ನಮ್ಮ ದೇಶದ ಹೆಸರು ಭಾರತ ಎಂಬುದು ಸಂವಿಧಾನಿಕವಾದದ್ದೇ ಹೊರತು ಸಾಂಸ್ಕ್ರತಿತವಾದದ್ದಲ್ಲ. ಪ್ರಾಚೀನ ಭಾರತದ ಸಾಂಸ್ಕ್ರತಿಕ ಹೆಸರು ಜಂಬೂದ್ವೀಪˌ ವಾನರಂಸಾ ದ್ವೀಪˌ ಕೋಯಾಕೋಯಾ ತುರೆˌ ಸಿಂಗಾರ ದ್ವೀಪˌ ಗೋಂಡವಾನ ಭೂಮಿ ಆಗಿತ್ತು. ಆರ್ಯರ ಆಕ್ರಮಣಕ್ಕೆ ಮೊದಲು ಪ್ರಾಚೀನ ಭಾರತವು ಬಹಳ ಸಂಮ್ರದ್ಧವಾಗಿದ್ದು ಉತ್ಕ್ರಷ್ಟ ಸಂಸ್ಕ್ರತಿಯನ್ನು ಹೊಂದಿತ್ತು. ನಮ್ಮ ಸಂಸ್ಕ್ರತಿಯನ್ನು ಸಿಂಧೂಘಾಟಿ/ದ್ರಾವಿಡ/ಸಿಂಧೂ ನಾಗರಿಕತೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಜಗತ್ತಿನ ಪ್ರಾಚೀನ ನಾಗರಿತೆಗಳಲ್ಲಿ ಒಂದಾಗಿದ್ದ ನಮ್ಮ ಈ ಸಿಂಧೂ ನಾಗರಿಕತೆಯು ನಮ್ಮ ಮೂಲನಿವಾಸಿ ದ್ರಾವಿಡರು ಹುಟ್ಟು ಹಾಕಿದ್ದಾಗಿತ್ತು. ಆ ದ್ರಾವಿಡ ವಂಶದ ಜನರು ಇಂದು ಭಾರತದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರೆ ಹಿಂದುಳಿದ ಜಾತಿ/ಮತ್ತು ಅಲ್ಪಸಂಖ್ಯಾತರೆಂದು ಗುರುತಿಸಿಕೊಳ್ಳುತ್ತಿದ್ದಾರೆ. ಜಾಗತಿಕವಾಗಿ ಸಂಮ್ರದ್ಧವಾಗಿದ್ದ ಸಿಂಧೂ ನಾಗರಿಕತೆಯನ್ನು ವಿದೇಶಿ ಆರ್ಯರು ನಾಶಗೊಳಿಸಿ ಜಗತ್ತಿನಲ್ಲೇ ಭಾರತವು ಅತ್ಯಂತ ಹಿಂದುಳಿದ ದೇಶವನ್ನಾಗಿ ಮಾಡಿದ್ದಾರೆ.
ಭಾರತದ ಮೇಲೆ 12 ಬಾರಿ ವಿದೇಶಿ ದಾಳಿಕೋರರು ಆಕ್ರಮಣವೆಸಗಿದ್ದಾರೆ:
ಎಲ್ಲಕ್ಕಿಂತ ಮೊಟ್ಟ ಮೊದಲು ಭಾರತದ ಮೇಲೆ ಆಕ್ರಮಣ ಮಾಡಿದ್ದು ಯುರಿಷೇಯನ್ ಆರ್ಯರು. ಇವರನ್ನು ಅರ್ಥವˌ ರಥಾಯಿಸ್ಟ್ ˌ ವಾಸ್ತಾನಿಯಾ ಎಂತಲೂ ಕರೆಯುತ್ತಾರೆ. ಈ ಯುರೇಷಿಯನ್ ಆರ್ಯರು ಭಾರತದ ಮೇಲೆ ಆಕ್ರಮಣ ಮಾಡಿ ತಮ್ಮ ಕುಟಿಲ ನೀತಿˌ ಸಾಮ-ದಾಮ-ದಂಡ-ಭೇದ ನೀತಿಗಳಿಂದ ಇಲ್ಲಿನ ಪುರ್ವಜರು ಸ್ಥಾಪಿಸಿದ್ದ ಭವ್ಯ ನಾಗರಿಕತೆಯನ್ನು ನಾಶಗೊಳಿಸಿದ್ದಾರೆ. ಈ ದೇಶದ ಸಂಪತ್ತನ್ನು ಲೂಟಿ ಹೊಡೆದು ಇಲ್ಲೇ ನೆಲೆ ನಿಂತವರು ಯುರೇಷಿಯನ್ ಆರ್ಯರು. ಆರಂಭದಲ್ಲಿ ಇವರನ್ನು ತಡೆಯಲು ಪ್ರಯತ್ನಿಸಿದ ದ್ರಾವಿಡರನ್ನು ರಾಕ್ಷಸರು/ಅಸುರರು ಎಂದು ಕರೆದರು. ಸಾವಿರಾರು ವರ್ಷಗಳ ವರೆಗೆ ನಡೆದ ಮೂಲ ನಿವಾಸಿ ದ್ರಾವಿಡರು ಮತ್ತು ಆಕ್ರಮಣಕಾರಿ ವಿದೇಶಿ ವಲಸಿಗ ಆರ್ಯರ ನಡುವಿನ ಯುದ್ಧವನ್ನು ಸುರ-ಅಸುರ, ದೇವ-ದಾನವರ ನಡುವಿನ ಯುದ್ಧ ಎನ್ನುವಂತೆ ಪುರಾಣಗಳನ್ನು ರಚಿಸಿದವರು ಆರ್ಯರು.
- ಯುರೇಷಿಯನ್ ಆರ್ಯರು
- ಕ್ರಿ.ಶ. 712 ರಲ್ಲಿ ಮೀರ ಖಾಸೀಮ್
- ಮೊಹಮದ್ ಗಝನಿ
- ಮೊಹಮದ್ ಗೋರಿ.
- ಚಂಗೇಶ್ ಖಾನ್
- ಕುತುಬುದ್ದೀನ್ ಐಬಕ್
- ಗುಲಾಮಿ ವಂಶ
- ತುಗಲಕ್ ವಂಶ
- ಖಿಲ್ಜಿ ವಂಶ
- ಲೋಧಿ ವಂಶ
- ಮೊಘಲ್ ವಂಶ
- ಬ್ರಿಟೀಷರು.
ಆರ್ಯರು ತಮ್ಮನ್ನು ತಾವು ಸುರರು/ದೇವತೆಗಳು ಎಂತಲೂ ಮೂಲ ನಿವಾಸಿ ದ್ರಾವಿಡರನ್ನು ಅಸುರರು/ದಾನವರು/ರಾಕ್ಷಸರೆಂತಲೂ ಕರೆದರು. ದ್ರಾವಿಡರನ್ನು ಖಳನಾಯಕರೆಂತಲುˌ ತಮ್ಮನ್ನು ತಾವು ನಾಯಕರೆಂತಲು ಬಿಂಬಿಸಿಕೊಂಡರು. ವೇದಗಳ ಅನುಸಾರವಾಗಿ ಯಜ್ಞ ಯಾಗಗಳಲ್ಲಿ ಭಾರೀ ಸಂಖ್ಯೆಯ ಪ್ರಾಣಿ ಬಲಿˌ ಗೋವುಗಳ ಬಲಿˌ ಬೆಲೆಬಾಳುವ ವಸ್ತ್ರ ˌ ಅನ್ನˌ ಆಹಾರಗಳನ್ನು ಅಗ್ನಿಗೆ ಆಹುತಿ ನೀಡುವುದುˌ ಕಾಡುಗಳನ್ನು ಹೋಮಕ್ಕಾಗಿ ಕಡಿದು ನಾಶಗೊಳಿಸುವುದುˌ ಆ ದುರಾಚರಣೆಗಳಿಗೆ ವೈಜ್ಞಾನಿಕ ಹಿನ್ನೆಲೆಯ ಕಥೆಗಳನ್ನು ಕಟ್ಟಿ ಜನರನ್ನು ನಂಬಿಸುವುದುˌ ಪರಿಸರ ನಾಶಗೊಳಿಸುವುದು ಈ ರೀತಿಯ ಅನಾಗರಿಕ ಆಚರಣೆಗಳನ್ನು ಆರ್ಯರು ನೆರವೇರಿಸುತ್ತಿದ್ದರು. ಆರ್ಯ ಧರ್ಮ ಮತ್ತು ವೇದಗಳ ನೀತಿಯಿಂದ ಮೂಲನಿವಾಸಿಗಳು ಸಂಪೂರ್ಣ ಜರ್ಜಿತರಾಗಿದ್ದರು.
ಗೌತಮ ಬುದ್ಧನ ಆಗಮನ
ಆರ್ಯರ ಈ ಹಿಂಸಾ ಧರ್ಮದ ವಿರೋಧವಾಗಿ ಗೌತಮ ಬುದ್ಧನು ಶಾಂತಿಯˌ ಅಹಿಂಸೆಯ ಹೊಸ ಮಾನವತ್ವದ ಧರ್ಮವೊಂದನ್ನು ಸ್ಥಾಪಿಸಿದನು. ಆರ್ಯರ ಅನಾಚಾರಗಳಿಂದ ರೋಷಿಹೋಗಿದ್ದ ಮೂಲ ನಿವಾಸಿಗಳು ಬೌದ್ಧ ಧರ್ಮವನ್ನು ಸ್ವೀಕರಿಸಲಾರಂಭಿಸಿದರು. ಆಗ ಬಹುದೊಡ್ಡ ಸಾಮ್ರಾಟರು ಬೌದ್ಧ ಧರ್ಮವನ್ನು ಸ್ವೀಕರಿಸಿ ಅದನ್ನು ಪೋಷಿಸಲಾರಂಭಿಸಿದರು. ಯಜ್ಞಗಳ ಹೆಸರಿನಲ್ಲಿ ಮಾಡಲಾಗುತ್ತಿದ್ದ ಗೋವುˌ ಎತ್ತುಗಳ ಬಲಿಯಿಂದ ಮೂಲನಿವಾಸಿಗಳ ಕ್ರಷಿ ಚಟುವಟಿಕೆಗಳು ನಾಶವಾಗಲಾರಂಭಿಸಿದ್ದವು. ಗೋಮಾಂಸ ಭಕ್ಷಣೆ ಮತ್ತು ಗೋವು/ಎತ್ತುಗಳ ಬಲಿಯನ್ನು ಸಾಮ್ರಾಟ ಅಶೋಕ ನಿಷೇಧಿಸಿದನು. ಭಾರತದಲ್ಲಿ ಅಂದು ಧರ್ಮದ ಹೆಸರಿನಲ್ಲಿ ಆರ್ಯರು ಹುಟ್ಟುಹಾಕಿದ್ದ ಹಿಂಸೆಯನ್ನು ವಿರೋಧಿಸಿಯೇ ಅಹಿಂಸಾ ಧರ್ಮ ಉದಯವಾಗಿತ್ತು. ಇದರಿಂದ ಆರ್ಯರ ಉಪಜೀವನಕ್ಕೆ ಪೆಟ್ಚು ಬೀಳಲಾರಂಭಿಸಿತು. ಇದರಿಂದ ಆರ್ಯ ವೈದಿಕರು ಬಡತನದಲ್ಲಿ ಬಳಲರಾಂಭಿಸಿದರು. ಆದರೂ ಅವರು ತಮ್ಮ ಕುಟಿಲ ನೀತಿಯನ್ನು ನಿಲ್ಲಿಸಲಿಲ್ಲ. ಆಗ ಭಾರತದಲ್ಲಿ ಸಮಾನತೆˌ ಶಾಂತಿˌ ಸಹಬಾಳ್ವೆಯ ವಾತಾವರಣ ನೆಲೆಗೊಂಡಿತ್ತು.
ಆರ್ಯರು ತಮ್ಮ ಧರ್ಮದ ಪುನರುತ್ಥಾನಕ್ಕಾಗಿ ಹಪಹಪಿಸಲಾರಂಭಿಸಿದ್ದರು. ಹೇಗಾದರೂ ಮಾಡಿ ಬೌದ್ಧ ಧರ್ಮವು ದೇಶವ್ಯಾಪಿ ಜನಪ್ರೀಯಗೊಳ್ಳದಂತೆ ತಡೆಯುವುದು ಅವರ ಉದ್ದೇಶವಾಗಿತ್ತು ಮತ್ತು ಅವರಿಗೆ ಅದು ಅನಿವಾರ್ಯವೂ ಆಗಿತ್ತು. ಆಗ ಅವರು ತಮ್ಮ ಕುಟಿಲ ಹುನ್ನಾರಗಳುˌ ಮೂರನೇ ದರ್ಜೆಯ ತಂತ್ರಗಳು ಮತ್ತು ಹಿಂಸೆಯ ಮಾರ್ಗವನ್ನು ಬಳಸಿ ಬೌದ್ಧ ಧರ್ಮವನ್ನು ಹತ್ತಿಕ್ಕುವ ಕೆಲಸ ಆರಂಭಿಸಿದರು. ಅಖಂಡ ಭಾರತದಲ್ಲಿ ಮಗಧ ಸಾಮ್ರಾಜ್ಯದ ರಾಜಧಾನಿ ಪಾಟಲಿಪುತ್ರದಲ್ಲಿ ಮೌರ್ಯ ವಂಶದ ಹತ್ತನೇಯ ಮತ್ತು ಕೊನೆಯ ದೊರೆ ನ್ಯಾಯಪ್ರೀಯ ಬ್ರಹದ್ರತ ಮೌರ್ಯನ ಕೊಲೆಯಾಗುತ್ತದೆ. ಬ್ರಹದ್ರತ ಮೌರ್ಯನ ಆರ್ಯ ಸೇನಾಪತಿ ಪುಷ್ಯಮಿತ್ರ ಶುಂಗನು ಕ್ರಿ. ಪೂ. 185 ರಲ್ಲಿ ಕುಟಿಲ ಹುನ್ನಾರವನ್ನು ಮಾಡಿ ಬ್ರಹದ್ರತ ಮೌರ್ಯನ ಕೊಲೆಯನ್ನು ಮಾಡಿಸಿ ತಾನು ಮಗಧ ಸಾಮ್ರಾಜ್ಯದ ಸಾಮ್ರಾಟನೆಂದು ಘೋಷಿಸಿಕೊಳ್ಳುತ್ತಾನೆ.
ಈ ರೀತಿಯಾಗಿ ಆರ್ಯರ ಕಪಟ ನೀತಿಯಿಂದ ಭಾರತದಲ್ಲಿ ಬೌದ್ಧ ಧರ್ಮದ ಅವಸಾನ ಆರಂಭವಾಗಿ ಮತ್ತೆ ಆರ್ಯ ಸನಾತನಿಗಳ ಪ್ರಾಬಲ್ಯ ಹೆಚ್ಚತೊಡಗುತ್ತದೆ. ಶುಂಗನು ತನ್ನ ರಾಜಸತ್ತೆಯನ್ನು ಉಪಯೋಗಿಸಿ ಪಾಟಲಿಪುತ್ರದಿಂದ
ಸ್ಥಾಲಕೋಟ್ ವರೆಗಿನ ಎಲ್ಲ ಬುದ್ಧ ವಿಹಾರಗಳನ್ನು ಧ್ವಂಸಗೊಳಿಸುತ್ತಾನೆ. ಎಲ್ಲ ಬೌದ್ಧ ಸಾಹಿತ್ಯವನ್ನು ನಾಶಗೊಳಿಸುತ್ತಾನೆ. ಅನೇಕ ಬೌದ್ಧ ಭಿಕ್ಷುಗಳನ್ನು ಹಾಡುಹಗಲೇ ಹತ್ಯೆ ಮಾಡಿಸುತ್ತಾನೆ. ಪುಷ್ಯಮಿತ್ರ ಶುಂಗನು ಬೌದ್ಧ ಧರ್ಮಿಯರ ಮೇಲೆ ಮಾಡಿದ ಅತ್ಯಾಚಾರ ಅಷ್ಟಿಷ್ಟಲ್ಲ. ಪುಷ್ಯಮಿತ್ರ ಶುಂಗನು ತಮ್ಮ ಆಸ್ಥಾನದಲ್ಲಿದ್ದ ಬರಹಗಾರ ಸುಮತಿ ಭಾರ್ಗವನ ಮೂಲಕ ಮನುಸ್ಮ್ರತಿ ಎಂಬ ಕರಾಳ ಗ್ರಂಥವನ್ನು ರಚಿಸಿ ಅದನ್ನು ತನ್ನ ಸಾಮ್ರಾಜ್ಯದ ಸಂವಿಧಾನವಾಗಿ ಅನುಷ್ಠಾನಗೊಳಿಸುತ್ತಾನೆ. ಪಶ್ಚಿಮೋತ್ತರದಲ್ಲಿ ಆಗ ಆಳುತ್ತಿದ್ದ ಯುನಾನಿ ರಾಜ ಮಿಲಿಂದ ಬೌದ್ಧ ಧರ್ಮದ ಅನುಯಾಯಿಯಾಗಿದ್ದ. ಬೌದ್ಧರ ಮೇಲೆ ಶುಂಗ ಮಾಡುತ್ತಿದ್ದ ಅತ್ಯಾಚಾರವನ್ನು ತಿಳಿದಿದ್ದ ರಾಜಾ ಮಿಲಿಂದ ಪಾಟಲಿಪುತ್ರದ ಮೇಲೆ ದಂಡೆತ್ತಿ ಬರುತ್ತಾನೆ. ಪಾಟಲಿಪುತ್ರದ ಪ್ರಜೆಗಳು ಕೂಡ ಶುಂಗನ ವಿರುದ್ಧ ದಂಗೆ ಏಳುತ್ತಾರೆ. ಇದರಿಂದ ಶುಂಗನು ತಲೆ ಮರೆಸಿಕೊಂಡು ಉಜ್ಜಯನಿಯಲ್ಲಿ ಜೈನ ಧರ್ಮದ ಅನುಯಾಯಿಗಳ ಸಹಾಯದಿಂದ ಬದುಕಿಕೊಳ್ಳುತ್ತಾನೆ.
ಈ ಘಟನೆಯ ಕುರಿತು ಸುದ್ದಿಯು ಕಲಿಂಗದ ರಾಜನಾಗಿದ್ದ ಖಾರವೇಲನಿಗೆ ತಿಳಿಯುತ್ತದೆ. ಆಗ ಖಾರವೇಲು ಪಾಟಲಿಪುತ್ರವನ್ನು ವಶಪಡಿಸಿಕೊಂಡು ರಾಜಾ ಮಿಲಿಂದನನ್ನು ಪಶ್ಚಿಮೋತ್ತರದ ಕಡೆಗೆ ಓಡಿಸುತ್ತಾನೆ. ಆನಂತರ ಪುಷ್ಯಮಿತ್ರ ಶುಂಗನು ತನ್ನ ಅನುಯಾಯಿಗಳೊಡಗೂಡಿ ಪಾಟಲಿಪುತ್ರ ಮತ್ತು ಶಾಲಕೋಟೆಯ ಮಧ್ಯದಲ್ಲಿ ಅಂದಿನ ಬೌದ್ಧ ನಗರವಾಗಿದ್ದ ಸಾಕೇತವನ್ನು ರಾಜಧಾನಿ ಮಾಡಿಕೊಳ್ಳುತ್ತಾನೆ. ಆಮೇಲೆ ಆತ ತನ್ನನ್ನು ತಾನು ಅಯೋಧ್ಯೆಯ ರಾಜ ರಾಮನೆಂದು ಕರೆದುಕೊಳ್ಳುತ್ತಾನೆ ಹಾಗು ತನ್ನ ಆಸ್ಥಾನದಲ್ಲಿದ್ದ ಕವಿ ವಾಲ್ಮಿಕಿಯ ಮೂಲಕ ರಾಮಾಯಣ ಎಂಬ ಕಾಲ್ಪನಿಕ ಕಥೆಯನ್ನು ಬರೆಸುತ್ತಾನೆ. ನಂತರ ಸಾಕೇತ್ ನಗರದ ಹೆಸರನ್ನು ಬದಲಾಯಿಸಿ ಅಯ್ಯೋಧ್ಯೆ ಎಂದು ಮರುನಾಮಕರಣ ಮಾಡುತ್ತಾನೆ. ಅಯೋಧ್ಯೆ ಅಂದರೆ ಯುದ್ಧರಹಿತ ಎಂದು ಅರ್ಥ. ಅಂದರೆ ಯುದ್ಧವಿಲ್ಲದೆ ನಿರ್ಮಿಸಿದ ರಾಜಧಾನಿ ಎಂದು.
ಪುಷ್ಯಮಿತ್ರ ಶುಂಗನು ರಾಮನ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತ ಒಬ್ಬ ಬೌದ್ಧ ಭಿಕ್ಷುವಿನ ತಲೆ ತಂದವರಿಗೆ 100 ಚಿನ್ನದ ನಾಣ್ಯಗಳ ಬಹುಮಾನವನ್ನು ಘೋಷಿಸುತ್ತಾನೆ. ಬಹುಮಾನದ ಆಶೆಗಾಗಿ ಜನರು ತೋರಿಸಿದ ತಲೆಯನ್ನೇ ಮತ್ತೆ ಮತ್ತೆ ತೋರಿಸಿ ಬಹುಮಾನ ಪಡೆಯುವ ಕಾರ್ಯವೂ ನಡೆಯುತ್ತದೆ. ಆಗ ಶುಂಗನು ಒಂದು ಬಹುದೊಡ್ಡ ಬಂಡೆಯನ್ನು ನಿರ್ಮಿಸಿ ಅದಕ್ಕೆ ಆ ತಲೆಯನ್ನು ಬಡಿದು ಅದರ ಮುಖವನ್ನು ವಿರೂಪಗೊಳಿಸುವ ಸಂಚು ಮಾಡುತ್ತಾನೆ. ಆ ತಲೆಗಳನ್ನು ಘಾಘರಾ ನದಿಯಲ್ಲಿ ಎಸೆಯುವಂತೆ ನಿಯಮ ರೂಪಿಸಿದ್ದ. ಆಗ ಆ ನದಿಯು ಬೌದ್ಧ ಭಿಕ್ಷುಗಳ ತಲೆಯಿಂದ ತುಂಬಿ ತುಳುಕುತ್ತದೆ. ಆಗ ಆ ಘಾಘರಾ ನದಿಯನ್ನು ಜನರು ಸರ್-ಯುಕ್ತ (ತಲೆಗಳಿಂದ ತುಂಬಿದ) ನದಿ ಎಂದುˌ ಮುಂದೆ ಆ ಶಬ್ಧವು ಅಪಭ್ರಂಶವಾಗಿ ಸರಯೂ ನದಿ ಎಂದು ಕರೆಯಲ್ಪಡುತ್ತದೆ. ಈ ರೀತಿಯ ಆಮೀಷಗಳಿಂದ ಇಡೀ ದೇಶದಲ್ಲಿ ಬೌದ್ಧ ಧರ್ಮವನ್ನು ಪುಷ್ಯಮಿತ್ರ ಶುಂಗನು ನಾಶಗೊಳಿಸುತ್ತಾನೆ.
ಈ ಸರಯೂ ನದಿಯ ದಡದ ಮೇಲೆ ಕುಳಿತು ಆರ್ಯ ವೈದಿಕ ಕವಿ ವಾಲ್ಮಿಕಿಯು ರಾಮಾಯಣವೆಂಬ ಕಾಲ್ಪನಿಕ ಮಹಾಕಾವ್ಯವನ್ನು ಬರೆಯುತ್ತಾನೆ. ಅಲ್ಲಿ ರಾಮನ ರೂಪದಲ್ಲಿ ಶುಂಗ ಮತ್ತು ರಾವಣನ ರೂಪದಲ್ಲಿ ಮೌರ್ಯ ಸಾಮ್ರಾಟನನ್ನು ಚಿತ್ರಿಸಲಾಗುತ್ತದೆ. ಇದೇ ಕಾಲಘಟ್ಟದಲ್ಲಿ ಮಹಾಭಾರತˌ ಪುರಾಣಗಳುˌ ಸ್ಮ್ರತಿಗಳುˌ ಮತ್ತಿತರ ಅನೇಕ ಕಾಲ್ಪನಿಕ ವೈದಿಕ ಗ್ರಂಥಗಳು ರಚಿಸಲ್ಪಡುತ್ತವೆ. ಬೌದ್ಧ ಭಿಕ್ಷುಗಳ ಬಹಿರಂಗ ಹತ್ಯೆಯ ನಂತರ ಬಹುತೇಕ ಬೌದ್ಧವಿಹಾರಗಳು ಖಾಲಿ ಉಳಿಯುತ್ತವೆ. ಆಗ ಮುಂದಿನ ಪೀಳಿಗೆಗೆ ಬೌದ್ಧ ಧರ್ಮದ ಬಗ್ಗೆ ತಿಳಿಯಬಾರದೆಂದು ಅವುಗಳನ್ನೆಲ್ಲ ಮಂದಿರಗಳಾಗಿ ಮಾರ್ಪಡಿಸಲಾಗುತ್ತದೆ. ಆನಂತರ ಅಲ್ಲಿ ದೇವತೆಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರ್ಯರು ತಮ್ಮ ಉಪಜೀವನಕ್ಕೆ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಈ ರೀತಿಯಾಗಿ ಬೌದ್ಧ ವಿಹಾರಗಳನ್ನು ಮಂದಿರವಾಗಿಸಿದ ಆರ್ಯರು ಈ ದೇಶದ ಮೂಲನಿವಾಸಿಗಳನ್ನೇ ಆ ಮಂದಿರದೊಳಗೆ ಪ್ರವೇಶಿಸುವುದು ನಿಷೇಧಿಸುತ್ತಾರೆ.
ಆಗ ವರ್ಣ ವ್ಯವಸ್ಥೆಯ ಆಚೆಗೆ ಯೋಚಿಸಿದ ಆರ್ಯರು ಮೂಲನಿವಾಸಿಗಳಲ್ಲಿ ಜಾತಿ ವ್ಯವಸ್ಥೆಯನ್ನು ಹುಟ್ಟುಹಾಕಿ ಶೋಷಣೆಗಿಳಿಯುತ್ತಾರೆ. ಅಂದಾಜು 6000 ಜಾತಿಗಳನ್ನು ಮತ್ತು ಅವುಗಳಲ್ಲಿ 72000 ಉಪಜಾತಿಗಳನ್ನು ಸ್ರಷ್ಠಿಸುತ್ತಾರೆ. ಈ ಜಾತಿ ಮತ್ತು ಉಪಜಾತಿಗಳು ದೇವ ನಿರ್ಮಿತವೆಂದು ಪ್ರಚಾರ ಮಾಡುತ್ತಾರೆ. ಹೀಗೆ ಮಾಡಿದ್ದರ ಹಿಂದೆ ಆರ್ಯರ ಬಹುದೊಡ್ಡ ಕುಟಿಲ ನೀತಿ ಇರುತ್ತದೆ. ಮುಂದೆಂದಿಗೂ ಈ ಮೂಲನಿವಾಸಿಗಳು ಬೌದ್ಧ ಧರ್ಮದ ಅಡಿಯಲ್ಲಿ ಒಗ್ಗಟ್ಟಾಗಿ ಆರ್ಯರ ಮೇಲೆ ಮುಗಿಬೀಳಬಾರದೆಂದು ಜಾತಿ ಉಪಜಾತಿಗಳಾಗಿ ವಿಂಗಡಿಸಿ ಒಡಕನ್ನು ನಿರ್ಮಿಸುತ್ತಾರೆ. ಆ ಮೂಲಕ ಭಾರತೀಯ ಸಮಾಜದ ಮೇಲೆ ತಮ್ಮ ನಿಯಂತ್ರಣವನ್ನು ಖಾಯಂಗೊಳಿಸಿಕೊಳ್ಳುತ್ತಾರೆ.
ಬ್ರಹದ್ರತ ಮೌರ್ಯನ ಅವಸಾನಕ್ಕಿಂತ ಪೂರ್ವದಲ್ಲಿ ಭಾರತದಲ್ಲಿ ಮಂದಿರ ಸಂಸ್ಕ್ರತಿಯೇ ಅಸ್ಥಿತ್ವದಲ್ಲಿರಲಿಲ್ಲ. ಬೌದ್ಧ ವಿಹಾರಗಳೇ ಮಂದಿರ ಸಂಸ್ಕ್ರತಿಗೆ ಮೂಲ ಪ್ರೇರಣೆಯಾಗುತ್ತವೆ. ದೇವಾಲಯಗಳ ಎದುರಿಗೆ ಕಲ್ಲಿನ ಮೇಲೆ ತೆಂಗಿನ ಕಾಯಿ ಒಡೆಯುವ ಪದ್ದತಿಯು ಬೌದ್ಧ ಭಿಕ್ಷುಗಳ ತಲೆಯನ್ನು ಬಂಡೆಗೆ ಅಪ್ಪಳಿಸುವ ಶುಂಗನ ಕೊಲೆಗಡುಕ ಪರಂಪರೆಯ ಸಂಕೇತವಾಗಿ ಆರ್ಯರು ಆಚರಿಸಲಾರಂಭಿಸುತ್ತಾರೆ.
ಶ್ರೇಷ್ಠ ವಿಚಾರವಾದಿ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ಸತ್ಯ ರಾಮಾಯಣವೆಂಬ ಗ್ರಂಥವನ್ನು ಬರೆದಿದ್ದಾರೆ. ಆ ಪುಸ್ತಕವನ್ನು ಲಲಾಯಿ ಸಿಂಗ್ ಯಾದವ್ ಅವರು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಆದರೆ ಅದನ್ನು ಉತ್ತರ ಪ್ರದೇಶ ಸರಕಾರ ನಿಶೇಧಿಸಿದೆ. ಆ ಮೊಕದ್ದಮೆಯು ಅಲಹಬಾದ್ ಉಚ್ಛ ನ್ಯಾಯಾಲಯದಲ್ಲಿ ಕೇಸ್ ಸಂಖ್ಯೆ 412/1970 ವರ್ಷದಲ್ಲಿ ದಾಖಲಾಗಿದ್ದು ಅದು ಸರ್ವೋಚ್ಛ ನ್ಯಾಯಾಲಯದಲ್ಲಿ 1971 -1976 ರ ಮಧ್ಯದಲ್ಲಿ ಮನವಿ ಸಂಖ್ಯೆ 291/1971 ವಿಚಾರಣೆ ನಡೆದಿದೆ. ನ್ಯಾಯಮೂರ್ತಿಗಳಾದ ಶ್ರೀ ಪಿ ಎನ್ ಭಗವತಿˌ ಶ್ರೀ ವಿ ಆರ್ ಕ್ರಷ್ಣಯ್ಯರ್ˌ ಶ್ರೀ ಮುತ್ಜಾ ಫಾಜಿಲ್ ಅಲಿಯವರನ್ನೊಳಗೊಂಡ ಸರ್ವೋಚ್ಛ ನ್ಯಾಯಾಲಯದ ನ್ಯಾಯಪೀಠವು ದಿನಾಂಕ 16-9-1976 ರಂದು ತೀರ್ಪನ್ನು ಘೋಷಿಸಿದ್ದು ಅದು ಪೆರಿಯಾರ ಅವರು ಬರೆದ ಸತ್ಯ ರಾಮಾಯಣ ಗ್ರಂಥವು ಸತ್ಯ ಸಂಗತಿಯನ್ನು ಒಳಗೊಂಡಿದೆ ಎಂದಿದೆ. ಪೆರಿಯಾರ್ ಅವರು ಈವರೆಗೆ ದೇಶದಲ್ಲಿ ಲಭ್ಯವಿರುವ ಎಲ್ಲ ಬಗೆಯ ರಾಮಾಯಣ ಗ್ರಂಥಗಳು ಕಾಲ್ಪನಿಕ ಆಧಾರದಲ್ಲಿ ಬರೆದಿದ್ದು ಅವುಗಳಿಗೆ ಯಾವುದೇ ಐತಿಹಾಸಿಕ ಅಥವ ಪುರಾತತ್ವ ಆಧಾರಗಳಿಲ್ಲವೆಂದು ಸತ್ಯ ರಾಮಾಯಣದಲ್ಲಿ ವಾದಿಸಿದ್ದಾರೆ.
ಈ ರೀತಿಯಾಗಿ ಮೂಲನಿವಾಸಿಗಳ ಸಂಸ್ಕ್ರತಿˌ ಇತಿಹಾಸವನ್ನು ನಾಶಗೋಳಿಸಿ ಕಲ್ಪನೆಯ ಆಧಾರದಲ್ಲಿ ದೇವರುˌ ಧರ್ಮಗಳನ್ನು ಸ್ರಷ್ಠಿಸಿದ ಸನಾತನಿ ಆರ್ಯರು ಭಾರತದ ಮೂಲ ನಿವಾಸಿಗಳನ್ನು ವಂಚಿಸಿದ್ದಾರೆ. ಭಾರತವು ದೇವರು ಮತ್ತು ಧರ್ಮಗಳ ಆಧಾರದಲ್ಲಿ ಬಿತ್ತಲಾದ ಮೌಢ್ಯಗಳಿಂದ ಜಗತ್ತಿನಲ್ಲೇ ಅತ್ಯಂತ ದುರ್ಬಲ ದೇಶವಾಗಿ ಮಾರ್ಪಾಟಾಗಿದೆ. ದೇಶದ ಜನರನ್ನು ಜಾತಿಯಾಧಾರದಲ್ಲಿ ವಿಂಗಡಿಸಿ ಗುಲಾಮರನ್ನಾಗಿಸಿದ ಆರ್ಯರು ಅವರನ್ನು ಅಕ್ಷರˌ ಸಂಪತ್ತು ˌ ಅಧಿಕಾರದಿಂದ ವಂಚಿಸಿದ್ದಾರೆ. ಹೀಗಾಗಿ ಭಾರತವು ಅತ್ಯಂತ ದುರ್ಬಲ ದೇಶವಾಗಿ ರೂಪಾಂತಗೊಂಡಿದೆ.
ಭಾರತದ ಮೂಲನಿವಾಸಿಗಳು ತಮ್ಮ ನೈಜ ಇತಿಹಾಸವನ್ಮು ಇಂದು ತಿಳಿದುಕೊಳ್ಳುವ ಅಗತ್ಯವಿದೆ. ಸನಾತನಿ ಆರ್ಯರ ಅಧಿಕಾರ ಹಪಹಪಿತನˌ ಒಡೆದಾಳುವ ನೀತಿˌ ತಾರತಮ್ಯ ನೀತಿ ಎಲ್ಲವು ಇಲ್ಲಿನ ಮೂಲ ನಿವಾಸಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಈ ನೆಲದ ಮೂಲ ನಿವಾಸಿಗಳನ್ನು ರಕ್ಷಿಸಲು ಗೌತಮ ಬುದ್ಧನಾಗಲಿˌ ಬಸವಣ್ಣನಾಗಲಿˌ ಬಾಬಾಸಾಹೇಬರಾಗಲಿ ಈಗ ಮತ್ತೆ ಹುಟ್ಟಿ ಬರಲಾರರು. ಮೂಲ ನಿವಾಸಿಗಳು ಈ ನೆಲದ ನೈಜ ಇತಿಹಾಸವನ್ನು ತಿಳಿದುಕೊಂಡು ಸನಾತನಿ ಆರ್ಯರ ಕುಟಿಲ ಹುನ್ನಾರಗಳನ್ನು ಎದುರಿಸಿ ಗೆಲ್ಲಬೇಕಿದೆ. ಈಗ ಸನಾತನಿ ಆರ್ಯರು ಮತ್ತೆ ರಾಷ್ಟ್ರಭಕ್ತಿಯ ವೇಶ ಹಾಕಿದ್ದಾರೆ. ಮುಸ್ಲಿಂರ ಹೆದರಿಕೆ ತೋರಿಸಿ ಅಧಿಕಾರಕ್ಕೇರಿ ಮತ್ತೆ ಮೂಲನಿವಾಸಿಗಳನ್ನು ಮೀಸಲಾತಿˌ ಜನತಂತ್ರ ವ್ಯವಸ್ಥೆ ಮತ್ತು ಸಂವಿಧಾನಬದ್ಧ ಸೌಲಭ್ಯಗಳಿಂದ ವಂಚಿಸುತ್ತಿದ್ದಾರೆ. ಹಿಂದೂ ರಾಷ್ಟ್ರ ನಿರ್ಮಾಣದ ಆಮೀಷಗಳಿಗೆ ನಮ್ಮ ಮೂಲನಿವಾಸಿ ಯುವ ಜನತೆಯ ಬೌದ್ಧಿಕ ಸಾಮರ್ಥ್ಯವನ್ನು ನಾಶಗೊಳಿಸುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೇರಿ ತಮ್ಮ ಸನಾತನ ಆರ್ಯ ಧರ್ಮವನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಮೂಲನಿವಾಸಿಗಳೆಲ್ಲರೂ ಜಾಗ್ರತರಾಗಬೇಕು ಮತ್ತು ನಮ್ಮವರನ್ನು ಜಾಗ್ರತೆಗೊಳಿಸಬೇಕಿದೆ.