ಬೆಳಗಾವಿ.ಹಳ್ಳೂರ.
ಪ್ರಧಾನ ಮಂತ್ರಿ ಯೋಜನೆಗಳಲ್ಲೊಂದಾದ ಇಂಟರ್ನಶಿಪ್ ಮತ್ತು ಆಪರೆಂಟಿಸ್ ಯೋಜನೆಗಳನ್ನು ತರಬೇತುದಾರರು ಪೂರ್ಣ ಪ್ರಮಾಣದಲ್ಲಿ ತಿಳಿದುಕೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಸಮೀರವಾಡಿ ಗೋದಾವರಿ ಬಯೋರಿಫೈನರಿಜ್ ಲಿಮಿಟೆಡ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ – (HR), M ರಾಮಚಂದ್ರ ಹೇಳಿದರು.
ಅವರು ಸಮೀಪದ ರಬಕವಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಶಿಶುಕ್ಷು (Apprenticeship) ತರಬೇತಿ ಮತ್ತು ಪ್ರಧಾನ ಮಂತ್ರಿಗಳ ಇಂಟ್ರನ್ ಶಿಪ್ ಯೋಜನೆಯ ಅರಿವು ಕಾರ್ಯಗಾರ ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕರಾಗಿ ಮಾತನಾಡಿ ತರಬೇತು ದಾರರರು ಹೇಳುವಾಗ ಸರಿಯಾಗಿ ಗಮನದಲ್ಲಿಟ್ಟು ಕೊಂಡು ಸಾಗಿದರೆ ಒಳ್ಳೆಯದು ಹಾಗು ಶಿಸ್ತು ಮತ್ತು ಶಾಂತಿ ಶಿಕ್ಷಣದ ತಳಹದಿ ಅನ್ನುವ ಮಾತನ್ನು ತರಬೇತುದಾರರಿಗೆ ಕಿವಿ ಮಾತು ಹೇಳಿದರು. ನಂತರ ತರಬೇತುದಾರರ ಜೊತೆ ಸಂವಾದ ನಡೆಸಿ ಪ್ರಶ್ನೆಗಳಿಗೆ ಉತ್ತರಿಸಿದರು.
ಸಂಸ್ಥೆಯ ಪ್ರಾಚಾರ್ಯರಾದ ಸಿ ಪಿ ಪಟ್ಟಣಶೆಟ್ಟಿ ಮಾತನಾಡಿ ಶೈಕ್ಷಣಿಕ ಅವಧಿ ಮತ್ತು ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಸಿಸುವ ಅವಧಿಯ ಬಗ್ಗೆ ಮಾತನಾಡಿದರು. ಡಿ ಪಿ ಮಲಾಬದಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮವನ್ನು ಆರ್ ಬಿ ಬಿರಾದಾರ ನಿರೂಪಿಸಿ ವಂದಿಸಿದರು.