ಬೆಳಗಾವಿ
ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಕೋಳಿಗುಡ್ ಆನಂದ ಆಶ್ರಮದ ಈ ಪುಣ್ಯ ಭೂಮಿಯಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಯಂಕಾಲ 4 ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಇತಿಹಾಸಕಾರ ಶ್ರೀ ಶಿವಾನಂದ ಹೆಳವರ ಆಗಮಿಸಿ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ತುಂಬಾ ಮುಖ್ಯ ಏಕೆಂದರೆ ಯುವಕರೆ ರಾಷ್ಟ್ರದ ಶಕ್ತಿ,ಯುವಕರಲ್ಲಿ ದೇಶ ಪ್ರೇಮ,ಸೇವಾ ಮನೋಭಾವನೆ, ಯಾವದೇ ಪಾಲಾಪೆಕ್ಷೆ ಇಲ್ಲದೆ ಸಕ್ರಿಯವಾಗಿ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ರಾಷ್ಟ್ರದ ಅಳಿವು, ಉಳಿವು ಕೂಡ ಯುವಕರಲ್ಲಿ ಕೈಯಲ್ಲಿ ಇದೆ, ನಾವೆಲ್ಲರೂ ಒಂದು ಅನ್ನೋ ಭಾವನೆ ಮಾತ್ರ ಇದ್ರೆ , ಈ ದೇಶವನ್ನು ಕಟ್ಟಲು ಸಾಧ್ಯ ,ಅದರ ಜೊತೆಗೆ ದೇಶದ ಸಂಪನ್ಮೂಲ ರಕ್ಷಣೆ,ನೀರು, ಗಿಡ ಮರ ಬೆಳೆಸೋದು ಯುವಕರ ಜವಾಬ್ಧಾರಿ ಎಂದು ಕಿವಿ ಮಾತು ಹೇಳಿದರು.ಅಧ್ಯಕ್ಷತೆಯನ್ನು ಡಿ ಎಂ ನಾಯ್ಕ ವಹಿಸಿ ಎಲ್ಲ ಸ್ವಯಂ ಸೇವಕರು ಸೇವಾ ಮನೋಭಾವನೆ,ಸಿಸ್ತು ,ಸಮಯ ಪಾಲನೆ,ಸತತವಾದ ಅಧ್ಯಯನ ರೂಡಿಸಿಕೊಳ್ಳಬೇಕು ಎಂದು ತಿಳಿ ಹೇಳಿದರು. ವೇದಿಕೆಯ ಮೇಲೆ ಶಿಬಿರದ ಅಧಿಕಾರಿಗಳಾದ ಪ್ರೊ ಬಿ ಎ ಕಾಂಬಳೆ, ಬಂಡಾಯ ಯುವ ಸಾಹಿತಿ ಡಾ. ವಿಲಾಸ್ ಕಾಂಬಳೆ ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ಲಕ್ಕಪ್ಪ ಕಾಂಬಳೆ ಹಾಡಿದರು. ಕಾರ್ಯಕ್ರಮ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಅಚ್ಚು ಕಟ್ಟಾಗಿ ಕುಮಾರಿ ಮನಿತಾ ಮಂಟೂರ ನಿರ್ವಹಿಸಿದರು.
ವರದಿ : ಸುನೀಲ್ ಕಬ್ಬೂರ