ಪಕ್ಷೇತರ ಅಭ್ಯರ್ಥಿಯಾಗಿ ಶಂಭು ಕಲ್ಲೋಳಿಕರ್ ನಾಮಪತ್ರ ಸಲ್ಲಿಕೆ

Share the Post Now

ಬೆಳಗಾವಿ. ರಾಯಬಾಗ

ರಾಯಬಾಗ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಯಬಾಗ ಮತಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಐಎಎಸ್ ಅಧಿಕಾರಿ ಶಂಭು ಕಲ್ಲೋಳಕರ ಅವರು ಕ್ಷೆತ್ರದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ರಾಯಬಾಗ ಪಟ್ಟಣದ ತಹಶೀಲ್ದಾರರ ಕಚೇರಿಗೆ ತೆರಳಿ, ನಾಮಪತ್ರ ಸಲ್ಲಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಯಬಾಗ ಮತಕ್ಷೇತ್ರದ ಜನತೆಯ ಸೇವೆ ಮಾಡುವ ಉದ್ದೇಶದಿಂದ ರಾಜಕೀಯ ಕಣಕ್ಕಿಳಿದು ನನ್ನ ಕ್ಷೇತ್ರದ ಜನಬಾಂಧವರ ಪ್ರೀತಿ, ವಿಶ್ವಾಸ, ಬೆಂಬಲಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ

ರಾಯಬಾಗ ಮತಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಮಾಡಿ, ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದೇನೆ. ಹೀಗಾಗಿ ಈ ಬಾರಿ ಚುನಾವಣಾ ಕಣಕ್ಕಿಳಿದಿದ್ದು, ನಿಮ್ಮೆಲ್ಲರಿಗೂ ಆಶೀರ್ವಾದ ಪಡೆಯಲು ಬಯಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ಜನರ ಹಿತಕ್ಕಾಗಿ ಈ ಬಾರಿ ನನಗೆ ನೀವು ನನ್ನನ್ನು ಆಶೀರ್ವದಿಸಿ, ಬೆಂಬಲಿಸುತ್ತೀರಿ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ಧುರೀಣರಾದ ಶ್ರೀ ಧುಳಗೌಡ ಈ ಪಾಟೀಲ,ಸಿದ್ರಾಮ್ ಪೂಜೇರಿ ಜಿನ್ನಪ್ಪ ಬಡೋರೆ, ಮುರಗೇಶ ಕೋಟಿವಾಲೆ,ಉದಯ್ ಬಡೋರೇ ಮಹೇಶ್ ಹೊಸಮನೆ ಮುರಗೇಶ್ ಕೋಟೆವಾಲೆ ಮಾರುತಿ ನಾಯ್ಕ್ ಕಲ್ಲಪ್ಪ ಹಾರೂಗೇರಿ ಸುನಿಲ್ ಮೋಹಿತೆ ವಕೀಲರಾದ ರಾಜು ಶಿರಗಾಂವೆ, ಬಿ ನ್ ಬಂಡಗಾರ ಹಾಗೂ ಸ್ಥಳೀಯ ಮುಖಂಡರು ಬೆಂಬಲಿಗರು ಕಾರ್ಯಕರ್ತರು ಭಾಗಿಯಾಗಿದ್ದರು.

Leave a Comment

Your email address will not be published. Required fields are marked *

error: Content is protected !!