ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್ ಠಾಣೆಗೆ ಇತ್ತೀಚೆಗೆ ಆಗಮಿಸಿದ ಪಿಎಸ್ಐ ಶ್ರೀಮತಿ ರೇಣುಕಾ ಜಕನೂರ ಅವರನ್ನು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ನ ಉಪಾಧ್ಯಕ್ಷರಾದ ಬಿ ಎಲ್ ಗಂಟಿ, ಮಹಿಳಾ ನಿರ್ದೇಶಕರಾದ ಶ್ರೀಮತಿ ಮಂಜುಳಾ ಗಲಗಲಿ, ಸುವರ್ಣ ಬಡಿಗೇರ್, ಪಾರ್ವತಿ ವಗ್ಗಾ, ಮಾಯಪ್ಪ ಶಿರಡೋಣಿ,ಶಿವಪುತ್ರ ರಾಯ್ಕರ್, ರಾಜೀವ್ ವಗ್ಗಾ ಮುಂತಾದವರು ಹಾರೂಗೇರಿ ಪೊಲೀಸ್ ಠಾಣೆಗೆ ಆಗಮಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರಾದ ಬಿ ಎಲ್ ಘಂಟಿ,ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು. ಜನನಿಯಿಂದ ಪಾಠ ಕಲಿತ ಜನರು ಧನ್ಯರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳಿದರು.