ಬೆಳಗಾವಿ
ನಾನು ದಿನಾಲೂ ಊರಿನಿಂದ ಊರಿಗೆ ಸಂಚಾರ ಮಾಡಿ ಜೀವನ ಸಾಗಿಸಿ ಹಳ್ಳೂರ ಗ್ರಾಮದಲ್ಲಿ ವಾಸಮಾಡಿ ಕಡು ಬಡ ಕುಟುಂಬದ ವ್ಯಕ್ತಿಯಾದ ನಾನು ಬಸವರಾಜ ಚನ್ನಪ್ಪ ಬಾಗಡಿ ನನಗೆ 65 ವರ್ಷ ಕಳೆದರು ನನಗೆ ಚುನಾವಣಾ ಗುರುತಿನ ಚೀಟಿ ಹೊಂದಿರಲಿಲ್ಲ ಮತ್ತು ಇದರ ಜೊತೆಗೆ ರಾಜ್ಯ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಸಂದ್ಯಾ ಸುರಕ್ಷಾ ಪಿಂಚಣಿ ಮಾಸಿಕ ವೇತನದ ಸೌಲಭ್ಯವನ್ನು ಒದಗಿಸಿದ ಮಾನವೀಯತೆ ಸಾಕಾರ ಮೂರ್ತಿಯಾದ ಬಡವರ ಕಣ್ಮಣಿ ದಿನ ದಲಿತರ ಆಶಾಕಿರಣ ಬಡ ಜನರ ನಾಡಿ ಮಿಡಿತ ಅರಿಯುವ ಸಾಕಾರ ಮೂರ್ತಿ ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಅವರ ದುರದೃಷ್ಟಿತ್ವದಿಂದ ಈ ಸೌಲಭ್ಯ ದೊರೆತಂತಾಯಿತು ಎಂದು ಹೇಳಿದರು.
ಇದೆ ರೀತಿ ಮೂಡಲಗಿ, ಗೋಕಾಕ, ರಾಯಬಾಗ ತಾಲ್ಲೂಕಿನ ಸಹಸ್ರಾರು ಅಹಿಂದ ಸಮಾಜದವರ ಮನೆ ಬಾಗಿಲಿಗೆ ಸಂದ್ಯಾ ಸುರಕ್ಷಾ, ಅಂಗವಿಕಲ, ವಿಧವಾ ವೇತನ, ರೇಷನ್ ಕಾರ್ಡ್, ಪಿ ಎಮ್ ಕಿಸಾನ್ ಯೋಜನೆ ಹೀಗೆ ಅನೇಕ ಸರಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸಿ ಜನರ ಪ್ರೀತಿ ಮತ್ತು ಮಣ್ಣನನಗೆ ಪಾತ್ರರಾಗಿದ್ದಾರೆ. ವೃತ್ತಿಯಲ್ಲಿ ಸಮೀರವಾಡಿ ಜಿ ಬಿ ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಕೂಡಾ ಪ್ರವೃತ್ತಿಯಲ್ಲಿ ಹಗಲಿರುಳು ಎನ್ನದೆ ಸಮಾಜ ಸೇವೆ ಮಾಡುತ್ತಾ ದಿನ ದಲಿತರ ಕಣ್ಣೋರೆಸುವ ಕಾಯಕದಲ್ಲಿ ತಮ್ನನ್ನು ತಾವು ತೊಡಗಿಸಿಕೊಂಡಿದ್ದಾರೆ. ತುಕಾರಾಮ ಬಾಗಡಿ ಮಾತನಾಡಿ ಸುಮಾರು 10 ವರ್ಷಗಳಿಂದ ಚಿರ ಪರಿಚಿತರಾದ ಶ್ರೀ ಮುರಿಗೆಪ್ಪಣ್ಣ ಮಾಲಗಾರ ಅವರ ಕಾರ್ಯ ಜನ ಮೆಚ್ಚುಗೆಗೆ ಪಾತ್ರವಾಗುವಂತಹದ್ದು ಇವರ ಹಲವಾರು ಕಾರ್ಯಗಳು ಜನರ ಮನೆ ಬಾಗಿಲುಗಳಿಗೆ ಇಂದಿಗೂ ಕೂಡಾ ತಲುಪುತ್ತಿವೆ. ಎಂದು ಹೇಳಿದರು.