಾನ. ಶಿಕ್ಷಣ ಸಂಸ್ಥೆಯ ಶ್ರೀ ಶಿವಶಕ್ತಿ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸ್ನೇಹಾ ಅಶೋಕ ಯಡವನ್ನವರ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ
ಈ ಸಂದರ್ಭದಲ್ಲಿ ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಂತರಾಮ ಜೋಗುಳೆ ಹಾಗೂ ರಾಯಬಾಗ ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಮಹಾವೀರ ಜೀರಗ್ಯಾಳ ಇವರು ಪ್ರಶಸ್ತಿ ವಿತರಿಸಿ ಶುಭ ಹಾರೈಸಿದರು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಾರಾಮ ಜೋಗುಳೆ 500 ರೂಪಾಯಿಗಳ ಕಾಣಿಕೆಯನ್ನು ನೀಡಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ರಮೇಶ ಖೇತಗೌಡರ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಮುಖ್ಯ ಶಿಕ್ಷಕ ಎ ಕೆ ಕಾಮಗೌಡರ ಸಹ ಶಿಕ್ಷಕ ಎ ಬಿ ದಾವಣಿ ವಿದ್ಯಾರ್ಥಿನಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡಿದ ಶಿಕ್ಷಕ ಪಿ ಜಿ ಕಡಕೋಳ ಹಾಗೂ ದೈಹಿಕ ಶಿಕ್ಷಕರಾದ ಎ ಆರ್ ಕಡಕಬಾವಿ ಅಭಿನಂದಿಸಿ ಶುಭ ಹಾರೈಸಿದರು.