ಚಿಕ್ಕೋಡಿ ಜಿಲ್ಲೆಯ ಹಾಲು ಮತದ ಕುರುಬರ ಸಂಘದಗಳ ಹಾಗೂ ಎಲ್ಲ ಹಾಲುಮತ ಸಮಾಜದ ಗುರುಹಿರಿಯರು ಒಪ್ಪಿಕೊಂಡು ಪ್ರೀಯಾಂಕಾ ಜಾರಕಿಹೊಳಿ ಇವರಿಗೆ ನಮ್ಮ ಮತ ನೀಡಿ ಬಹುಮತ ನೀಡುವ ಕುರಿತು.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಅಧೀಕೃತ ಅಭ್ಯರ್ಥಿಯಾದ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಹಾಲುಮತದ ಸಮಾಜದ ಬಂದುಗಳ ಗುರು ಹಿರಿಯರು ತಾಯಂದಿರು ಅಕ್ಕ ತಂಗಿಯರು ಹಾಗೂ ಅಣ್ಣ ತಮ್ಮಂದಿರು ಅಧಿಕ ಮತವನ್ನು ಹಾಕಿ ಪ್ರಚಂಡ ಮತದಿಂದ ಗೆಲ್ಲಿಸಲು ಸಮಾಜದ ಬಂಧುಗಳಿಗೆ ವಿನಂತಿ ಪೂರ್ವಕ ಮನವಿ ಮಾಡಿಕೊಳ್ಳುತ್ತೇನೆಂದು ಸಮಾಜದ ಮುಖಂಡರಾದ ಜಡೆಪ್ಪ ಮಂಗಿ ಅವರು ವಿನಂತಿಸಿದರು.
ಹಾರುಗೇರಿ ಪಟ್ಟಣದ ದರೂರ್ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಮಾಧ್ಯಮ ಘೋಷ್ಠಿಯ ಮೂಲಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿಯವರ ಕೈ ಬಲಪಡಿಸುವುದಕ್ಕಾಗಿ ನಮ್ಮ ಸಮಾಜ ಬಾಂಧವರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಮನವಿ ಮಾಡಿದರು.
ಈ ಒಂದು ಸಂದರ್ಭದಲ್ಲಿ ರಾಯಭಾಗ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದಂತಹ ಸಮಾಜದ ಮುಖಂಡರು ಗುರು ಹಿರಿಯರು ಯುವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
