ಬೆಳಗಾವಿ :ಪಟ್ಟಣದ ಹಾರೂಗೇರಿ ಎಸ್ ಪಿ ಎಮ್ ಮಂಡಳ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ತಾಪಕರಾದ ಬ್ಯಾರಿಸ್ಟರ್ ಅಮರ ಸಿಂಹ ಅಣ್ಣಾ ಪಾಟೀಲ್ ಭಾಗವಹಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರ ಮರಣವಪ್ಪಿದ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿ, ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ, ಅಧ್ಯಕ್ಷೀಯ ಮಾತುಗಳನ್ನಾಡಿದರು.
ಇವತ್ತಿನ ಯುವ ರೋವರ್ಸ್ ಗಳ ಪಾತ್ರ ಮುಖ್ಯ ಏಕೆಂದರೆ ದೇಶ ಕಟ್ಟುವಲ್ಲಿ ಮತ್ತು ರಕ್ಷಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಾರೆ.ಇವತ್ತಿನ ಯುವ ನಾಯಕರೆ, ನಾಳಿನ ಪ್ರಜೆಗಳು ,ಹೀಗಾಗಿ ಇವತ್ತಿನ ಈ ಪತ ಸಂಚಲನ ಕಾರ್ಯಕ್ರಮ ದಲ್ಲಿ ಅವರ ಶಿಸ್ತು, ಸಮಯ ಪಾಲನೆ, ಡ್ರೆಸ್ ಕೊಡ್ ತುಂಬಾ ಶಿಸ್ತು ಬದ್ದವಾಗಿದ್ದವು ಎಂದು ಕೊಂಡಾಡಿದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಪದವಿ ಪೂರ್ವ ಕಾಲೇಜಿನ ಪ್ರಚಾರ್ಯರಾದ ಶ್ರೀಎಮ್ ವಿ ಕೊಳೆಕರ್ ಮಾತನಾಡಿ ಸ್ವಾತಂತ್ಯ ಕೇವಲ ಒಬ್ಬರಿಂದ ಸಿಕ್ಕಿಲ್ಲ, ಹಲವಾರು ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಅಂತವರುಗಲ್ಲಿ ಮಹಾತ್ಮಾ ಗಾಂಧೀಜಿ, ಶುಭಾಶಚಂದ್ರ ಬೋಸ, ಭಗತಸಿಂಗರ ತ್ಯಾಗ ಬಲಿದಾನ ಸ್ಮರಣಿಯ ಎಂದರು.ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಎಲ್ಲರನ್ನು ರಂಜಿಸಿದರು.ಇನ್ನುಳಿದಂತೆ ಸಮಾರಂಭದಲ್ಲಿ ಹಾ ವಿ ಸಂಯುಕ್ತ ಪದವಿ ಪೂರ್ವ ಮತ್ತು ಪದವಿ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ /ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೆ ಎಸ್ ಭಜಂತ್ರಿ ನಡೆಸಿ ಕೊಟ್ಟರು. ಪ್ರಾಥನೆ, ಸ್ವಾಗತ, ಮತ್ತು ನಿರೂಪಣೆಯನ್ನು ಶ್ರೀ ಹೆಚ್ ಎಸ್ ಕುರಿಯವರ ಅಚ್ಚುಕಟ್ಟಾಗಿ ನಿರ್ವಹಿಸಿ, ವಂದಿಸಿದರು
ವರದಿ :ಡಾ.ವಿಲಾಸ್ ಕಾಂಬಳೆ, ಕನ್ನಡ ಅಧ್ಯಾಪಕರು,ಹಾರೂಗೇರಿ





