ಮೂಡಲಗಿ. ಹಳ್ಳೂರ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹಳ್ಳೂರ ದಿಂದ ಶ್ರೀಶೈಲ ಕ್ಕೆ ಹೊರಡುವ ಪಾದಯಾತ್ರೆಯು ಪ್ರಾರಂಭದಲ್ಲಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಜೋಡು ಕಂಬಿ ಮಲ್ಲಯ್ಯ ದೇವರನ್ನು ಕೂಡ್ರಿಸಿ ಜಂಗಮರು ಪೂಜೆ ನೆರವೇರಿಸಿ ಆರುತಿ ಮಾಡಿ ಮಂಗಳಾರುತಿ ಮಾಡಿದ ನಂತರ ಶ್ರೀ ಬಸವೇಶ್ವರ ದೇವಸ್ಥಾನದಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿ ಮಂಗಳಾರುತಿ ಮಾಡಿ ಜೋಡು ಕಂಬಿ ಹೆಗಲ ಮೇಲೆ ಹೊತ್ತು ಕೊಂಡು ಶ್ರೀಶೈಲಕ್ಕೆ ಹೋಗುವ ಬಕ್ತಾದಿಗಳಿಗೆ ಗ್ರಾಮಸ್ಥರು ಶುಭ ಕೋರಿ ಬೀಳ್ಕೊಟ್ಟರು ಕಂಬಿ ಮಲ್ಲಯ್ಯನ ದರ್ಶನ ಪಡೆದುಕೊಂಡು ದೇವರ ಕೃಪೆಗೆ ಪಾತ್ರರಾದರು.
ಈ ಸಮಯದಲ್ಲಿ ಪುರುಷರು, ಮಹಿಳೆಯರು, ಮುದ್ದು ಮಕ್ಕಳು ಬಾಗಿಯಾಗಿದ್ದರು, ಹಳ್ಳೂರ ದಿಂದ ಮಹಾಲಿಂಗಪೂರದವರೆಗೆ ಪಾದಯಾತ್ರೆಯಲ್ಲಿ ಸಹಸ್ರೋಪಾದಿಯಲ್ಲಿ ಭಕ್ತರು ಪಾಲ್ಗೊಂಡು ಕಂಬಿ ಮಲ್ಲಯ್ಯನನ್ನು ಪುರುಷರು, ಮಹಿಳೆಯರು ಹೆಗಲ ಮೇಲೆ ಹೊತ್ತು ಕ್ಕೊಂಡು ಕಂಬಿ ಮಲ್ಲಯ್ಯ ಗೇ ಪರ್ವತ ಮಲ್ಲಯ್ಯ ಗೇ ಅನ್ನುತ್ತಾ ಸಾಗುತ್ತಿದ್ದರು. ರಸ್ತೆ ಮದ್ಯೆ ಅಲ್ಲಲ್ಲಿ ನಾಸ್ಟಾ, ಬಾಳೆ ಹಣ್ಣು, ಕಬ್ಬಿಣ ಹಾಲು, ಟಿ ಬಿಸ್ಕಿಟ್ಟು ತಂಪಾದ ಪಾನಿಯ ವ್ಯವಸ್ಥೆಯನ್ನು ಭಕ್ತರು ಮಾಡಿದ್ದರು.