ರಾಯಬಾಗದಲ್ಲಿ 537ನೇ ಕನಕ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾ‌ರ್ ವಿರುದ್ಧ ಸ್ವಾಮೀಜಿ ಬೇಸರ

Share the Post Now

ಬೆಳಗಾವಿ.

ರಾಯಬಾಗ: ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘ ರಾಯಬಾಗ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 537ನೇ ಜಯಂತೋತ್ಸವಕ್ಕೆ ಕನಕದಾಸರ ಭಾವಚಿತ್ರಕ್ಕೆ ಮಕನಾಪೂರ ಸೋಮೇಶ್ವರ ಸ್ವಾಮೀಜಿ, ಶಾಸಕ ದುರ್ಯೋಧನ ಐಹೊಳೆ ಚಾಲನೆ ನೀಡಿದರು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಯಬಾಗ ಶಾಸಕ ದುರ್ಯೋಧನ ಐಹೋಳೆ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸದೇ, ಅವರ ಜಯಂತಿಯನ್ನು ಸರ್ವಸಮಾಜದಿಂದ ವಿಜೃಂಭಣೆಯಿಂದ ಆಚರಿಸಬೇಕು ಸಮಾಜದಲ್ಲಿದ್ದ ಜಾತಿಗಳ ಮಧ್ಯೆ ಇರುವ ಕಂದಕವನ್ನು ತಮ್ಮ ಸಾಹಿತ್ಯದಲ್ಲಿ ಮಾರ್ಮಿಕವಾಗಿ ಬೋಧಿಸಿ, ದಾಸ ಸಾಹಿತ್ಯಕ್ಕೆ ವೈಚಾರಿಕತೆಯ ನೆಲೆಗಟ್ಟನ್ನು ಕಲ್ಪಿಸಿದವರು ಕನಕದಾಸರು ಎಂದರು.

ರಾಯಬಾಗ ಹೊಸ ಸಂಯುಕ್ತ ಪದವಿಪೂರ್ವ ಕಾಲೇಜ ಉಪನ್ಯಾಸಕ ಸಂಜಯ ಟೇಳೆ ಉಪನ್ಯಾಸ ನೀಡಿದರು.

ನಂತರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ನೂತನ ಕ್ರಾಂತಿವೀರ ಬ್ರಿಗೇಡ್ ಅಧ್ಯಕ್ಷ ಮಖನಾಪೂರ ಪೀಠದ ಸೋಮೇಶ್ವರ ಸ್ವಾಮೀಜಿ  ರಾಯಬಾಗ ತಹಶೀಲ್ದಾರ್ ಸುರೇಶ ಮುಂಜೆ ನಡೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ತಹಶೀಲ್ದಾರ್ ಸುರೇಶ್ ಮುಂಜೆ ತಮ್ಮ ನೇತೃತ್ವದಲ್ಲೇ ನಡೆದಿರುವ ಒಂದು ತಾಲೂಕಾ ಮಟ್ಟದ ಮಹಾಪುರುಷರ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಕೆಲಸದ ನೆಪ ಒಡ್ಡಿ ಬೇಜವಾಬ್ದಾರಿತನದಿಂದ ಕಾರ್ಯಕ್ರಮವನ್ನು ಅರ್ಧದಲ್ಲಿಯೇ ಬಿಟ್ಟು ಹೋಗಿದ್ದಲ್ಲದೆ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡುತ್ತಿದ್ದವರಿಗೆ ಬೇಗ ಭಾಷಣ ಮುಗಿಸುವಂತೆ ಬಿಳಿ ಹಾಳೆಯಲ್ಲಿ ಬರೆದು ಸಂಘಟಕರ ಕಡೆಯಿಂದ ಸೂಚನೆ ನೀಡಿರುವ ಬಗ್ಗೆಯೂ ಆಕ್ಷೇಪಿಸಿದರು.

ಉಪಾನ್ಯಾಸಕರಿಗೆ ಮಾತು ನಿಲ್ಲಿಸುವಂತೆ ಚೀಟಿ ಕೊಟ್ಟದ್ದು ಬಹಳ ನೋವು ತರಿಸಿದೆ. ಮನೆಯಲ್ಲಿ, ಕಚೇರಿಗಳಲ್ಲಿ ಉಪನ್ಯಾಸಕರನ್ನು ಕರೆಯಿಸಿ ಬೋಧನೆ ಮಾಡಲು ಸಾಧ್ಯವೇ? ಸಾಧು ಸಂತರ ಬಗ್ಗೆ ಇಂತಹ ಅಧಿಕಾರಿಗಳು ತಿಳಿದುಕೊಳ್ಳುವುದು ಯಾವಾಗ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗಣ್ಯರಿಂದ ಸಾಹಿತಿ ಶೃತಿ ಹೆಗ್ಗೆಯವರ ಶೃತಿ ಗಜಲ್ ಲೋಕಾರ್ಪಣೆ ಮಾಡಿದರು, ನಂತರ ಪಿಎಚಡಿ ಮಾಡಿದ, ಪಿಎಸ್ಐ ಹುದ್ದೆಗೆ ಆಯ್ಕೆಯಾದ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಿ ಪ್ರೋತ್ಸಾಹಿಸಿದರು.

ಒಂದು ತಾಲೂಕಾ ಮಟ್ಟದ ಕಾರ್ಯಕ್ರಮದಲ್ಲಿ ಸಂಖ್ಯೆಯ ಅಭಾವ ಎದ್ದು ಕಾಣುತ್ತಿತ್ತು.

ಹಾರೂಗೇರಿ ಪಟ್ಟಣದಲ್ಲಿ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು

ಕಾರ್ಯಕ್ರಮದಲ್ಲಿ ತಹಶೀಲ್ದಾರ ಸುರೇಶ ಮುಂಜೆ, ಸಮಾಜ ಕಲ್ಯಾಣ  ಅಧಿಕಾರಿ ವಿ.ಎಸ್.ಚಂದರಗಿ, ಸಿಪಿಐ ಬಿ.ಎಸ್.ಮಂಟೂರ, ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಹಾಡಕಾರ, ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಆರ್.ಬಿ.ಮನವಡ್ಡರ, ಡಾ.ಎಮ್.ಬಿ.ಪಾಟೀಲ, ಎಸ್.ಜಿ.ವಲ್ಯಾಪೂರ, ಜೀರಗ್ಯಾಳೆ ಸರ, ನಿಂಗಪ್ಪ ಪೂಜಾರಿ, ಆರ್.ಎಚ್.ಗೊಂಡೆ, ಏಕನಾಥ ಮಾಚಕನೂರ, ಬೀರಪ್ಪ ಗೊಂಡೆ, ರಮೇಶ ತೋಳೆ, ಲಕ್ಷ್ಮಣ ನಾಯಿಕ, ಗೋಪಾಲ ಕೊಚೆರಿ, ಆಕಾಶ ಬನಹಟ್ಟಿ ಸೇರಿ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸುಭಾಷ್ ವಲ್ಯಾಪೂರ ಜೀರ್ಗ್ಯಾಳೆ ಸರ ನಿರೂಪಿಸಿದರು.

Leave a Comment

Your email address will not be published. Required fields are marked *

error: Content is protected !!