ಮಾನವೀಯತೆಯ ಜೀವದರ್ಥ ; ಹುದ್ದಾರರ ಕಾವ್ಯ ತೀರ್ಥ – ಕುಡಚಿ ಶಾಸಕ ಪಿ ರಾಜೀವ್

Share the Post Now

ವರದಿ :ಸುನಿಲ್ ಕಬ್ಬುರ್

ಹಾರೂಗೇರಿ : ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕಾ ಘಟಕ ಹಾಗೂ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಗಳ ಸಹಯೋಗದಲ್ಲಿ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಎಚ್. ವಿ. ಎಚ್. ಶಾಲಾ ಸಭಾಭವನದಲ್ಲಿ ಜರುಗಿದ ಲತಾ ದೇವೇಂದ್ರ ಹುದ್ದಾರ ಅವರ ಕಾವ್ಯ ತೀರ್ಥ ಪುಸ್ತಕ ಲೋಕಾರ್ಪಣೆಗೊಂಡಿತು .
ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಕುಡಚಿ ಶಾಸಕರಾದ ಪಿ. ರಾಜೀವ್
ಅವರು ಮಾತನಾಡಿ , ಮಾನವೀಯತೆಯ ಜೀವದರ್ಥ ; ಹುದ್ದಾರರ ಕಾವ್ಯ ತೀರ್ಥವಾಗಿದೆಯಲ್ಲದೆ ” ಸಾಹಿತ್ಯವು ಜನರ ಬದುಕಿನ ಚಿತ್ರಣ ನೀಡುವ ಕನ್ನಡಿಯಾಗಿದ್ದು ಸಾಹಿತ್ಯದಿಂದ ಜನರ ಬದುಕಿನ ಜೀವನದ ನೋವು, ನಲಿವುಗಳಿಗೆ ಸ್ಪಂದಿಸುತ್ತ ಸಂತೈಸುತ್ತದೆ” ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ” ಕವಿ ಅಂದ್ರೆ ಪುರುಷ ಅನ್ನುವುದು ಜನರೂಢಿ. ಆದರೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕವಿಯು ಸ್ತ್ರೀ ಸಂವೇದನೆಯೊಂದಿಗೆ ಜೀವನ್ಮುಖಿ ಚಿಂತನೆ ತುಂಬಬಲ್ಲ ಒಂದು ವ್ಯಕ್ತಿತ್ವವಾಗಿದ್ದು ಕನ್ನಡ ಕಾವ್ಯಲೋಕದಲ್ಲಿ ಮಹಿಳೆಯರು ಹಾಗೂ ಪುರುಷರು ಸಮನಾಗಿ ಕೃಷಿ ಮಾಡಿದ್ದಾರೆ. ಅದರಲ್ಲೂ ಹಳ್ಳಿಗಾಡಿನ ಅಕ್ಷರ ಕಲಿಯದ ಸಾವಿರಾರು ಜನಪದ ಹೆಣ್ಣುಮಕ್ಕಳು ಅದ್ಭುತ ಜಾನಪದ ಕಾವ್ಯ ಕಟ್ಟಿಕೊಟ್ಟಿರುವುದೇ ಸಾಕ್ಷಿಯಾಗಿದೆ. ರಾಯಬಾಗದ ಪರಿಸರದ ಮಹಿಳಾ ಸಾಹಿತ್ಯ ಲೋಕಕ್ಕೆ ಲತಾ ಅವರು ಹೊಸ ಭರವಸೆಯಾಗಿದ್ದಾರೆ” ಎಂದರಲ್ಲದೆ,ಸಾಹಿತ್ಯವು ಸಂಸ್ಕೃತಿಯ ವೃಕ್ಷದಲ್ಲಿ ಅರಳಿದ ಹೂವು. ಅದು ಬದುಕಿಗೆ ಉತ್ಸಾಹ ಹಾಗೂ ಮೌಲ್ಯಗಳನ್ನು ತುಂಬಲು ಬಹುದೊಡ್ಡ ಶಕ್ತಿಯಾಗಿದ್ದು ಮಾನವನನ್ನು ಮನುಷ್ಯನನ್ನಾಗಿಸುವ ಜೀವಧಾರೆಯೇ ಕವಿತೆ. ಆ ನಿಟ್ಟಿನಲ್ಲಿ ಲತಾ ಹುದ್ದಾರ ಅವರ ಕಾವ್ಯತೀರ್ಥ ಪವಿತ್ರ ಬದುಕಿನ ಸಚಿತ್ರ ಕಾವ್ಯಗುಚ್ಛವಾಗಿದೆ” ಎಂದು ಹಿರಿಯ ಸಾಹಿತಿ ಡಾ. ವಿ. ಎಸ್. ಮಾಳಿ ಹೇಳಿದರು.ಅತಿಥಿಗಳಾಗಿ ಹಿರಿಯ ಚಿಂತಕ ಸಮಾಜ ಸೇವಕರಾದ ಡಿ. ಎಸ್. ನಾಯ್ಕ, ವಿಠಲ ಜೋಡಟ್ಟಿ, ಡಾ. ರತ್ನಾ ಬಾಳಪ್ಪನವರ, ಕ.ಸಾ.ಪ.ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಪಾಟೀಲ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಲತಾ ಹುದ್ದಾರ ದಂಪತಿಗಳು ಹಾಗೂ ಸುಂದರ ಭರತರಾಜ ಲೊಂಡೆ ಅವರನ್ನು ಸತ್ಕಾರಿಸಲಾಯಿತು.
ಹಿರಿಯರಾದ ಬಸನಗೌಡ ಆಸಂಗಿ,ಬಸವರಾಜ ಸನದಿ, ಡಿ.ವೈ. ಸನದಿ, ವಿಶ್ರಾಂತ ಪ್ರಾ.ಬಿ.ಎ.ಜಂಬಗಿ,ಪ್ರಾ. ಡಾ.ಎಲ್ ಎಸ್. ಧರ್ಮಟ್ಟಿ, ಸದಾಶಿವ ವಾಳಕೆ, ಸುಖದೇವ ಕಾಂಬಳೆ, ವಿಲಾಸ ಕಾಂಬಳೆ, ಬಸವರಾಜ ಖೋತ,ಕಿರಣ ಗಾಯಕವಾಡ,ಶ್ವೇತಾ ಹುದ್ದಾರ, ಗೀತಾ ಬಾಗಾಯಿ, ಸಾಗರ ಹುದ್ದಾರ, ಶ್ರೀಧರ ಹುದ್ದಾರ, ಶರತ ಬಾಗಾಯಿ ಉಪಸ್ಥಿತರಿದ್ದರು.ಶಿಕ್ಷಕ ಪದ್ಮರಾಜ ಅಲ್ಲಪ್ಪನವರ ಅವರು ಪ್ರಾರ್ಥನೆಗೈದರು.ಶಂಕರ ಕ್ಯಾಸ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಎಂ. ಎಸ್. ಬಳವಾಡ ಸ್ವಾಗತಿಸಿದರು. ಭರಮು ಪೂಜೇರಿ ನಿರೂಪಿಸಿದರು.ಕನ್ನಡ ಪ್ರಾಧ್ಯಾಪಕ ಟಿ. ಎಸ್. ವಂಟಗೂಡಿ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!