ಹಳ್ಳೂರ.
ಮದ್ಯಪಾನದಂತ ದುಶ್ಚಟಕ್ಕೆ ಬಲಿಯಾಗಿ ಶ್ರೇಷ್ಟ ಮಾನವ ಜನ್ಮ ಹಾಳು ಮಾಡಿಕೊಳ್ಳಬೇಡಿ ಮದ್ಯ ವ್ಯಸನದಿಂದ ದೂರವಿದ್ದು ಒಳ್ಳೆಯ ಜೀವನ ರೂಪಿಸಿಕೊಳ್ಳಿರೆಂದು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸಂಜಯ ನಾಡಗೌಡ ಹೇಳಿದರು
ಅವರು ಮಸಗುಪ್ಪಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಧರ್ಮಸ್ಥಳ ಇವರ ವತಿಯಿಂದ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ 1941 ಶಿಭಿರದ ನೇ 7 ನೇ ದಿನದ ಮಧ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ
ಶಿಬಿರಾರ್ಥಿಗಳಿಗೆ ಮಧ್ಯಪಾನದಿಂದ ದೂರವಿದ್ದು ಉತ್ತಮ ಜೀವನ ರೂಪಿಸಿಕೊಳ್ಳಿರೆಂದು ಹೇಳಿದರು. ಜಿಲ್ಲಾ ನಿರ್ದೇಶಕಿ ನಾಗರತ್ನಾ ಹೆಗಡೆ ಮಾತನಾಡಿ ಸರಾಯಿ ಕುಡಿತದಿಂದ ಸಾಕಷ್ಟು ಮುತ್ತೈದೆ ಹೆಣ್ಣು ಮಕ್ಕಳು ಮಾಗಲ್ಯ್ ಕಳೆದುಕೊಂಡು ವಿಧವೆಯರಾಗಿದ್ದಾರೆ ನಿಮ್ಮ ಕುಟುಂಬ ನೀವೂ ಸುಖ ಸಮೃದ್ಧಿ ನೆಮ್ಮದಿಯಿಂದ ಬದುಕಬೇಕಾದರೆ ಸರಾಯಿ ಕುಡಿತದಿಂದ ಮುಕ್ತವಾದರೆ ಮಾತ್ರ ಸಾಧ್ಯ ಎಂದು ಹೇಳಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ ಮಾತನಾಡಿ ಈಗಿನ ಯುವಕರು ಮಧ್ಯ ಪಾನಕ್ಕೇ ಮೊರೆ ಹೋಗಿ ಕಡಿಮೆ ವಯಸ್ಸಿನಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಶ್ರೇಷ್ಠ ಮಾನವ ಜನ್ಮ ದೊಡ್ಡದು ವ್ಯಸನಕ್ಕೆ ಬಲಿಯಾಗಿ ಹಾದಿ ಬೀದಿ ಬಿದ್ದು ಮರ್ಯಾದೆ ಕಳೆದುಕೊಳ್ಳಬೇಡಿ ವ್ಯಸನಾದಿಗಳಿಂದ ಮುಕ್ತವಾಗಿ ಸಮಾಜದಲ್ಲಿ ಒಳ್ಳೆ ಕೆಲಸ ಕಾರ್ಯ ಮಾಡಿ ಜೀವನ ಉದ್ದಾರ ಮಾಡಿಕೊಳ್ಳಿರಿ ಎಂದು ಹೇಳಿದರು.
ಉತ್ತಮ ಜೀವನ ಕಂಡುಕೊಳ್ಳುವ ನಿಟ್ಟಿನಲ್ಲಿ ನವ ಜೀವನ ಸಮಿತಿ ರಚನೆ ಮಾಡಿ ಮತ್ತು ಪೋಷಕರ ನೇಮಕ ಮಾಡಲಾಯಿತು. ಶಿಬಿರಾರ್ಥಿಗಳಿಗೆ ಭಜನಾ ಮಂಗಳೋತ್ತ್ಸವ, ಮಧ್ಯಾ ಸುರನಿಗೆ ಶಿಬಿರಾಗ್ನಿ ಮತ್ತು ವಿದಾಯ ಕೂಟ, ಭಜನಾ ಮಂಡಳಿಯಿಂದ ಭಜನೋತ್ಸವ ಕಾರ್ಯಕ್ರಮ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ ಮಾತೋಶ್ರೀ ಕಾವ್ಯಾಶ್ರೀ
ಅಮ್ಮನವರು.ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ ಸದಸ್ಯರಾದ ಬರಮಪ್ಪ ಉಪ್ಪಾರ್, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಸವರಾಜ್ ಬುಜನ್ನವರ್, ಉಪಾಧ್ಯಕ್ಷರಾದ ಸಂಜು ಹೊಸಕೋಟೆ, ಮೂಡಲಗಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀ ರಾಜು ನಾಯಕ್, ಶ್ರೀ ನಾರಾಯಣ್, ಪ್ರಾದೇಶಿಕ ವ್ಯಾಪ್ತಿಯ ಜನ ಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಭಾಸ್ಕರ್ ಏನ್, ಮಹೇಶ್ವರಪ್ಪ.ಶಿಬಿರಾಧಿಕಾರಿಗಳಾದ ಶ್ರೀ ನಾಗೇಂದ್ರ ಹಾಗೂ ಶ್ರೀ ನಂದಕುಮಾರ ಹಾಗೂ ದಯಾನಂದ್ ಆರೋಗ್ಯ ಸಹಾಯಕರಾದ ವೆಂಕಟೇಶ, ಮೇಲ್ವಿಚಾರಕರಾದ ಶ್ರೀ ಉಮೇಶ್, ದುಂಡಪ್ಪ ಆಸ್ಕಿ.ಮಂಜುಳಾ
ಹಿರೇಮಠ್.ವಿಜಯಲಕ್ಷ್ಮಿ ಮುರನಾಳ.ಮೈಲಾರಪ್ಪ ಪೈಲಿ.ಶ್ರುತಿ ಕೋಳಿಮಠ. ರವಿ ಜಾಡಕೊಪ್ಪ ಹಾಗೂ ಸೇವಾ ಪ್ರತಿನಿಧಿಗಳು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಬಿರದಲ್ಲಿ ತಾಲೂಕಿನ 125 ಮದ್ಯ ವ್ಯಸನ ಶಿಬಿರಾರ್ಥಿಗಳು ಉಪಸ್ಥಿತರಿದ್ದರು . ಸೋಮವಾರ ಮುಂಜಾನೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನೆರವೇರಲಿದೆ.