ಸುಲ್ತಾನಪುರ:1.56 ಕೋಟಿ ವೆಚ್ಚದಲ್ಲಿಸರಕಾರಿ  ಪ್ರೌಢಶಾಲೆ  ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮಹೇಂದ್ರ ತಮ್ಮಣ್ಣವರ;

Share the Post Now

ಶಿಕ್ಷಣವನ್ನು ಪಡೆದವರು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯುತ್ತಾರೆ. ಶಿಕ್ಷಣವು ಹುಲಿಯ ಹಾಲು ಇದ್ದಂತೆ, ಕಲಿತವರು (ಕುಡಿದವರು) ಗರ್ಜಿಸುತ್ತಾರೆ: ಶಾಸಕ ಮಹೇಂದ್ರ ತಮ್ಮಣ್ಣವರ;

ಬೆಳಗಾವಿ. ರಾಯಬಾಗ


ಶಿಕ್ಷಣವೇ ಶಕ್ತಿ, ಶಿಕ್ಷಣವನ್ನು ಪಡೆದವರು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯುತ್ತಾರೆ. ಶಿಕ್ಷಣವು ಹುಲಿಯ ಹಾಲು ಇದ್ದಂತೆ, ಕಲಿತವರು (ಕುಡಿದವರು) ಗರ್ಜಿಸುತ್ತಾರೆ, ಪ್ರತಿಯೊಬ್ಬರೂ ಶಿಕ್ಷಣವನ್ನ ಪಡೆಯಬೇಕು, ಶಿಕ್ಷಣ ಪಡೆದುಕೊಂಡವರು ಅಜ್ಞಾನ, ಅನಕ್ಷರತೆ, ಅಂಧಕಾರ, ಮೌಢ್ಯ ಹಾಗೂ ಮೂಢನಂಬಿಕೆಯಿಂದ ಹೊರಗೆ ಬರುತ್ತಾರೆ. ಶಿಕ್ಷಣ ಪಡೆದವರು  ವಿಕಸನ ಹೊಂದುತ್ತಾರೆಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.

ಅವರು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ಕುಡಚಿ ಮತಕ್ಷೇತ್ರದ ಸುಲ್ತಾನಪುರ ಗ್ರಾಮದಲ್ಲಿ ಅಕ್ಟೊಬರ್ 25ರಂದು ಶುಕ್ರವಾರ ಮುಂಜಾನೆ 11ಗಂಟೆಗೆ ಗ್ರಾಮದ ಸರ್ವೇ ನಂ. 21ರಲ್ಲಿ 6ಎಕರೆ 24ಗುಂಟೆ ಜಮೀನಲ್ಲಿ ಸರಕಾರಿ (ಆರ್.ಎಂ.ಎಸ್.ಎ) ಪ್ರೌಢಶಾಲೆ ಕಟ್ಟಡಕ್ಕೆ ರೂಪಾಯಿ 1ಕೋಟಿ 56 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಶಾಸಕ ಮಹೇಂದ್ರ ತಮಣ್ಣವರ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಇಓ ಬಸವರಾಜಪ್ಪ.ಆರ್, ಹಾರೂಗೇರಿ ಠಾಣಾ ಪಿಎಸ್ಐ ಮಾಳಪ್ಪ ಪೂಜಾರಿ, ಕಾಂಗ್ರೆಸ್ ಪಕ್ಷದ ಕುಡಚಿ ಬ್ಲಾಕ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಬಿಡಬ್ಲ್ಯೂಡಿ ಇಂಜಿನಿಯರ್ ಜಿ.ಎಂ.ಹಳ್ಯಪ್ಪಗೋಳ, ಗ್ರಾಪಂ ಉಪಾಧ್ಯಕ್ಷ ಕೆಂಪಣ್ಣ ಕುರನಿಂಗ, ಕಪ್ಪಲಗುದ್ದಿ ಗ್ರಾಮ ಪಂಚಾಯತ ಮಾಜಿ ಉಪಾಧ್ಯಕ್ಷ ಬರಮಪ್ಪ ಬಾಗೋಜಿ, ಗುತ್ತಿಗೆದಾರ ಸದಾಶಿವ ದಳವಾಯಿ, ಗ್ರಾಮ ಪಂಚಾಯತ ಸದಸ್ಯ ಗುರುಪಾದ ಚೌಗಲಾ, ಅಶೋಕ ಚೌಗಲಾ, ರಾಜು ಹುಕ್ಕೇರಿ, ದುಂಡಪ್ಪ ಪಾಟೀಲ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಿದಾನಂದ ಭೋಜಣ್ಣವರ, ಪ್ರಧಾನ ಗುರುಮಾತೆ ಎಸ್.ಎಸ್.ಬಸನಗೌಡರ,ಸೇರಿದಂತೆ ಇನ್ನೂ ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!