ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಿಡಕಲ್ ಗ್ರಾಮದ ಶ್ರೀ ಕನಕದಾಸ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಕವಿರತ್ನ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಶ್ರೀ ಬೀರೇಶ್ವರ ಪ್ರೌಢ ಶಾಲೆ ಹಿಡಕಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸನ್ ಪ್ರಸಕ್ತ ಸಾಲಿನ ಬೇಸಿಗೆ ಕಲಿಕಾ ಶಿಬಿರದ ಮುಕ್ತಾಯ ಸಮಾರಂಭವು ಹಿಡಕಲ್ ಗ್ರಾಮ ದಲ್ಲಿ ಇತ್ತೀಚೆಗೆ ಜರುಗಿತು.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಮೂಡಲಗಿಯ ಆರ್. ಡಿ. ಎಸ್. ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರು, ಸಾಹಿತಿ ಪ್ರೊ. ಟಿ. ಎಸ್. ವಂಟಗೂಡಿ ಮಾತನಾಡಿ “ಶಿಕ್ಷಕರು ದೀಪಗಳಿದ್ದಂತೆ ದೀಪಗಳು ತಮ್ಮನ್ನು ತಾವು ಸುಟ್ಟುಕೊಂಡು ಇನ್ನೊಬರಿಗೆ ಬೆಳಕು ನೀಡುವಂತೆ ಶಿಕ್ಷಕರು ತಮ್ಮ ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ನೀಡುವ ಹಣತೆಗಳಿದ್ದಂತೆ ಪ್ರತಿಯೊಬ್ಬರು ಬೇಸಿಗೆ ಶಿಬಿರದ ಸದುಪಯೋಗ ಪಡೆದುಕೊಂಡು ಜ್ಞಾನದ ಬೆಳಕು ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರೇಖಾ ಮದುಸೂಧನ ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಎಮ್. ಆಯ್. ಪಾಟೀಲ, ಡಿ. ಎಮ್. ಕೋಳಿ, ಎಮ್. ವ್ಹಿ ಅಂಟೀನ, ಎಮ್. ಎಸ್. ಕರಿಗಾರ ಸಿ. ಎಸ್. ಮಾಂಗ, ಪ್ರಭಾಕರ ಅವಟೆ, ಶೋಭಾ ಬಡಿಗೇರ, ರಾಜಶ್ರೀ ಪಾಟೀಲ, ಮಹಾನಂದಾ ಬಡಿಗೇರ, ಬಿ ಎಮ್. ಮಠಪತಿ,ಹಾಗೂ ಪ್ರತಿಭಾ ಪಾರ್ಥನಳ್ಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.ಪ್ರಧಾನ ಗುರುಗಳಾದ ಶ್ರೀ ಬೀರಪ್ಪ ತಡಸಲೂರ ಸ್ವಾಗತಿಸಿದರು. ಎಸ್ ಡಿ. ಹೊಸಟ್ಟಿ ನಿರೂಪಿಸಿದರು. ವ್ಹಿ.ಕೆ.ಬೆಳಗಲಿ ವಂದಿಸಿದರು.
ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*





