ಮೂಡಲಗಿ.
ಹಳ್ಳೂರ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ( ಧರ್ಮಸ್ಥಳ) ಮೂಡಲಗಿ ತಾಲೂಕಿನ ದಿಂದ 1941ನೇ A ಮತ್ತು B ಮಧ್ಯವರ್ಜನ ಶಿಬಿರವನ್ನು ಮಸುಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಸಭಾಭವನದಲ್ಲಿ ನಡೆದbಕಾರ್ಯಕ್ರಮದ ಸಮಾರೋಪ ಸಮಾರಂಭದ
ಮುಖ್ಯ ಅತಿಥಿಗಳಾಗಿ
ಧಾರವಾಡದ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ
ಪರಮಪೂಜ್ಯ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸಮಾಜದ ಒಳಿತಿಗಾಗಿ ಇಂತಹ ಮಹತ್ವದ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು, ದುಶ್ಚಟಕ್ಕೆ ಬಲಿಯಾದವರು ಪ್ರಯೋಜನ ಪಡೆದುಕೊಳ್ಳಬೇಕು. ಎಂಟು ದಿನಗಳಿಂದ ಆಯೋಜಿಸಲಾದ ಈ ಶಿಬಿರದಲ್ಲಿ ಭಾಗವಹಿಸಿ ಯಜ್ಞ ಮಾಡಿದ್ದೀರಿ, ನಿಷ್ಠೆಯಿಂದ ಭಾಗವಹಿಸಿದವರಿಗೆ ಖಂಡಿತವಾಗಿ ಒಳ್ಳೆಯ ಫಲಗಳು ದೊರಕುತ್ತವೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳಿರಿ ಎಂದು ಶುಭ ಹಾರೈಸಿದರು.
ದಿವ್ಯ ಸಾನಿಧ್ಯವನ್ನು ನಾಗನೂರಿನ ಮಾತೋಶ್ರೀ ಕಾವ್ಯಶ್ರೀ ಅಮ್ಮನವರ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಅಥಣಿ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹೆಗಡೆ,ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ಬರಮಣ್ಣ ಉಪ್ಪಾರ್, ಶ್ರೀಶೈಲ ಧವಳೇಶ್ವರ್, ಈರಪ್ಪ ಸಂಡೂರ್ ಹಾಗೂ ಶಿವಶಂಕರ್ ಖಾನಾಪುರ್, ಮಧ್ಯ ವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಬಸವರಾಜ್ ಭುಜಣ್ಣನವರ್,
ಉಪಾಧ್ಯಕ್ಷರಾಗಿ ಸಂಜು ಹೊಸಕೋಟೆ, ಭರಮಣ್ಣ ಗಂಗನ್ನವರ್, ಮುರಿಗೆಪ್ಪ ಗಾಡವಿ, ಕೋಶಾಧಿಕಾರಿ ಭರಮಣ್ಣ ಆಶಿರೊಟ್ಟಿ, ಗ್ರಾಮದ ಗಣ್ಯರಾದ ವಿರೂಪಾಕ್ಷಪ್ಪ ಕೊಳವಿ, ಲಕ್ಷ್ಮಣ್ ನರಗುಂದ್, ರಾಮಣ್ಣ ಗಂಗಣ್ಣವರ್, ಮೂಡಲಗಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ರಾಜು ನಾಯಕ್ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಜನ ಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಭಾಸ್ಕರ್ ಏನ್, ಮೇಲ್ವಿಚಾರಕರದ ಉಮೇಶ್ ಹಡಗಲಿ, ಶಿಬಿರಾಧಿಕಾರಿಗಳಾದ ನಾಗೇಂದ್ರ, ನಂದಕುಮಾರ್ ಹಾಗೂ ಜಯಾನಂದ್, ನವ ಜೀವನ ಸಮಿತಿಯ ಸದಸ್ಯರು, ಸೇವಾ ಪ್ರತಿನಿಧಿಗಳು, ಸ್ಥಳೀಯ ಗ್ರಾಮಸ್ಥರು ಹಾಗೂ 121 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವಿಜಯಲಕ್ಷ್ಮಿ ನಿರೂಪಿಸಿದರು. ಮೇಲ್ವಿಚಾರಕರಾದ ಮಂಜುಳಾ ಹಿರೇಮಠ ವಂದಿಸಿದರು