ಗಡಿನಾಡಲ್ಲಿ ಮೊಳಗಿದ ಕಲಿಕಾ ಹಬ್ಬದ ಕನ್ನಡ ಜನಪದ ಜಾತ್ರೆಯ ಕಹಳೆ

Share the Post Now

ಬೆಳಗಾವಿ

ವರದಿ :ಶಶಿಕಾಂತ ಪುಂಡಿಪಲ್ಲೇ

ಜಿಲ್ಲಾ ಪಂಚಾಯತ ಬೆಳಗಾವಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಅಥಣಿ ಸಮೂಹ ಸಂಪನ್ಮೂಲ ಕೇಂದ್ರ ಐಗಳಿ ಗ್ರಾಮ ಪಂಚಾಯತ್ ಕೋಹಳ್ಳಿ ಇವರ ಸಹಯೋಗದಲ್ಲಿ 2022/ 2023 ನೇ ಸಾಲಿನ ಐಗಳಿ ಕ್ಲಸ್ಟರ ಮಟ್ಟದ ಮಕ್ಕಳ ಕಲಿಕಾ ಹಬ್ಬ

ಹೌದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಗಡಿ ಗ್ರಾಮವಾದ ಕೋಹಳ್ಳಿಯಲ್ಲಿ ಇಂದು ಕಲಿಕಾ ಹಬ್ಬ ಅತೀ ವಿಜ್ರಂಭನೆಯಿಂದ ಜರುಗಿತು.

ಸರಕಾರಿ ಪ್ರೌಢಶಾಲೆ ಕೋಹಳ್ಳಿ ವತಿಯಿಂದ ಡೊಳ್ಳು ಕುಣಿತ ಕುದುರೆ ಕುಣಿತ ಕೋಲಾಟ ಲೇಜಿಮ್ ಹಾಗೂ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರ ಶಬ್ದ ಚಿತ್ರಣದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಮೆರವಣಿಗೆ ಗ್ರಾಮದ ಪ್ರತಿಯೊಂದು ಬೀದಿಗಳಲ್ಲಿ ರಂಗು ರಂಗಿನ ಕಲಿಕಾ ಹಬ್ಬ ಗ್ರಾಮ ಪಂಚಾಯತ್ ಸದಸ್ಯರ ಉಪಸ್ಥಿತಿಯಲ್ಲಿ ಜರುಗಿತು ಸುಮಾರು 800 ಸಾಂಪ್ರದಾಯಿಕ ಉಡುಪುಗಳಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡ ಮೆರವಣಿಗೆಯಲ್ಲಿ ಸಾಮೂಹಿಕ ನೃತ್ಯ ಜನರ ಗಮನ ಸೆಳೆದವು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳ ಮೆರವಣಿಗೆ ಕೂಡ ಇದೇ ಸಂದರ್ಭದಲ್ಲಿ ಜರುಗಿತು ಮಹಾರಾಷ್ಟ್ರದ ಗಡಿಭಾಗಕ್ಕೆ ಅಂಟಿಕೊಂಡಿರುವ

ಕೋಹಳ್ಳಿ ಗ್ರಾಮದಲ್ಲಿ ಕಲಿಕಾ ಹಬ್ಬದ ಕಾರ್ಯಕ್ರಮ ಮುಗಿಲು ಮುಟ್ಟುವಂತೆ ಘಂಟಾ ಘೋಷವಾಗಿದ್ದವು ಎಲ್ಲೆಂದರಲ್ಲಿ ಕನ್ನಡದ ರಂಗು ರಂಗಿನ ರಂಗೋಲಿಗಳು ಜನರನ್ನ ಆಕರ್ಷಿಸಿದವು

ಇದೇ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಸಿಹಿ ಹಂಚಲಾಯಿತು.ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಪ್ರಾಥಮಿಕ ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಶಿಕ್ಷಕರು ಸಿಬ್ಬಂದಿಗಳು ಮೆರವಣಿಗೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ತಾಲೂಕು ಪಂಚಾಯತ್ ಸದಸ್ಯ ಹಾಗೂ ಗ್ರಾಮದ ಹಿರಿಯರು ಯುವಕರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!