ಬೆಳಗಾವಿ
ಹಾರೂಗೇರಿ : ಶಿಕ್ಷಣ ಇಲಾಖೆಯ ಆದೇಶದಂತೆ ಇಂದು ಜರುಗಿದ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ. ಮೊದಲ ವಿಷಯವಾಗಿ ಕನ್ನಡ ಪರೀಕ್ಷೆಯನ್ನು ಎದುರಿಸಿದ ವಿದ್ಯಾರ್ಥಿಗಳು ಸಂತೋಷದಿಂದ ಪರೀಕ್ಷಾ ಕೊಠಡಿಯಿಂದ ಹೊರಬಂದರು. ಹಾರೂಗೇರಿ ಪಟ್ಟಣದ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 985 ವಿದ್ಯಾರ್ಥಿಗಳ ಪಟ್ಟಿ ಇದ್ದು ಅದರಲ್ಲಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಒಟ್ಟು 345 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಒಟ್ಟು 340 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಹಾವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಒಟ್ಟು 300 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು ಗೈರುಹಾಜರಾಗಿದ್ದು ಹಾಜರಾದ ಉಳಿದೆಲ್ಲ ವಿದ್ಯಾರ್ಥಿಗಳ ಸುಗಮವಾಗಿ ಸಾಗಿದೆ. ಬಿ ಎಂ ಜಮಖಂಡಿ ,ಬಿ ಎಂ ಹಾದಿಮನಿ, ಎಂ ವಿ ಕೋಳೇಕರ ಬೇರೆ ಬೇರೆ ಕೇಂದ್ರಗಳ ಮುಖ್ಯ ಪರವೀಕ್ಷನಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಶಿಕ್ಷಕರು ಪರೀಕ್ಷಾರ್ಥಿಗಳನ್ನು ಗುಲಾಬಿ ಹೂವು ಕೊಡುವುದರ ಮೂಲಕ ಸ್ವಾಗತಿಸಿದರು