ಮಕ್ಕಳ ಗುಣಮಟ್ಟ ಹೆಚ್ಚಿಸುವುದೇ ಕಲಿಕಾ ಹಬ್ಬದ ಉದ್ದೇಶ: ಹಂದಿಗುಂದ ವಲಯ ಸಿಆರ್‌ಪಿ ಆರ್.ಆರ್.ಬೀಸನಕೊಪ್ಪ;

Share the Post Now

ವರದಿ : ಶ್ರೀ ಪ್ರಕಾಶ ಚ ಕಂಬಾರ


ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಕಲಿಕೆಯ ಗುಣಮಟ್ಟವು ಕುಂಟಿತಯಾಗುತ್ತಿದೆ, ಅವಶ್ಯಕತೆ ತಕ್ಕಂತೆ ಮಾತ್ರ ಮೊಬೈಲ್ ಬಳಸಬೇಕು: ಹಿರಿಯ ಶಿಕ್ಷಕ ಎಂ.ಬಿ.ಬಡಿಗೇರ;

ಮುಗಳಖೋಡ : ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವುದೇ ಕಲಿಕಾ ಹಬ್ಬದ ಉದ್ದೇಶ. ಕಳೆದ ಎರಡು ವರ್ಷಗಳ ಹಿಂದೆ ಕರೋನಾ ಮಹಾಮಾರಿ ರೋಗದ ಭಯದಲ್ಲಿ ಶಾಲೆಗಳ ರಜೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವು ಕುಸಿತ ಕಾರಣದಿಂದ ಸರ್ಕಾರವು ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಅನೇಕ ಗುಣಮಟ್ಟದ ಯೋಜನೆಗಳನ್ನು ತಂದಿದ್ದು, ಕಲಿಕಾ ಚೇತರಿಕೆ, ಕಲಿಕಾ ಹಬ್ಬ ವಿನೂತನ ಕಾರ್ಯಕ್ರಮದಡಿ ಮಕ್ಕಳ ಗುಣಮಟ್ಟ ಹೆಚ್ಚಿಸುವುದೇ ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ಹಂದಿಗುಂದ ವಲಯ ಸಿಆರ್‌ಪಿ ಆರ್.ಆರ್.ಬೀಸನಕೊಪ್ಪ ಮಾತನಾಡಿದರು. ರಾಯಬಾಗ ಶಿಕ್ಷಣ ಸಂಯೋಜಕ ಶ್ರೀಕಾಂತ ಕಂಬಾರ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅವರು ರಾಯಬಾಗ ತಾಲೂಕ ಕಪ್ಪಲಗುದ್ದಿ ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳಗಾವಿ, ಜಿಲ್ಲಾ ಪಂಚಾಯತ್ ಬೆಳಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿಯ ಕಾರ್ಯಾಲಯ ರಾಯಬಾಗ ಹಾಗೂ ಕ್ಷೇತ್ರ ಸಮನ್ವಯ ಕಾರ್ಯಾಲಯ ರಾಯಬಾಗ ಹಾಗೂ ಎಸ್‌ಡಿಎಂಸಿ ಸಮಿತಿ ಕಪ್ಪಲಗುದ್ದಿ ಇವರ ಸಯುಕ್ತ ಆಶ್ರಯದಲ್ಲಿ ಬುಧವಾರ ದಿನಾಂಕ ೧ರಂದು ಮುಂಜಾನೆ ೧೦ ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಪ್ಪಲಗುದ್ದಿ ಗ್ರಾಮದಲ್ಲಿ ಸನ್.೨೦೨೨ -೨೩ನೇ ಹಂದಿಗುಂದ ಕ್ಲಸ್ಟರ್ ಮಟ್ಟದ “ಕಲಿಕಾ ಹಬ್ಬ” ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದರು.

ಹಿರಿಯ ಶಿಕ್ಷಕ ಎಂ.ಬಿ.ಬಡಿಗೇರ ಮಾತನಾಡುತ್ತಾ ಕಪ್ಪಲಗುದ್ದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗುತ್ತಿರುವ “ಕಲಿಕಾ ಹಬ್ಬವು” ಮೈಸೂರು ದಸರಾ ಹಬ್ಬವನ್ನು ನೆನಪಿಸುವಂಥ ಹಬ್ಬವಾಗಿದೆ. ಅತಿಯಾಗಿ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಕಲಿಕೆಯ ಗುಣಮಟ್ಟವು ಕುಂಟಿತಯಾಗುತ್ತಿದೆ, ಅವಶ್ಯಕತೆ ತಕ್ಕಂತೆ ಮಾತ್ರ ಮೊಬೈಲ್ ಬಳಸಬೇಕು. ಅತಿಯಾದ ಮೊಬೈಲ್ ಬಳಕೆ ಜೀವಕ್ಕೆ ಅಪಾಯ. ಇಂದಿನ ಕಲಿಕಾ ಹಬ್ಬವುಕ್ಕೆ ತನು-ಮನ ದನದಿಂದ ಬೆಂಬಲ ನೀಡಿದ ಗ್ರಾಮಸ್ಥರ ಸಹಕಾರ ಶ್ಲಾಘನೀಯವಾದದ್ದು ಎಂದರು.

ರಾಯಬಾಗ ಶಿಕ್ಷಣ ಸಂಯೋಜಕ ಶ್ರೀಕಾಂತ ಕಂಬಾರ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಸದಾಶಿವ ಸನದಿ ಸಭೆಯ ಅಧ್ಯಕ್ಷತೆವಹಿಸಿದ್ದರು. ವೇದಿಕೆ ಮೇಲೆ ಗ್ರಾಂಪಂ ಅಧ್ಯಕ್ಷ ಗೋಪಾಲ ನಾಯಿಕ, ಗ್ರಾಮಪಂ ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಐದುಮಣಿ, ಎಸ್ಡಿಎಮ್.ಸಿ ಉಪಾಧ್ಯಕ್ಷೆ ಸುಮಿತ್ರಾ ಮೇತ್ರಿ, ಗ್ರಾಮಪಂ ಸದಸ್ಯ ಮಂಜು ಮೇತ್ರಿ, ಮಹಾದೇವ ನಾಯಿಕ, ಗುರು ಅಂಗಡಿ, ಪ್ರಧಾನ ಗುರುಮಾತೆ ಎಸ್.ಎಸ್.ಬಸನಗೌಡರ, ಹಿರಿಯ ಶಿಕ್ಷಕ ಎಂ.ಬಿ.ಬಡಿಗೆರ, ಪ್ರಧಾನ ಗುರು ನಾಮದೇವ ತೈಕಾರ, ಲಕ್ಷ್ಮಣ ತುಕ್ಕಾನಟ್ಟಿ, ತುಕಾರಾಂ ಯಡ್ರಾಂವಿ, ಬಾಳಪ್ಪ ದಡ್ಡಿಮನಿ, ಡಾಕ್ಟರ್ ಎಂ.ಬಿ.ಶಿರೋಳ, ಸಿ.ಆರ್.ಪಿ ಆರ್.ಆರ್. ಬೀಸನಕೊಪ್ಪ, ಸಿ.ಆರ್.ಪಿ ಆರ್.ಎಂ.ತೇಲಿ, ಪ್ರಧಾನಗುರು ಪಿ.ಎಂ.ದಿವಾಕರ, ಶ್ರೀಧರ್ ಚೌಗುಲಾ, ಸಿದ್ದಪ್ಪ ಬದ್ರಶೆಟ್ಟಿ, ಮುತ್ತಪ್ಪ ಬದ್ರಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮಪಂ ಅಧ್ಯಕ್ಷ ಲಕ್ಷ್ಮಣಕೂಡಲಗಿ, ಗ್ರಾಮಪಂ ಸದಸ್ಯ ಕೆಂಪಣ್ಣ ಕುರುನಿಂಗ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಬಾಳಪ್ಪ ಐದುಮಣಿ, ಪ್ರಕಾಶ ಸಿಂಗಾಡಿ, ಇಟ್ನಾಳ ಗ್ರಾಮ.ಪಂ. ಪಿಡಿಒ ಶ್ರೀಕಾಂತ ಯಡ್ರಾಂವಿ, ಪ್ರಭಾಕರ ದಿವಾಕರ, ಗಂಗಪ್ಪ ಐದುಮಣಿ, ಬಾಲಚಂದ್ರ ಮೇತ್ರಿ, ಅಶೋಕ ಬಡಿಗೇರ ಹನುಮಂತ ಪಾತ್ರೋಟ, ಅಶೋಕ ಐದುಮಣಿ, ಡಾ. ಸಂಜೀವ್ ಸಣ್ಣಕ್ಕಿ, ಮಲ್ಲಪ್ಪ ಸಕ್ರಪ್ಪಗೋಳ, ಜ್ಞಾನೇಶ್ವರ ಪೂಜಾರಿ, ಕೆಂಪಣ್ಣ ಸುಬಾನಿ, ಡಿ.ಎಂ.ಬ್ಯಾಕೂಡ, ಆರ್.ಸಿ.ಕೊಟ್ಟಲಗಿ ಇತರರು ಇದ್ದರು.

ಕುಮಾರಿ ರಂಜಿತಾ ಬದ್ರಶೆಟ್ಟಿ ಹಾಗೂ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಕುಮಾರಿ ಸೋನಿಯಾ ಸಣದಿ ಹಾಗೂ ಸಂಗಡಿಗರು ಸ್ವಾಗತ ಗೀತೆಯನ್ನು ಪ್ರಸ್ತುತಪಡಿಸಿದರು. ಹಿರಿಯ ಶಿಕ್ಷಕ ರವಿ ಹರತಂತ್ರ ಸ್ವಾಗತಿಸಿದರು. ಶಿಕ್ಷಕ ದೀಲಿಪ ಜೋಶಿ ನಿರೂಪಿಸಿದರು, ದೈಹಿಕ ಶಿಕ್ಷಕ ಎಂ.ಕೆ.ಸಂಗಾನಟ್ಟಿ ವಂದಿಸಿದರು.

ಈ ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಹಂದಿಗುಂದ ಕ್ಲಸ್ಟರ್ ಮಟ್ಟದ 12 ಸರಕಾರಿ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು. ಮುಂಜಾನೆಯ ಹತ್ತು ಗಂಟೆಗೆ ಶಾಲೆಯಿಂದ ಹೊರಟ ಭವ್ಯ ಉತ್ಸವವು ತಳಿರು ತೋರಣಗಳಿಂದ ಸಿಂಗರಿಸಿಕೊಂಡ ಎತ್ತಿನ ಬಂಡಿಯಲ್ಲಿ ವಿದ್ಯಾದೇವತೆ ಸರಸ್ವತಿಯ ಭಾವಚಿತ್ರದ ಭವ್ಯ ಮೆರವಣಿಗೆಯು, ಡೊಳ್ಳು ಕುಣಿತ ವಿದ್ಯಾರ್ಥಿನಿಯರಿಂದ ಪೂರ್ಣಕುಂಭ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಜರುಗಿತು.

Leave a Comment

Your email address will not be published. Required fields are marked *

error: Content is protected !!