ಹಳ್ಳೂರ .ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಮಹಾವಿದ್ಯಾಲಯ ಮೂಡಲಗಿ ಇವರ ಸಂಯುಕ್ತ ಆಶ್ರಯದಲ್ಲಿ ಸನ್ 2024 -25 ನೇ ಸಾಲಿನ ಪ್ರಥಮ ಪಾಲಕರ ಸಭೆಯಲ್ಲಿ ಸಭೆಗೆ ಎಲ್ಲಾ ಪಾಲಕರು ಮಹಾವಿದ್ಯಾಲಯಕ್ಕೆ ಆಗಮಿಸಿದ್ದರು ಮತ್ತು ಮಕ್ಕಳ ಶಿಕ್ಷಣದಲ್ಲಿ ಆಗುವ ಕುಂದು ಕೊರತೆಗಳ ಬಗ್ಗೆ ಪಾಲಕರ ಸಭೆಯಲ್ಲಿ ಚರ್ಚೆ ಮಾಡಲಾಯಿತು.
ಪಾಲಕರ ಸಭೆಯ ಕುರಿತು ಕಂಪ್ಯೂಟರ್ ವಿಷಯದ ಉಪನ್ಯಾಸಕರಾದ ಸೋಮನಾಥ್ ಇಜೇರಿ ಸರ ಮಾತನಾಡಿ ಮಕ್ಕಳ ಅಭಿವೃದ್ಧಿಗಾಗಿ ಹಾಗೂ ಮಕ್ಕಳ ಯಶಸ್ಸು ಕಾಣಬೇಕಾದರೆ ಪಾಲಕರ ಪಾತ್ರ ಮುಖ್ಯವಾದದ್ದು ಎಂದು ತಿಳಿಸಿದರು .
ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಕಾಲೇಜಿನ ಪ್ರಾಚಾರ್ಯರಾದ ಗೋವಿಂದ್ ಕಳ್ಳಿಮನಿ ಸರ್ ಮಾತನಾಡಿ ಮಕ್ಕಳಿಗೆ ಸಿಗುವ ಸೌಲಭ್ಯಗಳು ಮತ್ತು ಪಾಲಕರ ಸಭೆಯ ಮಹತ್ವವನ್ನು ಅದರ ಪ್ರಯೋಜನಗಳನ್ನು ತಿಳಿಸಿದರು.
ಈ ಸಮಯದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಕಿರಣ ಉಣ್ಣಿ. ಶಿವಾನಂದ ಜಾಡಗೌಡರ. ಶಂಕರ ಪಾಟೀಲ. ಸುಶ್ಮಿತಾ ನಾಯಕ. ಪರಜಾನಾ ಖತಿಬಾ. ಜಯಶ್ರೀ ಗೋಕಾಕ.ಸುಜಾತ ದಾನನ್ನವರ. ಹಾಗೂ ನಿಲಯ ಪಾಲಕಿಯರಾದ ಎಸ್ ಎಸ್ ಭೋಜ. ಉಪಸ್ಥಿತರಿದ್ದರು . ಉಪನ್ಯಾಸಕ ಸಿದ್ದಾರ್ಥ ಕರಿಭಿಮಗೋಳ ನಿರೂಪಿಸಿ . ಉಪನ್ಯಾಸಕರಾದ ಕಿರಣ ಉಣ್ಣಿ ವಂದಿಸಿದರು.