ಪ್ರಪಂಚದಲ್ಲಿ ಶ್ರೇಷ್ಠ ಶ್ರೀಮಂತ ಸಂಪತ್ತು ಎಂದರೆ ಜ್ಞಾನ:ಪ್ರೊ.ಟಿ.ಎಸ್.ವಂಟಗೂಡಿ

Share the Post Now

ರಾಯಬಾಗ: ವಿಶ್ವದಲ್ಲಿ ಅತೀ ಶ್ರೇಷ್ಠವಾದ ಶ್ರೀಮಂತವಾದ ಸಂಪತ್ತು ಎಂದರೆ ಜ್ಞಾನ ಎಂದು ಮೂಡಲಗಿ ಪಟ್ಟಣದ ಆರ್.ಡಿ.ಎಸ್. ಪದವಿ ಕಾಲೇಜಿನ ಕನ್ನಡ ಅಧ್ಯಾಪಕರಾದ ಸಾಹಿತಿ ಪ್ರೊ.ಟಿ.ಎಸ್.ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು.

ಅವರು ತಾಲೂಕಿನ ಹಾರೂಗೇರಿ ಪಟ್ಟಣದ ಶ್ರೀ ಶಾರದಾ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಇತ್ತೀಚಿಗೆ ಜರುಗಿದ “ಜ್ಞಾನಸುದೆ” ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಸತತ ಪ್ರಯತ್ನ ಏಕಾಗ್ರತೆ ಸಮಯಪ್ರಜ್ಞೆ ಅಳವಡಿಸಿಕೊಂಡು ಜ್ಞಾನ ಸುಧೆ ಪಡೆದು ಜ್ಞಾನ ರತ್ನಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಮಾರ್ಮಿಕವಾಗಿ ಕಿವಿ ಮಾತುಗಳನ್ನು ಹೇಳಿದರು.
ಶ್ರೀ ಆರ್.ಬಿ.ಕುಂಬಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಕಾರ್ಯದರ್ಶಿಗಳಾದ ಶ್ರೀಮತಿ ಗೀತಾ ಎಂ ಮಾಳಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಲವು ವಿದ್ಯಾರ್ಥಿಗಳು ಅನಿಸಿಕೆಗಳನ್ನು ಸೊಗಸಾಗಿ ಹಂಚಿಕೊಂಡರು. ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಆಗಮಿಸಿದ ಗಣ್ಯರಿಂದ ಬಹುಮಾನ ಸ್ವೀಕರಿಸಿದರು. ಕವಿತಾ ಕುಂಬಾರ, ಪ್ರಿಯಾ ಬ. ಬಾಳೋಲ, ಪ್ರಿಯಾಂಕಾ ಸುತಾರ, ಬಸವರಾಜ ಬಳೋಲ,ಎಸ್.ಎಸ್.ಆಶ್ರಿತ, ಅಶೋಕ ಗಣಿ, ಮೇಘಾ ಶಿಂಗೆ,ಸುಧಾ ಬಡಿಗೇರ, ಕವಿತಾ ಸೊಂಡೂರ, ಹಾಗೂ ಅನೀಲ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಿಕ್ಷಕಿ ಪ್ರಿಯಂಕಾ ಸುತಾರ ಸ್ವಾಗತಿಸಿದರು. ಅಶೋಕ ಗಲಗಲಿ ನಿರೂಪಿಸಿದರು. ಕೊನೆಗೆ ವಿಜಯ ಕಂಬಾರ ವಂದಿಸಿದರು.

ವರದಿ:~ಡಾ.ಜಯವೀರ ಎ.ಕೆ
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!