ಬೆಳಗಾವಿ
ಹಾರೂಗೇರಿ :ಅಂಬಿಕಾತನಯದತ್ತ ಎಂಬ ಕಾವ್ಯ ನಾಮದಿಂದ ಕನ್ನಡ ಜನಮಾನಸದಲ್ಲಿ ಅಚ್ಚಳಿಯದ ಕವಿಯಾಗಿದ್ದ ದ ರಾ ಬೇಂದ್ರೆಯವರ 127ನೆಯ ಜನ್ಮ ಜಯಂತಿ ಆಚರಣೆ ಪಟ್ಟಣದ ಎಸ್ ಪಿ ಎಂ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡಕ್ಕೆ ಎರಡನೇ ಜ್ಞಾನಪೀಠ ಪ್ರಶಸ್ತಿ ತಂದಕೊಟ್ಟ ಶ್ರೇಷ್ಠ ಕನ್ನಡದ ಪ್ರಸಿದ್ಧ ಕವಿ,ಕಾದಂಬರಿಕಾರ,ವಿಮರ್ಶಕ, ಶಬ್ದಗಾರುಡಿಗ ದ ರಾ ಬೇಂದ್ರೆ ಅವರ ಜನ್ಮ ದಿನಾಚರಣೆ ಯನ್ನು ಆಚರಿಸಲಾಯಿತು.ಸಮಾರಂಭದ ಮುಖ್ಯ ಅತಿಥಿಯಾಗಿ ಬಂಡಾಯ ಯುವ ಸಾಹಿತಿ, ಜ್ಞಾನ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ. ವಿಲಾಸ ಕಾಂಬಳೆ ಮಾತನಾಡಿ, ಬೇಂದ್ರೆಯವರ ಸಾಹಿತ್ಯ ನಾಡಿಮಿಡಿತದ ಲಾಲಿತ್ಯವಿದ್ದಂತೆ.ದ.ರಾ.ಬೇಂದ್ರೆ ಅವರು ಧಾರವಾಡದಲ್ಲಿ ಗೆಳೆಯರ ಗುಂಪು ಕಟ್ಟಿಕೊಂಡು ಸಾಹಿತ್ಯ ಕೃಷಿ ಮಾಡಿ,ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿ ಇರುವಂತಹ ಪ್ರತಿಯೊಂದು ನುಡಿಗಳು, ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ,ಕವಿಗಳಿಗೆ,ಸಾಹಿತಿಗಳಿಗೆ ,ಮಕ್ಕಳಿಗೆ ಸ್ಫೂರ್ತಿಯ ಸೆಲೆ ಯಾಗಿದ್ದರು ಧಾರವಾಡ ಅಜ್ಜ ಎಂದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ. ಎಲ್ ಎಸ್, ಧರ್ಮಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಪ್ರೊ ಎಸ್ ಬಿ ಕಲಚಿಮ್ಮಡ,ಪ್ರತಿಭಾ ಪಾಟೀಲ್, ಡಾ. ಸಿ ಡಿ ಠಾಣೆ, ಪ್ರೊ ನಾಯಿಕ, ಹೆಚ್ ಎಸ್ ಜೋಗನ್ನವರ್,ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೌಂದರ್ಯ ಮೆಳವಂಕಿ ಸ್ವಾಗತಿಸಿದರು, ಧಾನೇಶ್ವರಿ ಪಾಟೀಲ್ ಸಭಿಕರನ್ನು ಪರಿಚಯಿಸಿದರು.
ಅಂಜಲಿ ಹೊಸಮನಿ ನಿರೂಪಿಸಿದರು.