ವಿದ್ಯಾರ್ಥಿಗಳು ಅಮೂಲ್ಯವಾದ ಜೀವನ ರೂಪಿಸಿಕೊಳ್ಳಿ: ಆರ್ ಟಿ ಮಾಳಿ

Share the Post Now

ಮೂಡಲಗಿ

ವಿದ್ಯಾರ್ಥಿಗಳು ಮಾಡಿದ ಸಾಧನೆ ಅವರ ಪ್ರತಿಭೆಯನ್ನು ಅಳೆಯುತ್ತದೆ ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಅಧ್ಯಯನ ಶೀಲತೆ ಮತ್ತು ಸಾದನಾ ಪ್ರವೃತ್ತಿಗಳು ಅವರನ್ನು ಸಾದಕರ ಸಾಲಿಗೆ ಸೇರಿಸುತ್ತದೆ ಅಲ್ಲದೇ ವಿದ್ಯಾರ್ಥಿಗಳು ಸಾಧಕರನ್ನು ಮಾದರಿಯಾಗಿ ಇಟ್ಟುಕೊಂಡು ತಮ್ಮ ಅಮೂಲ್ಯವಾದ ಬದುಕನ್ನು ಅರ್ಥಪೂರ್ಣ ಗೊಳಿಸಿಕೊಳ್ಳಬೇಕು ಸ್ವಾಮಿವಿವೇಕಾನಂದರ ಚಿಂತನೆಯಂತೆ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಮನಸ್ಸನ್ನು

ತಾವೂ

ನಿಗ್ರಹಿಸಿ ಅಧ್ಯಯನಕ್ಕೆ ತೊಡಗಿಸುತ್ತದೆವಿದ್ಯಾರ್ಥಿಗಳ ಮೊದಲ ಆದ್ಯತೆ ಸರಕಾರದ ಉನ್ನತ ಹುದ್ದೆಯನ್ನು ಅಲಂಕರಿಸುವ ಕನಸ್ಸು ಹೊಂದಿರಬೇಕು ತಂದೆ ತಾಯಿಗಳ ಕನಸ್ಸನ್ನು ಇಡೇರಿಸಲು ಪ್ರಯತ್ನಿಸಬೇಕು ಎಂದು ಹಿಡಕಲ್ ನ ವಸಂತರಾವ ಪಾಟೀಲ ಸಂಯುಕ್ತ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಆರ್. ಟಿ.ಮಾಳಿ ಹೇಳಿದರು.

ಅವರು ಸ್ಥಳೀಯ ರೂರಲ್ ಡೆವಲಪ್ ಮೆಂಟ್ ಸೊಸೈಟಿಯ ಕಲಾ, ವಾಣಿಜ್ಯ, ವಿಜ್ಞಾನ, ಸಮಾಜ ಕಾರ್ಯ ಪದವಿ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ವಿರ್ದ್ಯಾಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಸರ್ವಪಲ್ಲಿರಾಧಾಕೃಷ್ಣನ್ ರವರ ಪೂಜಾಕಾರ್ಯಕ್ರಮ ನಿರ್ವಹಿಸಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದರು. ರಬಕವಿಯ ಜನಪದ ಸಾಹಿತಿಗಳಾದ

ಶ್ರೀಕಾಂತ ಗುರುರಾಜ ಕೆಂದೂಳಿ ಮಾತನಾಡಿ ಮಾನವ ಜನ್ಮ ಬಹುದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿರೂ ಹುಚ್ಚಪ್ಪಗಳಿರಾ ಎಂದು ಚಿಂತನಾಕಾರರ ಹೇಳಿದ ಮಾತು ಇಂದಿನ ನಮ್ಮ ಯುವ ವಿದ್ಯಾರ್ಥಿಗಳ ಬದುಕಿಗೆ ಅವಶ್ಯಕವಾಗಿದೆ ಇಂದಿನ ಯುವ ವಿದ್ಯಾರ್ಥಿಗಳು ಮೊಬೈಲ್ ಮತ್ತು ಪ್ಯಾಶನ್ ಸಂಸ್ಕೃತಿಯಿ೦ದ ಜೀವನದ ಮೌಲ್ಯಯುತ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಸರಿಯಾದ ಗುರುಗಳ ಮಾರ್ಗದರ್ಶನದಲ್ಲಿ ಆದರ್ಶ ಜೀವನ ರೂಪಿಸಿಕೊಳ್ಳುವುದು ಅವಶ್ಯವಿದೆ ಎಂದರು.

ಅಧ್ಯಕ್ಷತೆಯನ್ನು ಗಿರಿಗೌಡ ಪಾಟೀಲ ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಪಂಚಾಯತ ಮಾಜಿ ಸದಸ್ಯರಾದ ರಮೇಶ ಪಾಟೀಲ, ಮುರಿಗೆಪ್ಪ ಮಾಲಗಾರ ಶಿವಾನಂದ ಸತ್ತಿಗೇರಿ, ಚಿದಾನಂದ ಶೆಟ್ಟರ, ಕಾಮಣ್ಣಾ ಕಾಳೆ, ಜೋಸೆಪ್ ಎಸ್.ಬಿ. ಮತ್ತಿತರರು ಹಾಜರಿದ್ದರು

ಕಾಲೇಜಿನ

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಜರುಗಿದವು. ಮನರಂಜನೆ ಕಾರ್ಯಕ್ರಮಗಳು ಜರುಗಿದವು.

Leave a Comment

Your email address will not be published. Required fields are marked *

error: Content is protected !!