ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಉರ್ದು ಶಾಲಾ ಆವರಣದಲ್ಲಿ ಮಾದರಿ ಶಾಲೆ, ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ, ಉರ್ದು ಪ್ರೌಢಶಾಲೆ ಹಾಗೂ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಗೈದು ಸಿಆರಪಿ ಉಮರಖಾನ ಮಾತನಾಡಿದರು.
ಸಂವಿಧಾನದ ಶಿಲ್ಪಿಗಳು ವಿಶ್ವದ ಎಲ್ಲ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಬಹಳ ಅಚ್ಚುಕಟ್ಟಾಗಿ ಸರಳ, ಕಠಿಣ ಗುಣಗಳನ್ನು ಹೊಂದಿರುವ ನಮ್ಮ ಸಂವಿಧಾನವನ್ನು ಬರೆದಿದ್ದಾರೆ. ಹಲವು ಧರ್ಮ, ಭಾಷೆ ಹಾಗೂ ವರ್ಣಗಳನ್ನು ಹೊಂದಿರುವ ಹೂಗುಚ್ಚದಂತಿರುವ ದೇಶ ಯಾವುದಾದರೂ ಇದ್ದರೆ ಅದು ನಮ್ಮ ಭಾರತವಾಗಿದೆ. ವಿಶ್ವದ ಅತಿ ದೊಡ್ಡ ಮತ್ತು ಯಶಸ್ವಿ ಪ್ರಜಾಪ್ರಭುತ್ವ ಎಂಬ ಗೌರವ ನಮಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಕನ್ನಡ,ಉರ್ದು, ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಂವಿಧಾನ ಪೀಠಿಕೆ ಹಾಗೂ ಸಂವಿಧಾನ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ದಲಿತ ಸಂಘಟನೆ ಮುಖಂಡ ರೋಹನ್ ಕಾಂಬಳೆ, ಪಿಎಂಶ್ರೀ ಮುಖ್ಯೋಪಾಧ್ಯಾಯರಾದ ಮಹ್ಮದಲಿ ಪಟೇಲ, ದೇಸಾಯಿ, ಯಲ್ಲಟ್ಟಿ, ಹಾಗೂ ಶಿಕ್ಷಕರಾದ ಭಂಡಗಾರ, ಮಾಡಲಗಿ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಸಂಜೀವ ಬ್ಯಾಕುಡೆ, ರಾಯಬಾಗ