ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭ ಜರುಗಿತು

Share the Post Now

ಹಳ್ಳೂರ ರಾಷ್ಟ್ರೀಯ ಸೇವಾ ಯೋಜನೆಯಿಂದ ಸಮಾಜದಲ್ಲಿ ಬದುಕುವ ಮಾರ್ಗ ತೋರಿಸಿ ಮನುಷ್ಯನನ್ನು ಉನ್ನತ ಮಟ್ಟಕ್ಕೆ ಬೆಳೆಯಲು ದಾರಿ ಮಾಡಿಕೊಡುತ್ತದೆಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರಂಗಪ್ಪ ಗುಜನಟ್ಟಿ ಹೇಳಿದರು.

ಅವರು ಹಳ್ಳೂರ ಗ್ರಾಮದಲ್ಲಿ 7 ದಿನಗಳ ಕಾಲ ನಡೆದ ಮೂಡಲಗಿ ಕಲಾ ವಾಣಿಜ್ಯ ವಿಜ್ಞಾನ ಮತ್ತು ಸಮಾಜ ಕಾರ್ಯ ಮಹಾವಿದ್ಯಾಲಯದಿಂದ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಪುಸ್ತಕ ಜೊತೆಗೆ ಪಟ್ಟೇತರ ಚಟುವ ಟಿಕೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕ ಹಾಗೂ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.

ಶಿಕ್ಷಕ ವಾಯ್ ಬಿ ಕಳ್ಳಿಗುದ್ದಿ ಮಾತನಾಡಿ ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ ಒಳ್ಳೆಯ ಜೀವನ ರೂಪಿಸಿಕೊಳ್ಳಿ. ಕೇವಲ ಶಿಕ್ಷಣ ಕಲಿತರೆ ಸಾಲದು ಬದುಕುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮನೆ ಅಷ್ಟೇ ನಡೆಸುವುದು ಸರಿಯಲ್ಲ ಬೇರೆಯವರಿಗೆ ಸಹಾಯ ಸಹಕಾರ ನೀಡುವ ಮನೋಭಾವನೆ ಬೆಳೆಸಿಕೊಂಡು ದೇಶ ಕಟ್ಟುವ ಆದರ್ಶ ನಾಯಕರಾಗಬೇಕು. ದೇಶ, ಸಮಾಜ ಸೇವೆ ಮಾಡಿ ಸಾಕಷ್ಟು ಜನ ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನ ಮಾನವನ್ನು ಪಡೆದಿದ್ದಾರೆ ಎಂದು ಹೇಳಿದರು.

ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಮಾತನಾಡಿ ರಾಷ್ಟೀಯ ಸೇವಾ ಯೋಜನೆಯಿಂದ ಮೇಲು ಕೀಳೆಂಬ ಭಾವನೆ ಬಿಟ್ಟು ಎಲ್ಲರೂ ಒಂದಾಗಿ ಬಾಳಬೇಕು ಎಂದು ತೋರಿಸಿ ಮನುಷ್ಯನನ್ನು ಉನ್ನತ ಮಟ್ಟಕ್ಕೆ ಬೆಳೆಯಲು ಅವಕಾಶ ಮಾಡಿಕೊಡುತ್ತದೆ. ಯುವಕರು ಮೊಬೈಲ್, ಗುಟ್ಕಾ ದಂತ ಮಾದಕ ವಸ್ತುಗಳ ದಾಸರಾಗದೆ ಒಳ್ಳೆಯ ಶಿಕ್ಷಣ ಕಲಿತು ಉನ್ನತ ಮಟ್ಟದ ಸ್ಥಾನ ಮಾನವನ್ನು ಪಡೆಯಿರಿ. ಸಮಾಜದಲ್ಲಿ ಕೆಟ್ಟ ಕೆಲಸ ಮಾಡಲು ಮನಸ್ಸು ಮಾಡದೇ ಒಳ್ಳೆಯ ಕೆಲಸ ಕಾರ್ಯ ಮಾಡಿದರೆ ಸಮಾಜವೇ ನಮ್ಮನ್ನು ಬೆಳೆಸುತ್ತದೆ ಎಂದು ಹೇಳಿದರು. ಉಪನ್ಯಾಸಕರಾದ ಟಿ ಎಸ್ ಒಂಟಗೊಡಿ ಮಾತನಾಡಿ ಏನ್ ಎಸ್ ಎಸ್ ಎಸ್ ಅಂದರೆ ನನಗಲ್ಲ ನಿನಗೆ ನಾವು ಬದುಕಿ ಇನ್ನೊಬ್ಬರನ್ನು ಬದುಕುವ ದಾರಿ. ದೇಶ ಸಮಾಜ ಸೇವೆ ಈಶ ಸೇವೆ ವೆಂದು ಸಮಾಜ ಸೇವೆ ಮಾಡಿದರೆ ಸಕಲ ಸೌಬಾಗ್ಯಗಳು ದೊರೆಯುತ್ತವೆ ಎಂದು ಹೇಳಿದರು. ರಾಷ್ಟೀಯ ಸೇವಾ ಯೋಜನೆಗೆ ಸಹಾಯ ಸಹಕಾರ ನೀಡಿದ ಮಹನೀಯರಿಗೆ ಹಾಗೂ ಶಿಬಿರಾರ್ಥಿಗಳಿಗೆ ಸನ್ಮಾನ ಮಾಡಿ ಸವಿ ನೆನಪಿನ ಕಾಣಿಕೆ ನೀಡಿದರು. ಈ ಸಮಯದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ನೀಲವ್ವ ಮಲ್ಲಪ್ಪ ಹೊಸಟ್ಟಿ. ಉಪಾಧ್ಯಕ್ಷೆ ಜಯಶ್ರೀ ಮಿರ್ಜಿ. ಮಾಜಿ ತಾ ಪ ಸದಸ್ಯೆ ಸವಿತಾ ಡಬ್ಬಣ್ಣವರ. ಪಿ ಕೆ ಪಿ ಯೆಸ್ ಅಧ್ಯಕ್ಷ ಸುರೇಶ ಕತ್ತಿ. ಕುಮಾರ ಲೋಕನ್ನವರ. ಹಣಮಂತ ತಾಳಿಕೋಟಿ. ಭೀಮಪ್ಪ ಹೊಸಟ್ಟಿ. ಮಾದೇವ ಪೂಜೇರಿ. ಗಂಗಪ್ಪ ಅಟ್ಟಮಟ್ಟಿ.ಕ ರಾ ಯ ಸಂ ಒಕ್ಕೂಟ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ. ಗೀತಾ ಹಿರೇಮಠ. ಪೂಜಾ ಮಾವರಕರ. ಶ್ರೀಶೈಲ ಹಡಪದ. ಎಸ್ ಬಿ ಗೋಟುರ. ಭಗವಂತ ರೋಡ್ಡನವರ. ಗುರುಪಾದ ಕೂಲಿಗೊಡ. ನಾಗಯ್ಯ ಹಿರೇಮಠ. ಮುತ್ತು ಕಲ್ಲೋಳಿ. ಗುರು ಕೂಲಿಗೊಡ. ಚಿನ್ನು ಸಿದ್ದಾಪೂರ.ಅಭೂಬುಕರ್ ಡಾಂಗೆ . ಶ್ರೀಶೈಲ ಹುಲ್ಯಾಳ. ಕಾವ್ಯಾ ಕಲಾಲ. ಕಿರ್ತಿ ರಡ್ಡಿ ಒಂಟಗೊಡಿ. ಪೂಜಾ ಆಸಂಗಿ.ಶಿಬಿರಾದಿಕಾರಿ ಪಿ ಬಿ ಚೌಡಕಿ. ಸೇರಿದಂತೆ ಶಿಭೀರಾರ್ಥಿಗಳು ಶಾಲೆಯ ಶಿಕ್ಷಕವೃಂದದವರು ಹಾಗೂ ಗ್ರಾಮದ ಗುರು ಹಿರಿಯರಿದ್ದರು. ಕಾರ್ಯಕ್ರಮವನ್ನು ಶಂಕರ ಪಾಟೀಲ ಸ್ವಾಗತಿಸಿ. ಸಂಜೀವ ಮಂಟೂರ ನಿರೂಪಿಸಿ. ಎಮ ಎಸ್ ಒಡೆಯರ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!