ವರದಿ: ಸಂಗಮೇಶ ಹಿರೇಮಠ.
ಮುಗಳಖೋಡ: ಪಾಂಡವರಿಗೆ ಶ್ರೀ ಕೃಷ್ಣ ಗುರುವಾದರೆ ಬಲರಾಮ ಕೌರವರಿಗೆ ಗುರುವಾದ ರಾಮಾಯಣ ಮಹಾಭಾರತ ಕಾಲದಿಂದಲೂ ಈ ಗುರು ಶಿಷ್ಯರ ಸಂಬಂಧ ಬೆಳೆದು ಬಂದಿರುವುದು ವಿಶೇಷವಾದದ್ದು. ಒಬ್ಬ ವ್ಯಕ್ತಿ ತನ್ನ ಜೀವನದ ದಡ ಮುಟ್ಟಬೇಕಾದರೆ ಗುರುವಿನ ಮಾರ್ಗದರ್ಶನ ಅತಿ ಅವಶ್ಯ. ಅದರಂತೆ ಎಲ್ಲ ವಿದ್ಯಾರ್ಥಿಗಳು ಕೂಡಾ ಒಬ್ಬ ಗುರು ತೋರಿದ ಮಾರ್ಗದಂತೆ ಧರ್ಮ, ನ್ಯಾಯ, ನೀತಿ, ಸತ್ಯದ ಮೌಲ್ಯಗಳನ್ನು ತಿಳಿದು ಅವುಗಳನ್ನು ಅಳವಡಿಸಿಕೊಂಡು ನಡೆದರೆ ಜೀವನ ಸಾರ್ಥಕವಾಗುವುದು ಎಂದು ಡಾ.ಎಂ.ಕೆ.ಬೀಳಗಿ ಹೇಳಿದರು.
ಅವರು ಮುಗಳಖೋಡ ಪಟ್ಟಣದ ಚ. ವಿ. ವ. ಸಂಘದ ಬ.ನೀ.ಕುಲಿಗೋಡ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷಸ್ಥಾನ ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅಂಶಗಳನ್ನು ತಿಳಿಸಿಕೊಟ್ಟರು.
ನಂತರ ಕೆ.ಎ. ಕಾಂಬಳೆ, ಜಿ. ಆರ್. ಮೊಗವೀರ್, ಎಸ್.ಬಿ.ಕೊಕಟನೂರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಕುಮಾರಿ ಅರ್, ಜಿ. ಹುಬ್ಬಳ್ಳಿ ನಿರೂಪಿಸಿ, ಲಕ್ಷ್ಮಿ ಹಳಿಂಗಳಿ ಸ್ವಾಗತಿಸಿ, ಎಲ್. ಎಂ. ಬೇವನೂರ ವಂದಿಸಿದರು.
ಈ ಸಂದರ್ಭದಲ್ಲಿ ಬಿ.ಎ. ಹಿಪ್ಪರಗಿ, ಕುಮಾರಿ ಎಸ್. ಬಿ. ಕೊಕಟನೂರ, ಪಿ. ಆರ್. ಶಿವಳ್ಳಿ, ಎಂ.ಜಿ.ಬಾಳೋಜಿ, ಎಂ.ಎಂ. ಕಿಲಾರಿ, ಎಸ್. ಎಸ್. ಕುಂಬಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪದವಿಪೂರ್ವ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.