ಮುಗಳಖೋಡದ ಬ.ನೀ.ಕುಲಿಗೋಡ ಹೈಸ್ಕೂಲ್ ನ ಫಲಿತಾಂಶ ಶೇ 97.54%

Share the Post Now

ವರದಿ: ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ

ಮುಗಳಖೋಡ : ಪಟ್ಟಣದ ಪ್ರತಿಷ್ಠಿತ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಬ.ನಿ. ಕುಲಿಗೋಡ ಹೈಸ್ಕೂಲ್ ನ ಸನ್ 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದ್ದು. ಶಾಲೆಯ ಫಲಿತಾಂಶ ಶೇ.97.54% ರಷ್ಟಾಗಿದೆ.


ಕುಮಾರಿ. ತೇಜಸ್ವಿನಿ ಪತ್ತಾರ 611 ಅಂಕ ಗಳಿಸಿ ಪ್ರಥಮ ಸ್ಥಾನ (97.76%), ಕುಮಾರಿ. ಲಕ್ಷ್ಮೀ ಮಾದಿಹಳ್ಳಿ 604 ಅಂಕ ಗಳಿಸಿ ದ್ವಿತೀಯ ಸ್ಥಾನ ದ್ವಿತೀಯ (96.64%) ಹಾಗೂ ಕುಮಾರಿ. ರಾಜಶ್ರೀ ಸಂದ್ರಿಮನಿ 601 ಅಂಕ ಗಳಿಸಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಪರೀಕ್ಷೆಗೆ ಕುಳಿತ 204 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ 121 ವಿದ್ಯಾರ್ಥಿಗಳು ಪ್ರಥಮ ದರ್ಜೆ, 25 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ 03 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು ಶಾಲೆಯ ಒಟ್ಟು ಫಲಿತಾಂಶ ಶೇ
97.54% ರಷ್ಟಾಗಿದೆ. ಸಾಧನೆ ಗೈದ ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಶ್ರೀ ಸಂಜಯ ಕುಲಿಗೋಡ , ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅದರೊಂದಿಗೆ
ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಸ್.ಮಧಾಳೆ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರನ್ನು ಮತ್ತು ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸಿದ ಎಲ್ಲ ಶಿಕ್ಷಕರನ್ನು ಹಾಗೂ ಸಾಧನೆ ಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಡಾ. ಸಿ ಬಿ ಕುಲಿಗೋಡ ಅವರು ಸಿಹಿ ಹಂಚಿ ಅಭಿನಂದಿಸಿದರು.

Leave a Comment

Your email address will not be published. Required fields are marked *

error: Content is protected !!