ಹಳ್ಳೂರ ತೋರಿಕೆಯ ದಾನ ಮಾಡಿದ್ದೂ ದೇವರಿಗೆ ಸಲ್ಲುವುದಿಲ್ಲ ಗುಪ್ತ ದಾನ ದ್ಯಾನ ದೇವರಿಗೆ ಸಲ್ಲುತ್ತದೆ. ಮಾಡಿದೆನೆಂದು ಮನದೊಳು ಸುಳಿದರೆ ಏಡಿಸಿ ಕಾಡಿತು ಶಿವನ ಡಂಗುರ. ಹಿರಿಯರಿಗೆ ಗೌರವ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕಪರಟ್ಟಿ ಶ್ರೀ ಬಸವರಾಜ ಶ್ರೀಗಳು ಹೇಳಿದರು.
ಅವರು ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವ ನಿಮಿತ್ಯ ಹಮ್ಮಿಕೊಂಡ ದೇವಿ ಪುರಾಣ ಕಾರ್ಯಕ್ರಮದಲ್ಲಿ ಶುಕ್ರವಾರ ದಂದು ಮಾತನಾಡಿ ಮನುಷ್ಯ ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನ ಮಾನವನ್ನು ಪಡೆಯಲು ಮೊದಲು ಒಳ್ಳೆಯ ಕೆಲಸ ಕಾರ್ಯ ಮಾಡಿ ಸಂಸ್ಕಾರ ನೀತಿ ಮಾರ್ಗದಲ್ಲಿ ಸಾಗಬೇಕು ಧರ್ಮವನ್ನು ರಕ್ಷಣೆ ಮಾಡಿದರೆ ದರ್ಮ ನಮ್ಮನ್ನು ಸದಾಕಾಲ ರಕ್ಷಣೆ ಮಾಡುತ್ತದೆ. ಭಗವಂತನ ನಾಮಸ್ಮರಣೆ ಮಾಡುವಾಗ ಅಭಿಮಾನ ಬಿಟ್ಟು ಭಕ್ತಿ ಪೂರ್ವಕವಾಗಿ ಮಾಡಬೇಕು. ದೇವಿ ಪುರಾಣವು ದೇಹದ ಶಕ್ತಿಯನ್ನು ವೃದ್ಧಿಸುತ್ತದೆ. ದೇವಿ ಪುರಾಣದಲ್ಲಿ ಆಗಾಧವಾದ ಶಕ್ತಿ ಇದೆ ಎಂದು ಹೇಳಿದರು.
ದುಂಡಪ್ಪ ಸಂತರು ಮಾತನಾಡಿ ಗೋರಾ ಕುಂಬಾರನ ಚರಿತ್ರೆ ಬಗ್ಗೆ ಹೇಳಿದರು. 25 ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಮುದ್ದು ಮಕ್ಕಳು ದುರ್ಗಾ ದೇವಿ, ಮಹಿಷಾಶೂರ ಮರ್ಧಿನಿ ಹಾಗೂ ಆನೇಕ ದೇವರ ವೇಷ ಭೂಷಣ ಧರಿಸಿದ್ದು ವಿಶೇಷ ಕಂಡು ಬಂದಿತ್ತು. ಇದೇ ಸಂದರ್ಭದಲ್ಲಿ ಪಂಚಮಸಾಲಿ ಹಾಗೂ ತೋಟಗೇರ ದೈವದ ಸಮಾಜ ಬಾಂಧವರು, ಗುರು ಹಿರಿಯರಿದ್ದರು. ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು.