ಹಾರೂಗೇರಿ ಪಟ್ಟಣದ ಕೆರೆ ಲೋಕಾರ್ಪಣೆ ಗೊಳಿಸಿದ. ಪಿ ರಾಜೀವ್

Share the Post Now

ಬೆಳಗಾವಿ. ರಾಯಬಾಗ

🖊️Kareppa s Kamble

ರಾಯಬಾಗ :ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಆಸೆ, ಆಮಿಷಗಳ ಗ್ಯಾರಂಟಿ ಕಾರ್ಡ ನೀಡುತ್ತಿರುವುದು ಜನರಿಗೆ ಮೋಸ ಮಾಡುವ ಒಂದು ತಂತ್ರವಾಗಿದೆ ಆದ್ದರಿಂದ ಜನಸಾಮಾನ್ಯರ ತೆರಿಗೆ ಹಣದಲ್ಲಿ ಕೊಡುವ ಬದಲು ತಮ್ಮ ಆಸ್ತಿಯನ್ನೇ ಬಾಂಡ ಮಾಡಿಕೊಡುವ ಮೂಲಕ ಗ್ಯಾರಂಟಿ ನೀಡಿ ಎಂದು ಕುಡಚಿ ಶಾಸಕ ಪಿ. ರಾಜೀವ ಹೇಳಿದರು.

ಹಾರೂಗೇರಿ ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಕೆರೆಯನ್ನು ಪೌರಾಡಳಿತ ಇಲಾಖೆಯ ಸರ್ಕಾರದ 10 ಕೋಟಿ ವಿಶೇಷ ಅನುದಾನದಲ್ಲಿ ಅಭಿವೃದ್ಧಿಪಡಿಸಲಾದ ಕೆರೆಯನ್ನು ಕುಡಚಿ ಶಾಸಕ ಪಿ ರಾಜೀವ ರಿಬ್ಬನ್ ಕತ್ತರಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.

ಎಲ್ಲ ತಂದೆ ತಾಯಿಗಳಿಗೆ ಹೆಣ್ಣು ಮಕ್ಕಳು ಹೊರೆ ಎನಿಸಬಾರದು ಕುಟುಂಬಗಳಿಗೆ ಬೆಳಕಾಗಬೇಕಾದ ಹೆಣ್ಣು ಬ್ರೂಣ ಹತ್ಯೆಯಂತಹ ಕೃತ್ಯಗಳು ನಡೆಯಬಾರದು ಎಂಬ ಸದುದ್ದೇಶದಿಂದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿದರು ಎಂದು ಹೇಳಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಸಕ ಪಿ ರಾಜೀವರವರ ನೇತೃತ್ವದಲ್ಲಿ ನೂರಾರು ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ ಜರುಗಿತು.

ಶಾಸಕ ಪಿ. ರಾಜೀವ ಹಾಗೂ ಮುಖಂಡರು, ಕಾರ್ಯಕರ್ತರು ಅಪಾರ ಬೆಂಬಲಿಗರೊಂದಿಗೆ ಕೆರೆಯನ್ನು ವೀಕ್ಷಿಸಿ ಪೂಜೆ ಸಲ್ಲಿಸಿ ಭಾಗಿನ ಅರ್ಪಿಸಿದರು.

ಕುಡಚಿ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಪಾಸಬುಕ್ ವಿತರಣೆ ಹಾಗೂ ಕುಡಚಿ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ 800 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ. ರಾಜೀವ ಭೂಮಿ ಪೂಜೆ ನೆರವೇರಿಸಿದರು.



ರಂಗೋಲಿ ಮತ್ತು ಹೂವಿನ ಅಲಂಕಾರದಿಂದ ಐತಿಹಾಸಿಕ ಕೆರೆಯು ಮದುವನಗಿತ್ತಿಯಂತೆ ಕಂಗೊಳಿಸುತಿತ್ತು.

ಇದೇ ಸಂದರ್ಭದಲ್ಲಿ ಬಸನಗೌಡ ಆಸಂಗಿ, ನೇಮಣ್ಣಾ ನಾಗಾವಿ, ಹಣಮಂತ ಯಲಾಶೆಟ್ಟಿ, ಶ್ರೀಶೈಲ ಉಮರಾಣಿ, ಸುನಿಲಗೌಡ ಪಾಟೀಲ, ಶಿವಗೊಂಡ ಧರ್ಮಟ್ಟಿ, ಹುಸೇನಸಾಬ ಜಮಾದಾರ, ರಾಮಣ್ಣ ಕುರಿ, ಬಸವರಾಜ ಠಕ್ಕಣ್ಣವರ,ಬಸವರಾಜ್ ಕೋತ್ ಕಾಂತು ಬಾಡಗಿ ಶಿವಪ್ಪ ದಳವಾಯಿ. ಮಲ್ಲಪ್ಪ ಐನಾಪುರ ವಿನಾಯಕ ಮೂಡಸಿ ವಸಂತ ಲಾಳಿ. ಗುತ್ತಿಗೆದಾರದ ತರಡೇ ಬ್ರದರ್ಸ್,ಸದಾಶಿವ ದಳವಾಯಿ .ಗಜು ಜಂಬಗಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!